ಹೊಸದಿಲ್ಲಿ: ತನ್ನ ಮಕ್ಕಳ ಇನ್ಸ್ಟಾಗ್ರಾಮ್ ಖಾತೆಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ದೂರವಾಣಿ ಕದ್ದಾಲಿಕೆ ಆರೋಪ ನಡೆಸಿದ ಸಮಯದಲ್ಲೇ ಪ್ರಿಯಾಂಕಾ ಗಾಂಧಿ ಈ ಹೇಳಿಕೆ ಮಹತ್ವ ಪಡೆದಿದೆ.
ಸಮಾಜವಾದಿ ಪಕ್ಷದ ಮಖ್ಯಸ್ಥ ಅಖಿಲೇಶ್ ಯಾದವ್ ಅವರು ಪತ್ರಿಕಾಗೋಷ್ಠಿ ನಡೆಸಿ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಫೋನ್ ಟ್ಯಾಪಿಂಗ್ ಆರೋಪ ಮಾಡಿದ್ದರು.
”ನಮ್ಮೆಲ್ಲ ಫೋನ್‌ಗಳನ್ನು ಕದ್ದಾಲಿಕೆ ಮಾಡಲಾಗುತ್ತಿದೆ ಮತ್ತು ನಮ್ಮ ಸಂಭಾಷಣೆಗಳನ್ನು ರೆಕಾರ್ಡ್ ಮಾಡಲಾಗುತ್ತಿದೆ, ಪಕ್ಷದ ಕಚೇರಿಯಲ್ಲಿನ ಎಲ್ಲಾ ಫೋನ್ ಗಳನ್ನು ಆಲಿಸಲಾಗುತ್ತಿದೆ, ಸಂಜೆ ಸಿಎಂ ಅವರೇ ಕೆಲವು ರೆಕಾರ್ಡಿಂಗ್‌ಗಳನ್ನು ಕೇಳುತ್ತಿದ್ದಾರೆ, ಒಂದು ವೇಳೆ ನೀವು ನಮ್ಮನ್ನು ಸಂಪರ್ಕಿಸಿದರೆ ನಿಮ್ಮ ಮಾತನ್ನೂ ಕೇಳಲಾಗುತ್ತಿದೆ ಎಂದು ತಿಳಿಯಿರಿ’’ ಎಂದು ಅಖಿಲೇಶ್ ಯಾದವ್ ಆರೋಪಿಸಿದರು.
ಇದನ್ನೂ ಓದಿ:ಕೋಲ್ಕತಾ ಪುರಸಭೆ ಚುನಾವಣೆಯಲ್ಲಿ ಟಿಎಂಸಿ ಜಯಭೇರಿ, ಬಿಜೆಪಿ, ಕಾಂಗ್ರೆಸ್ ಶೂನ್ಯ: ಮಮತಾ
ಅಖಿಲೇಶ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಯುಪಿ ಸಿಎಂ ಯೋಗಿ ಆದಿತ್ಯನಾಥ್, “ಬಹುಶಃ ಅಖಿಲೇಶ್ ಅವರು ಮುಖ್ಯಮಂತ್ರಿಯಾಗಿದ್ದಾಗ ಹೀಗೆ ಮಾಡಿರಬೇಕು. ಅದಕ್ಕೆ ಈಗ ರೀತಿ ಆರೋಪಿಸುತ್ತಿದ್ದಾರೆ” ಎಂದು ತಿರುಗೇಟು ನೀಡಿದ್ದಾರೆ.