Advertisement

ಸಾಂತ್ವನ ಹೇಳಲು ಬಂದ ಪ್ರಿಯಾಂಕಾ ಬಂಧನ

01:46 AM Jul 20, 2019 | mahesh |

ಲಕ್ನೋ: ಇತ್ತೀಚೆಗೆ, ಭೂ ವಿವಾದದ ಹಿನ್ನೆಲೆಯಲ್ಲಿ ಹಳ್ಳಿಯ ಸರಪಂಚನೇ ಅದೇ ಹಳ್ಳಿಯ 10 ನಿವಾಸಿಗಳನ್ನು ಗುಂಡಿಕ್ಕಿ ಕೊಂದು ಹಾಕಿದ ಘಟನೆ ನಡೆದಿದ್ದ ಉತ್ತರ ಪ್ರದೇಶದ ಘೆರೋವಾಲ್ ಹಳ್ಳಿಗೆ ಭೇಟಿ ನೀಡಲು ಶುಕ್ರವಾರ ತೆರಳುತ್ತಿದ್ದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರನ್ನು ಮಾರ್ಗಮಧ್ಯೆಯೇ ತಡೆದ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ಹಿಂದಿರುಗುವಂತೆ ಮಾಡಲಾದ ಮನವಿಗಳಿಗೆ ಅವರು ಸ್ಪಂದಿಸದ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ.

Advertisement

ಜು. 17ರಂದು, ತುಂಡು ಭೂಮಿಯೊಂದನ್ನು ಅತಿಕ್ರಮಿಸಲು ಯತ್ನಿಸುತ್ತಿದ್ದ ಸರಪಂಚನ ನಡೆ ವಿರೋಧಿಸಿದ ಹಳ್ಳಿಗರ ಮೇಲೆ ಆತನ ಬೆಂಬಲಿಗರು ಗುಂಡಿನ ಮಳೆಗರೆದ ಘಟನೆ ನಡೆದಿತ್ತು. ಘಟನೆಯಲ್ಲಿ 10 ಜನರು ಸಾವಿಗೀಡಾಗಿ, 20ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.

ನೊಂದ ಕುಟುಂಬಗಳಿಗೆ ಸಾಂತ್ವನ ಹೇಳಲು ಪ್ರಿಯಾಂಕಾ ಆಗಮಿಸಿದ್ದರು. ಮೊದಲಿಗೆ, ಭೋಪಾಲ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುಗಳನ್ನು ಮಾತನಾಡಿಸಿದ ಅವರು, ಆನಂತರ ತಮ್ಮ ಬೆಂಬಲಿಗರೊಂದಿಗೆ ಘೆರೋವಾಲ್ ಹಳ್ಳಿಯಿರುವ ಸೋನ್‌ಭದ್ರಾ ಜಿಲ್ಲೆ ಕಡೆಗೆ ರಸ್ತೆ ಮಾರ್ಗವಾಗಿ ತೆರಳಿದರು. ಆದರೆ, ಮಿರ್ಜಾಪುರ ಜಿಲ್ಲೆಯ ನಾರಾಯಣಪುರದಲ್ಲಿ ಅವರನ್ನು ತಡೆದ ಪೊಲೀಸರ ಮುಂದೆ ಪ್ರಿಯಾಂಕಾ ಧರಣಿ ಕುಳಿತರು. ಹಾಗಾಗಿ, ಅವರನ್ನು ಹಾಗೂ ಬೆಂಬಲಿಗರನ್ನು ವಶಕ್ಕೆ ಪಡೆದು ಅತಿಥಿ ಗೃಹಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಜಿಲ್ಲಾಧಿಕಾರಿ ಮತ್ತು ಪೊಲೀಸ್‌ ವರಿಷ್ಠಾಧಿಕಾರಿಯವರು ಪ್ರಿಯಾಂಕಾರ ಮನವೊಲಿಸಲು ಯತ್ನಿಸಿದರು. ಅದಕ್ಕೆ ಒಪ್ಪದ ಅವರನ್ನು ಬಂಧಿಸಲಾಗಿದೆ.

ಈ ನಡುವೆ, ಘೆರೋವಾಲ್ ಘಟನೆ ಬಗ್ಗೆ ಪ್ರತ್ರಿಕ್ರಿಯಿಸಿರುವ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌, ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಸರ್ಕಾರ ಭೂ ಮಾಫಿಯಾಗಳನ್ನು ಬೆಂಬಲಿಸಿದ್ದೇ ಘೆರೋವಾಲ್ ಘಟನೆಗೆ ಕಾರಣ ಎಂದಿದ್ದಾರೆ. ಅತ್ತ, ಪ್ರಿಯಾಂಕಾ ಬಂಧನವನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್‌, ದೇಶವ್ಯಾಪಿ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದೆ. ಶುಕ್ರವಾರ ಹಲವೆಡೆ ಪ್ರತಿಭಟನೆ ನಡೆದಿದೆ. ಇದೇ ವೇಳೆ, ಅಧಿಕಾರದ ನಿರಂಕುಶ ಅನ್ವಯತೆಯು ಬಿಜೆಪಿಯ ಅಭದ್ರತೆಯನ್ನು ತೋರಿಸಿದೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.

ನನ್ನ ಮಗನ ವಯಸ್ಸಿನ ಹುಡುಗನೊಬ್ಬ ಘಟನೆಯಲ್ಲಿ ಗಾಯಗೊಂಡಿ ದ್ದಾನೆ. ಘಟನೆಯಿಂದ ನೊಂದಿ ರುವವರಿಗೆ ಸಾಂತ್ವನ ಹೇಳಲು ತೆರಳುತ್ತಿರುವ ನನ್ನನ್ನು ಅಡ್ಡಿಪಡಿಸಲಾಗಿದೆ.
ಪ್ರಿಯಾಂಕಾ ವಾದ್ರಾ, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ

Advertisement
Advertisement

Udayavani is now on Telegram. Click here to join our channel and stay updated with the latest news.

Next