Advertisement

Prize Distribution; ಛಲದಿಂದ ಬದುಕಿನಲ್ಲಿ ಏಳಿಗೆ ಸಾಧ್ಯ: ಮಂಜುಳಾ ಹೆಬ್ಬಾರ್‌

12:56 AM Jan 07, 2024 | Team Udayavani |

ಉಡುಪಿ: ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಹೊಸ ಸಾಧನೆ ಮಾಡುವ ಛಲ ಬೆಳೆಸಿಕೊಂಡರೆ ಯಶಸ್ಸು ಪಡೆಯಲು ಸಾಧ್ಯ ಎಂದು ಅಪ್ನಾ ಹಾಲಿಡೇಸ್‌ನ ಮುಖ್ಯ ಕಾರ್ಯನಿರ್ವಾಹಕಿ ಮಂಜುಳಾ ನಾಗರಾಜ್‌ ಹೆಬ್ಬಾರ್‌ ಹೇಳಿದರು.

Advertisement

ಜಯಲಕ್ಷ್ಮೀ ಸಿಲ್ಕ್ಸ್ ಸಹಯೋಗದಲ್ಲಿ “ಉದಯವಾಣಿ’ ವತಿಯಿಂದ ಚಿತ್ತಾರ ಕಂಫ‌ರ್ಟ್ಸ್ ನಲ್ಲಿ ಶನಿವಾರ ಆಯೋಜಿ ಸಿದ್ದ “ರೇಷ್ಮೆ ಜತೆ ದೀಪಾವಳಿ’ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.

ಮಹಿಳಾ ಸಬಲೀಕರಣಕ್ಕೆ ಉದಯವಾಣಿ ಪತ್ರಿಕೆ ಉತ್ತಮ ವೇದಿಕೆ ಕಲ್ಪಿಸುತ್ತಿ ರುವುದು ಸ್ವಾಗತಾರ್ಹ ಎಂದರು.

ಚಿತ್ತಾರ ಕಂಫ‌ರ್ಟ್ಸ್ ನ ಮಾಲಕಿ ರಾಧಾ ಗೋಪಿನಾಥ್‌ ಕಾಮತ್‌ ಮಾತನಾಡಿ, ಮನೆಕೆಲಸವಷ್ಟೇ ಅಲ್ಲದೆ ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ತೊಡಗಿಸಿಕೊಂಡು ಸಾಧಿಸಬೇಕು ಎಂದು ಹೇಳಿದರು.

ಜಯಲಕ್ಷ್ಮೀ ಸಿಲ್ಕ್ಸ್ ಪಾಲುದಾ ರರಾದ ಜಯಲಕ್ಷ್ಮೀ ವೀರೇಂದ್ರ ಹೆಗ್ಡೆ ಮಾತನಾಡಿ, ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವುದು ಅಗತ್ಯ. ಕುಟುಂಬಸ್ಥರು, ಸ್ನೇಹಿತರೊಂದಿಗೆ ಬೆರೆತು ಫೋಟೊ ತೆಗೆಸಿ ಕೊಳ್ಳುವುದೇ ಒಂದು ಸಾಧನೆ ಎಂದರು.

Advertisement

ಶ್ರೀಕೃಷ್ಣ ಮಠದ ಪರ್ಯಾಯ ಹಾಗೂ ರಾಮೋತ್ಸವದ ಈ ಸಂದರ್ಭದಲ್ಲಿ ಇಂತಹ ಪ್ರಶಸ್ತಿಗಳನ್ನು ಪಡೆದ ವಿಜೇತರಿಗೆ ಇದು ಸದಾ ಚಿರಸ್ಮರಣೀಯ ದಿನ. ಸಿನೆಮಾದ ಟ್ರೈಲರ್‌ನಂತೆ ಚಿತ್ರಗಳು ಒಂದಕ್ಕಿಂತ ಒಂದು ವಿಭಿನ್ನವಾಗಿತ್ತು ಎಂದು ಜಯಲಕ್ಷ್ಮೀ ಸಿಲ್ಕ್ಸ್ ನ‌ ಅಪರ್ಣಾ ರವೀಂದ್ರ ಹೆಗ್ಡೆ ಹೇಳಿದರು.

ಮಣಿಪಾಲ ಮೀಡಿಯಾ ನೆಟ್‌ವಕ್ಸ್‌ ಲಿಮಿಟೆಡ್‌ನ‌ ಉಪಾಧ್ಯಕ್ಷ (ಹಣಕಾಸು ವಿಭಾಗ) ಸುದರ್ಶನ್‌ ಶೇರಿಗಾರ್‌ ಮಾತನಾಡಿ, ಓದುಗರ ಬೆಂಬಲಕ್ಕೆ ಉದಯವಾಣಿ ಪತ್ರಿಕೆ ಸದಾ ಚಿರಋಣಿ. ಪತ್ರಿಕೆ ಆಯೋಜಿಸುವ ಸ್ಪರ್ಧೆಗಳಲ್ಲಿ ಓದುಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊ ಳ್ಳುತ್ತಿರುವುದು ಖುಷಿ ನೀಡಿದೆ. ಪತ್ರಿಕೆ ಹಾಗೂ ಓದುಗರ ಬಾಂಧವ್ಯ ಹೀಗೆಯೇ ಮುಂದುವರಿಯಲಿ ಎಂದರು.

ಉದಯವಾಣಿ ಸಂಪಾದಕ ಅರವಿಂದ ನಾವಡ ಪ್ರಸ್ತಾವನೆಗೈದು, ಪತ್ರಿಕೆ ಆಯೋಜಿಸುವ ಎಲ್ಲ ಸ್ಪರ್ಧೆ ಗಳೂ ಪರಂಪರೆ ಮತ್ತು ಸಂಸ್ಕೃ ತಿಯನ್ನು ಬೆಸೆಯುವಂಥದ್ದು. ಸಂಪ್ರ ದಾಯದೊಂದಿಗೆ ಸಂಭ್ರಮ ಇಂತಹ ಸ್ಪರ್ಧೆಗಳಿಂದ ಲಭಿಸುತ್ತದೆ. ಸಹಸ್ರಾರು ಸಂಖ್ಯೆಯಲ್ಲಿ ಸ್ಫರ್ಧಾಳುಗಳು ಭಾಗವಹಿ ಸುತ್ತಿರುವುದೇ ಇದಕ್ಕೆ ಸಾಕ್ಷಿ ಎಂದರು.

ಎಂಎಂಎನ್‌ಎಲ್‌ ಉಪಾಧ್ಯಕ್ಷ (ನ್ಯಾಶನಲ್‌ ಹೆಡ್‌-ಮ್ಯಾಗಜಿನ್‌ ಆ್ಯಂಡ್‌ ಸ್ಪೆಶಲ್‌ ಇನೀಶಿಯೇಟಿವ್ಸ್‌) ರಾಮಚಂದ್ರ ಮಿಜಾರು ಸ್ವಾಗತಿಸಿ, ಹಬ್ಬ ಅಂದರೆ ಸಂಭ್ರಮ,ಸಡಗರ. ಆ ಸಡಗರಕ್ಕೊಂದು ಪರಿಕಲ್ಪನೆ ನೀಡಿ ಸಂಪ್ರ ದಾಯವನ್ನು ಬೆಸೆಯುವ ಕೆಲಸವನ್ನು ಪತ್ರಿಕೆ ಮುಂದುವರಿಸಲಿದೆ ಎಂದರು.

ಅಮಿತಾ ಆಚಾರ್ಯ, ಕೀರ್ತನ್‌ ಉಪಾಧ್ಯ, ತೀರ್ಪುಗಾರರಾಗಿದ್ದ‌ರು. ಉಡುಪಿ ಮಾರುಕಟ್ಟೆ ವಿಭಾಗದ ರೀಜನಲ್‌ ಮ್ಯಾನೇಜರ್‌ ರಾಧಾಕೃಷ್ಣ ಕೊಡವೂರು ಬಹುಮಾನಿತರ ಪಟ್ಟಿ ವಾಚಿಸಿದರು. ಉದಯವಾಣಿ ಮಣಿಪಾಲ ಆವೃತ್ತಿಯ ಪ್ರಸರಣಾಧಿಕಾರಿ ಅಜಿತ್‌ ಭಂಡಾರಿ ವಂದಿಸಿದರು.

ವಿಜೇತರ ವಿವರ
ಸುಜಾತಾ ಮತ್ತು ಕುಟುಂಬ ಹೆಬ್ರಿ (ಪ್ರ.), ಸುಶ್ಮಿತಾ ಮತ್ತು ತಂಡ ಎರ್ಮಾಳು ತೆಂಕ (ದ್ವಿ.), ಪ್ರಜಾಕ್ತ ಮತ್ತು ತಂಡ ಮಣ್ಣಗುಡ್ಡೆ (ತೃ.), ಸಮಾಧಾನಕರ: ಶ್ವೇತಾ ಧೀರಜ್‌ ಮತ್ತು ಕುಟುಂಬ ಮಂಗಳೂರು, ಸುಮಾ ಮತ್ತು ರಕ್ಷಿತಾ ಕುಟುಂಬಸ್ಥರು ಕೊಲ್ಲೂರು, ಶ್ರದ್ಧಾ ಮತ್ತು ತಂಡ ಮಣ್ಣಗುಡ್ಡೆ, ಅನುಪಮಾ ಮತ್ತು ಕುಟುಂಬ ಅಂಬಲಪಾಡಿ, ಸ್ವಾತಿ ಮತ್ತು ತಂಡ ವಿಟ್ಲ, ರೂಪಾ ಕಾರ್ಕಳ, ಮಂಜುಳಾ ಸುಬ್ರಹ್ಮಣ್ಯ ಪುತ್ತೂರು, ಶಾಂತಾ ಜಾಲ್ಸೂರು ಸುಳ್ಯ, ಅಮಿತಾ ಗಿರೀಶ್‌ ಮತ್ತು ಗೆಳತಿಯರು ಗುಂಡಿಬೈಲು, ಆಶಾಲತಾ ಮತ್ತು ಸ್ನೇಹಿತೆಯರು ಕೋಟೇಶ್ವರ.

ಪ್ರಥಮ ಬಹುಮಾನ ಗಳಿಸಿರುವುದಕ್ಕೆ ನಿಜಕ್ಕೂ ಖುಷಿಯಾಗುತ್ತಿದೆ. ಇದಕ್ಕಾಗಿ ಹಲವು ದಿನಗಳಿಂದ ಕಾರ್ಯಯೋಜನೆ ರೂಪಿಸಿದ್ದೆವು. ಬಹುಮಾನ ಸಿಕ್ಕಿದ್ದು ಇನ್ನಷ್ಟು ಉತ್ಸಾಹ ತುಂಬಿದೆ.
-ಸೌಮ್ಯಾ, ಹೆಬ್ರಿ

ಬಾಲ್ಯದಲ್ಲಿ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆವು. ದೀಪ, ಹಣತೆ ಇಟ್ಟು ಸಾಂಪ್ರದಾಯಿಕ ರೀತಿಯಲ್ಲಿ ಈ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆದ್ದಿರುವುದಕ್ಕೆ ಖುಷಿಯಾಗಿದೆ.
-ಅಮಿತಾ, ಉಡುಪಿ

ಹೊಸ-ಹೊಸ ಪರಿಕಲ್ಪನೆಯಡಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಮಗೆ ಭಾಗಿಯಾಗಲು ಅವಕಾಶ ನೀಡುತ್ತಿರುವುದಕ್ಕೆ ಧನ್ಯವಾದಗಳು.
-ದೀಪಿಕಾ , ಉಡುಪಿ

ಮೊದಲ ಬಾರಿಗೆ ಬಹುಮಾನ ಪಡೆಯುತ್ತಿರುವುದು ಬಹಳಷ್ಟು ಖುಷಿ ನೀಡಿದೆ. ಪತ್ರಿಕೆ ಮತ್ತಷ್ಟು ಕಾರ್ಯ ಕ್ರಮಗಳನ್ನು ಆಯೋಜಿಸಿ ಓದುಗರು ಇದರಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮಾಡಲಿ.
-ವೀಣಾ, ವಿಟ್ಲ

ಬಹುಮಾನ ಲಭಿಸಿರುವುದು ಖುಷಿ ನೀಡಿದೆ. ಆಚರಣೆಗಳೊಂದಿಗೆ ಸಂಪ್ರದಾಯವನ್ನು ಬೆಸೆಯುವ ವಿಭಿನ್ನ ಪರಿಕಲ್ಪನೆಯಿದು.
-ಕಲ್ಪನಾ ಭಾಸ್ಕರ್‌

ಫೋಟೋ ತೆಗೆಯುವುದೇ ಒಂದು ಸಂಭ್ರಮಾಚರಣೆ. ಮನೆಮಂದಿ ಸಹಿತ ಸ್ನೇಹಿತರು ಸಂತೋಷದಿಂದ ಭಾಗವಹಿಸುತ್ತೇವೆ. ಈ ಮೂಲಕ ಕುಟುಂಬ ಹಾಗೂ ಸ್ನೇಹಿತರು ಮತ್ತಷ್ಟು ಹತ್ತಿರವಾಗಿಸಿದೆ.
-ಪ್ರಜ್ಞಾ , ಮಂಗಳೂರು

ಹಬ್ಬಕ್ಕೆ ಸಾಮಾನ್ಯ ಆಚರಣೆ ನಡೆಸುತ್ತಿರುವ ನಮ್ಮ ಮನೆಯವರೆಲ್ಲರೂ ಸಂಭ್ರಮದಿಂದ ಸೀರೆಯುಟ್ಟು ವಿಭಿನ್ನ ಕಲ್ಪನೆಯಲ್ಲಿ ಚಿತ್ರ ತೆಗೆಸಿಕೊಳ್ಳುವಂತೆ ಮಾಡಿ ಸ್ಪರ್ಧೆಗೆ ವೇದಿಕೆ ಕಲ್ಪಿಸಿದ್ದಕ್ಕೆ ನಮನಗಳು.
-ಶಾಂತಾ, ಸುಳ್ಯ

Advertisement

Udayavani is now on Telegram. Click here to join our channel and stay updated with the latest news.

Next