Advertisement

100 ತಿಂಗಳಾದ್ರೂ ಹೋರಾಟ ನಿಲ್ಲಬಾರದು : ರೈತ ಪ್ರತಿಭಟನೆಯಲ್ಲಿ ಪ್ರಿಯಾಂಕಾ ಕರೆ

05:42 PM Mar 07, 2021 | Team Udayavani |

ಮೀರತ್ : 100 ದಿನವಾಗಲಿ, 100 ವಾರಗಳಾಗಲಿ, 100 ತಿಂಗಳುಗಳೇ ಆಗಲಿ, ಕೇಂದ್ರ ಸರ್ಕಾರ ತಮ್ಮ ನಿಲುವನ್ನು ಬದಲಾಯಿಸುವ ತನ ಹೋರಾಟ ಮುಂದುವರೆಸೋಣ ಎಂದು ಕಾಂಗ್ರೆಸ್ ಮುಖ್ಯಸ್ಥೆ ಪ್ರಿಯಾಂಕಾ ಗಾಂಧಿ ವಾದ್ರಾ ಕರೆ ಕೊಟ್ಟಿದ್ದಾರೆ.

Advertisement

ದೇಶದಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆ 100ನೇ ದಿನಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ಮೀರತ್ ಕಿಸಾನ್ ಮಹಾಪಂಚಾಯತ್ ನಲ್ಲಿ ಮಾತನಾಡಿರುವ ಪ್ರಿಯಾಂಕಾ ಗಾಂಧಿ, ನಾವು ನಮ್ಮ ಭರವಸೆಗಳನ್ನು ಕಳೆದುಕೊಳ್ಳ ಬಾರದು ಎಂದು ಪ್ರತಿಭಟನಾಕಾರಿಗೆ ಹುರಿದುಂಬಿಸಿದ್ದಾರೆ.

ಮೀರತ್ ಗೆ ಪ್ರಿಯಾಂಕಾ ಗಾಂಧಿ ಆಗಮಿಸುತ್ತಿದ್ದಂತೆ ಅಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ಪ್ರಿಯಾಂಕಾರನ್ನು ಸ್ವಾಗತಿಸಿ ಅವರಿಗೆ ಭಗವತ್ ಗೀತೆನ್ನು ನೀಡಿದ್ದಾರೆ.  ನಂತ್ರ ಕಾಂಗ್ರೆಸ್ ಮುಖಂಡರ ಜೊತೆ ಟ್ರಾಕ್ಟರ್ ಚಾಲನೆ ಮಾಡಿ ಗಮನ ಸೆಳೆದರು.

ಕೇಂದ್ರ ಸರ್ಕಾರದ ಮೂರು ನೂತನ ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಆಗ್ರಹಿಸಿ ರೈತರು ದೆಹಲಿ ಗಡಿಗಳಲ್ಲಿ ನಡೆಸುತ್ತಿರುವ ಪ್ರತಿಭಟನೆಯು ಶನಿವಾರ 100ನೇ ದಿನಕ್ಕೆ ಕಾಲಿಟ್ಟಿದೆ. ಈ ದಿನವನ್ನು ಪ್ರತಿಭಟನೆನಿರತ ರೈತರು ಕರಾಳ ದಿನವನ್ನಾಗಿ ಆಚರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next