Advertisement
ಉಮೇದ್ ಭವನ್ ಅರಮನೆಯಲ್ಲಿ ಏರ್ಪಡಿಸಲಾಗಿದ್ದ ಸಮಾರಂಭ ದಲ್ಲಿ ಇವರಿಬ್ಬರ ವಿವಾಹ ಕ್ಯಾಥೋಲಿಕ್ ಚರ್ಚ್‌ನ ವೈವಾಹಿಕ ವಿಧಿವಿಧಾನಗಳಂತೆ ನೆರವೇರಿತು. ಪಾದ್ರಿಯೊಬ್ಬರು ಪ್ರಿಯಾಂಕಾರನ್ನು ಉದ್ದೇಶಿಸಿ ವರ ನಿಮಗೆ ಒಪ್ಪಿಗೆಯೇ ಎಂದು ಕೇಳಿದ್ದಕ್ಕೆ ಪ್ರಿಯಾಂಕಾ, “ಒಪ್ಪಿಗೆಯಿದೆ’ ಎಂದು ಹೇಳಿದರು. ಆನಂತರ, ಜೊನಾಸ್ ಸಹ ಒಪ್ಪಿಗೆ ಸೂಚಿಸಿದ ಮೇಲೆ ಜೊನಾಸ್ ಅವರು ಪ್ರಿಯಾಂಕಾ ಅವರ ಬೆರಳಿಗೆ ಉಂಗುರ ತೊಡಿಸಿ ಚುಂಬಿಸುವ ಮೂಲಕ ವಿವಾಹ ನೆರವೇರಿತು. ಇದಕ್ಕೆ ಜೊನಾಸ್ ತಂದೆ ಪಾಲ್ ಕೆವಿನ್ ಸಾಕ್ಷಿಯಾದರು. ಈ ಸಮಾರಂಭಕ್ಕಾಗಿ ಲಂಡನ್‌ನ ಪ್ರತಿಷ್ಠಿತ ವಸ್ತ್ರ ವಿನ್ಯಾಸಕ ರಾಲ್ಫ್ ಲೋರೆನ್ ವಿನ್ಯಾಸಗೊಳಿಸಿದ್ದ ಉಡುಗೆಗಳಲ್ಲಿ ಮದುಮಕ್ಕಳು ಮಿಂಚುತ್ತಿದ್ದರು. Advertisement
ಕ್ರೈಸ್ತ ಪದ್ಧತಿಯಂತೆ ಪಿಂಕಿ-ಜೊನಾಸ್ ವಿವಾಹ
06:00 AM Dec 02, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.