Advertisement

Wayanad; ಪ್ರಿಯಾಂಕಾ ಬಿರುಸಿನ ಪ್ರಚಾರ: ತಿರುನೆಲ್ಲಿ ಮಹಾವಿಷ್ಣು ದೇವಸ್ಥಾನಕ್ಕೆ ಭೇಟಿ

08:37 PM Nov 10, 2024 | Team Udayavani |

ವಯನಾಡ್ : ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಯುಡಿಎಫ್ ಅಭ್ಯರ್ಥಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ರವಿವಾರ(ನ10) ಪ್ರಸಿದ್ಧ ತಿರುನೆಲ್ಲಿ ಮಹಾವಿಷ್ಣು ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ವಯನಾಡ್ ನಲ್ಲಿ ತಮ್ಮ ಅಂತಿಮ ಹಂತದ ಭರ್ಜರಿ ಪ್ರಚಾರವನ್ನು ನಡೆಸುತ್ತಿದ್ದಾರೆ. ನವೆಂಬರ್ 13 ರಂದು ಉಪಚುನಾವಣೆ ನಡೆಯಲಿದ್ದು, ಸೋಮವಾರ ಪ್ರಚಾರ ಕೊನೆಗೊಳ್ಳಲಿದೆ.

Advertisement

ತಿರುನೆಲ್ಲಿ ಮಹಾವಿಷ್ಣುವಿನ ದೇವಸ್ಥಾನವು ಪಾಪನಾಶಿನಿ ನದಿಯ ದಡದಲ್ಲಿದ್ದು, ಇದರಲ್ಲಿ ಪ್ರಿಯಾಂಕಾ ಅವರ ತಂದೆ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಚಿತಾಭಸ್ಮವನ್ನು 1991 ರಲ್ಲಿ ವಿಸರ್ಜನೆ ಮಾಡಲಾಗಿತ್ತು.

‘ದಕ್ಷಿಣದ ಕಾಶಿ’ ಎಂದು ಕರೆಯಲ್ಪಡುವ ಪ್ರಾಚೀನ ದೇವಾಲಯದ ಇತಿಹಾಸದ ಬಗ್ಗೆ ಪ್ರಿಯಾಂಕಾ ದೇವಸ್ಥಾನದ ಅಧಿಕಾರಿಗಳನ್ನು ಕೇಳಿದರು. ನಂತರ, ಅವರು ಮನಂತವಾಡಿಯ ಎಡವಕಕ್ಕೆ ತೆರಳಿದರು, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಕಾರ್ಯಕರ್ತರು ಆತ್ಮೀಯ ಸ್ವಾಗತವನ್ನು ನೀಡಿದರು. ಅವರೊಂದಿಗೆ ಸಂವಾದ ನಡೆಸಿದರು.

ಎಡವಕ ನಂತರ ಇನ್ನೂ ಆರು ಸ್ವಾಗತ ಸಭೆಗಳಲ್ಲಿ ಪ್ರಿಯಾಂಕಾ ಭಾಗವಹಿಸಿದರು. ನಾಯ್ಕಟ್ಟಿ, ಸುಲ್ತಾನ್ ಬತ್ತೇರಿಯಲ್ಲಿ ಕಾರ್ನರ್ ಮೀಟಿಂಗ್‌ನಲ್ಲಿ ಪ್ರಚಾರವು ಮುಕ್ತಾಯಗೋಡಿತು. ಚುಲ್ಲಿಯೊಡೆ ಮತ್ತು ವಡುವಾಂಚಲ್ ಎಂಬಲ್ಲಿಯೂ ಕಾಂಗ್ರೆಸ್ ಸಭೆ ನಡೆಯಲಿದೆ.

Advertisement

ನಾಳೆ (ಸೋಮವಾರ) ರಾಹುಲ್ ಗಾಂಧಿ ಅವರು ಸುಲ್ತಾನ್ ಬತ್ತೇರಿ ಮತ್ತು ತಿರುವಂಬಾಡಿಯಲ್ಲಿ ಸಹೋದರಿಯೊಂದಿಗೆ ಜಂಟಿ ರೋಡ್ ಶೋ ನಡೆಸಲಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ರಾಯ್‌ಬರೇಲಿ ಮತ್ತು ವಯನಾಡ್ ಎರಡೂ ಕ್ಷೇತ್ರದಲ್ಲಿ ರಾಹುಲ್‌ ಗಾಂಧಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ವಾಯನಾಡ್ ಸ್ಥಾನವನ್ನು ತೆರವು ಮಾಡಿದ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next