Advertisement

ಪ್ರಿಯಾಂಕಾ ಮತ್ತೆ ಟ್ರೋಲ್‌! ಮೂಗಿನ ಬಳಿಕ ಮತ್ತೆ ಪ್ಲಾಸ್ಟಿಕ್‌ ಸರ್ಜರಿ

11:11 AM Jul 05, 2017 | |

ಮುಂಬಯಿ: ಜಗತ್ತಿನೆಲ್ಲೆಡೆ ಅಪಾರ ಅಭಿಮಾನಿಗಳನ್ನು ಸಂಗ್ರಹಿಸಿರುವ ಸುಂದರಿ ಪ್ರಿಯಾಂಕಾ ಚೋಪ್ರಾ ಮತ್ತೆ ಟ್ರೋಲ್‌ ಆಗಿದ್ದಾರೆ. ಕ್ವಾಂಟಿಕೋ ಚಲುವೆ ಈ ಬಾರಿ ಸುದ್ದಿಯಾಗಿದ್ದು ಆಕರ್ಷಕ ತುಟಿಗಳಿಗೆ ಪ್ಲಾಸ್ಟಿಕ್‌ ಸರ್ಜರಿ ಮಾಡಿಸುವ ಮೂಲಕ.

Advertisement

ತಿಂಗಳ ಹಿಂದಷ್ಟೇ ಮೂಗಿಗೆ ಪ್ಲಾಸ್ಟಿಕ್‌ ಸರ್ಜರಿ ಮಾಡಿಸಿಕೊಂಡಿದ್ದ ಪ್ರಿಯಾಂಕಾ ಈ ಬಾರಿ ತುಟಿಗಳಿಗೆ ಸರ್ಜರಿ ಮಾಡಿಸಿಕೊಂಡು ಇನ್ನಷ್ಟು ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.

ಇನಸ್ಟಾಗ್ರಾಂನಲ್ಲಿ ಪ್ರಿಯಾಂಕಾ ಫೋಟೋವೊಂದನ್ನು ಅಪ್‌ಲೋಡ್‌ ಮಾಡಿದ್ದು ಈ ಬಗ್ಗೆ ಹಲವರು ಟೀಕೆಗಳ ಪ್ರವಾಹವನ್ನೇ ಹರಿಸಿದ್ದಾರೆ. ಟ್ರೋಲರ್‌ಗಳಿಗೆ ಪ್ರಿಯಾಂಕಾ ಅಭಿಮಾನಿಗಳು ಉತ್ತರವನ್ನೂ ನೀಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next