Advertisement

ಪ್ರಿಯಾಂಕಾ ವಿಶ್ವದ ಮೋಸ್ಟ್‌ ಬ್ಯೂಟಿಫ‌ುಲ್‌ ನಂ 2!

03:45 AM Apr 04, 2017 | Harsha Rao |

ಮುಂಬಯಿ : ಅರೆರೇ ಪ್ರಿಯಾಂಕಾ, ಶಹಬ್ಟಾಸ್‌! ಹಾಲಿವುಡ್‌ನ‌ಲ್ಲೂ ಮಿಂದೆದ್ದು ಬಂದಿರುವ ಬಾಲಿವುಡ್‌ನ‌ಟಿ ಪ್ರಿಯಾಂಕಾ ಚೋಪ್ರಾ ಅವರ ಅಪ್ಪಟ ಅಭಿಮಾನಿಗಳು ಈಗ ಹೀಗೆಂದು ಗುಣಗಾನ ಮಾಡದೇ ಇರಲಾರರು. ಯಾಕೆಂದರೆ ಪ್ರಿಯಾಂಕಾ ಈಗ ವಿಶ್ವದ 2ನೇ ಅತ್ಯಂತ ಸುಂದರ ಮಹಿಳೆ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

Advertisement

ವಿಶ್ವದ ಸೌಂದರ್ಯವತಿಗಳ ಸಾಲಿನಲ್ಲಿರುವ ಆ್ಯಂಜೆ ಲಿನಾ ಜೋಲಿ, ಎಮ್ಮಾ ವಾಟ್ಸನ್‌, ಬ್ಲೇಕ್‌ ಲೈವಿÉà, ಮಿಚೇಲ್‌ ಒಮಾಬಾ ಅವರನ್ನೆಲ್ಲಾ ಹಿಂದಿಕ್ಕಿ ಪ್ರತಿಷ್ಠಿತ ಗೌರವ ಸಂಪಾದಿಸಿದ್ದಾರೆ. ವಿಶ್ವಾದ್ಯಂತ ಇರುವ ತನ್ನ ಅಭಿಮಾನಿಗಳಿಗೆ ಈ ಮೂಲಕ ಸಿಹಿ ಉಣಬಡಿಸಿದ್ದಾರೆ. ಸೆಲೆಬ್ರಿಟಿಗಳ ತರಹೇವಾರಿ ಸುದ್ದಿಗಳನ್ನು ನೀಡಿ ಯುವಕ-ಯುವತಿಯರ ಹೃದಯ ಕದಿಯುತ್ತಿರುವ “ಬಜ್‌ನೆಟ್‌’ ಈಗ ಪ್ರಿಯಾಂಕಾಗೆ ಈ ಬಿರುದು ಸಿಕ್ಕಿರುವುದಾಗಿ ಪ್ರಕಟಿಸಿದೆ. ಪಾಪ್‌ ತಾರೆ ಅಮೆರಿಕದ ಬೆಯಾನ್ಸ್‌, ಪ್ರಿಯಾಂಕಾ ಅವರಿಗಿಂತ ಒಂದು ಹೆಜ್ಜೆ ಮುಂದಿದ್ದು, ನಂ.1 ಸ್ಥಾನದಲ್ಲಿದ್ದಾರೆ. ಇತ್ತೀಚೆಗೆ ಆಸ್ಕರ್‌ ಪ್ರಶಸ್ತಿ ಕಾರ್ಯಕ್ರಮದಲ್ಲೂ ಚೋಪ್ರಾಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next