Advertisement

ಮೈತ್ರಿಗೆ ಮುನ್ನವೇ ಪೋಸ್ಟರ್‌ಗಳಲ್ಲಿ ಪ್ರಿಯಾಂಕಾ, ಡಿಂಪಲ್‌ ಚಿತ್ರ !

04:31 PM Jan 14, 2017 | Team Udayavani |

ಲಕ್ನೋ : ಉತ್ತರ ಪ್ರದೇಶ ವಿದಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್‌ ಮತ್ತು ಆಳುವ ಸಮಾಜವಾದಿ ಪಕ್ಷದ ನಡುವೆ ಮೈತ್ರಿ ಏರ್ಪಡುವ ಸಾಧ್ಯತೆಯನ್ನು ಖಚಿತ ಪಡಿಸುವ ರೀತಿಯಲ್ಲಿ ಅಲಹಾಬಾದ್‌ನಲ್ಲಿ ಕಂಡು ಬಂದಿರುವ ಭಾರೀ ಗಾತ್ರದ ಪೋಸ್ಟರ್‌ಗಳಲ್ಲಿ ಪ್ರಿಯಾಂಕಾ ಗಾಂಧಿ ಮತ್ತು ರಾಜ್ಯದ ಮುಖ್ಯಮಂತ್ರಿ ಅಖೀಲೇಶ್‌ ಯಾದವ್‌ ಅವರ ಪತ್ನಿ ಹಾಗೂ ಸಂಸದೆಯಾಗಿರುವ ಡಿಂಪಲ್‌ ಯಾದವ್‌ ಅವರ ಪೋಟೋಗಳು ರಾರಾಜಿಸ ತೊಡಗಿವೆ.

Advertisement

ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್‌ ಯಾದವ್‌ ಮತ್ತು ಅವರ ಪುತ್ರ, ಮುಖ್ಯಮಂತ್ರಿ ಅಖೀಲೇಶ್‌ ಯಾದವ್‌ ನಡುವೆ ಪಕ್ಷದ ಚುನಾವಣಾ ಚಿಹ್ನೆ ಸೈಕಲ್‌ಗಾಗಿ ಜಟಾಪಟಿ ಮುಂದುವರಿದಿರುವಂತೆಯೇ ಸೈಕಲ್‌ ವಾರೀಸುದಾರ ಯಾರೆಂಬುದನ್ನು ಚುನಾವಣಾ ಆಯೋಗ ತೀರ್ಮಾನಿಸಲಿದೆ.

ಈ ತೀರ್ಮಾನದ ಬಳಿಕವೇ ಸಮಾಜವಾದಿ ಮತ್ತು ಕಾಂಗ್ರೆಸ್‌ ನಡುವಿನ ಚುನಾವಣಾಪೂರ್ವ ಮೈತ್ರಿಯ ನಿರ್ಧಾರವಾಗಲಿದೆ. ನಿನ್ನೆ ಶುಕ್ರವಾರ ಚುನಾವಣಾ ಆಯೋಗ ಸೈಕಲ್‌ ಕುರಿತ ತನ್ನ ತೀರ್ಪನ್ನು ಕಾದಿರಿಸಿದೆ. 

ಉತ್ತರ ಪ್ರದೇಶದ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆಯು ಜನವರಿ 17ರಿಂದ ಆರಂಭಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next