Advertisement

ರಂಗೇರ ತೊಡಗಿದೆ ಯುಪಿ ಚುನಾವಣಾ ಅಖಾಡ : ಎಸ್ಪಿ, ಬಿಜೆಪಿ ವಿರುದ್ಧ ಪ್ರಿಯಾಂಕಾ ಕಿಡಿ

08:52 PM Jan 11, 2022 | Team Udayavani |

ಉತ್ತರ ಪ್ರದೇಶ : ಉತ್ತರ ಪ್ರದೇಶದಲ್ಲಿ ಏಳು ಹಂತದ ಮತದಾನಕ್ಕೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಚುನಾವಣಾ ಆಖಾಡ ರಂಗೇರತೊಡಗಿದ್ದು, “ಲಡ್ಕಿ ಹೂ ಲಡ್ ಸಕ್ತಿ ಹೂ’’ ಅಭಿಯಾನವನ್ನು ಮನೆ ಮನೆ ಬಾಗಿಲಿಗೆ ತಲುಪಿಸಲು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ನಿರ್ಧರಿಸಿದ್ದಾರೆ.

Advertisement

ಉತ್ತರ ಪ್ರದೇಶ ಚುನಾವಣೆಗೆ ಕಾಂಗ್ರೆಸ್ ಉಸ್ತುವಾರಿಯಾಗಿ ನೇಮಕಗೊಂಡಿರುವ ಪ್ರಿಯಾಂಕಾ ವಾದ್ರಾ ಕೆಲ ದಿನಗಳ ಹಿಂದೆ ಆಕಸ್ಮಿಕವಾಗಿ ಈ ಘೋಷಣೆ ಮೊಳಗಿಸಿದ್ದರು. ಆದರೆ ಈಗ ಇದೇ ಘೋಷವಾಕ್ಯವನ್ನು ಚುನಾವಣಾ ಅಸ್ತçವಾಗಿ ಬಳಸಿಕೊಳ್ಳಲು ಅವರು ನಿರ್ಧರಿಸಿದ್ದು, ಉತ್ತರ ಪ್ರದೇಶದ ಮನೆ ಮನೆಗೆ ಈ ಘೋಷಣೆ ತಲುಪಿಸಿ ಮಹಿಳಾ ಜಾಗೃತಿ ಮಾಡಲಾಗುವುದು ಎಂದು ಸುದ್ದಿ ಸಂಸ್ಥೆಯೊAದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಉತ್ತರಪ್ರದೇಶದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷವಾಗಲಿ, ಹಾಲಿ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರಕಾರವಾಗಲಿ ಮಹಿಳಾ ಸಬಲೀಕರಣಕ್ಕೆ ಸಂಬಂಧಪಟ್ಟಂತೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈ ಎರಡು ಪಕ್ಷಗಳು ಮಹಿಳಾ ಸಶಕ್ತಿಕರಣವನ್ನು ನಿರ್ಲಕ್ಷಿಸಿವೆ. ಹೀಗಾಗಿ ಉತ್ತರ ಪ್ರದೇಶದಲ್ಲಿ ಮುಂಬರುವ ದಿನಗಳಲ್ಲಿ ಸ್ತ್ರೀ ಸಬಲೀಕರಣಕ್ಕೆ ಆದ್ಯತೆ ನೀಡುವ ಗುರಿಯನ್ನು ಕಾಂಗ್ರೆಸ್ ಹೊಂದಿದೆ ಎಂದು ಪ್ರಿಯಾಂಕಾ ವಾದ್ರಾ ಹೇಳಿದ್ದಾರೆ.

ಪ್ರಧಾನಿ ಮೋದಿಯವರೂ ಮಹಿಳಾ ಸಬಲೀಕರಣಕ್ಕೆ ಯಾವುದೇ ಆದ್ಯತೆ ನೀಡಿಲ್ಲ. ಶೌಚಾಲಯ ಹಾಗೂ ಗ್ಯಾಸ್ ಸಂಪರ್ಕ ಯೋಜನೆಯನ್ನು ಬಿಟ್ಟರೆ ಮೋದಿ ಸರಕಾರದಲ್ಲಿ ಮಹಿಳಾ ಪರವಾದ ಯಾವುದೇ ಕಾರ್ಯಕ್ರಮ ಜಾರಿಯಾಗಿಲ್ಲ. ರಾಜಕಾರಣದಲ್ಲಿ ಮಹಿಳೆಯರ ಭಾಗಿದಾರಿಕೆ ಹೆಚ್ಚಬೇಕು. ಅತ್ಯಾಚಾರ ತಡೆಗೆ ಕಠಿಣವಾದ ಕಾಯಿದೆಯ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಲಡಕಿ ಹು, ಲಡ್ ಸಕ್ತಿ ಹೂ ಎಂದು ನಾನು ಘೋಷಣೆ ಮೊಳಗಿಸಿದ ಬಳಿಕ ಸಮಾಜವಾದಿ ಪಕ್ಷ ಹಾಗೂ ಬಿಜೆಪಿ ಮಹಿಳಾ ಸಮ್ಮೇಳನ ಆಯೋಜಿಸಿವೆ. ಆದರೆ ನಮ್ಮ ಹೋರಾಟ ಘೋಷಣೆಗೆ ಮಾತ್ರ ಸೀಮಿತವಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Advertisement

ಇದನ್ನೂ ಓದಿ : ಕೌಟುಂಬಿಕ ಕಲಹ : ಒಂದೂವರೆ ವರ್ಷದ ಮಗುವನ್ನು ಕೊಂದು, ನೇಣಿಗೆ ಶರಣಾದ ದಂಪತಿ

Advertisement

Udayavani is now on Telegram. Click here to join our channel and stay updated with the latest news.

Next