Advertisement

ನಾನು ಪತಿ ಚೆನ್ನಾಗಿದ್ದೇವೆ: ಪ್ರಿಯಾಂಕಾ ಚೋಪ್ರಾ

06:33 PM Nov 24, 2021 | Team Udayavani |

ಮುಂಬಯಿ: ಪ್ರಿಯಾಂಕಾ ಚೋಪ್ರಾ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಗಂಡನ ಹೆಸರನ್ನು ತೆಗೆದಿದ್ದಕ್ಕೆ, ಅವರಿಬ್ಬರು ಬೇರಾಗುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು.

Advertisement

ಅದು ಸುಳ್ಳು ಎಂದು ಹೇಳಿದ್ದ ಪ್ರಿಯಾಕಾ, ಇದೀಗ ತಮ್ಮಿಬ್ಬರ ಸಂಬಂಧ ಗಟ್ಟಿಯಾಗಿದೆ ಎನ್ನುವುದಕ್ಕೆ ಇನ್ನೊಂದು ವಿಡಿಯೋ ಸಾಕ್ಷಿಯನ್ನೂ ಬಿಟ್ಟಿದ್ದಾರೆ.

ನೆಟ್‌ಫ್ಲಿಕ್ಸ್‌ನಲ್ಲಿ “ಜೋನಸ್‌ ಬ್ರದರ್ಸ್‌ ಫ್ಯಾಮಿಲಿ ರೋಸ್ಟ್‌’ ಎನ್ನುವ ಕಾರ್ಯಕ್ರಮ ಆರಂಭವಾಗಿದ್ದು, ಅದರಲ್ಲಿ ಭಾಗವಹಿಸಿದ್ದ ಪ್ರಿಯಾಕಾ ಪತಿ ಜೋನಸ್‌ ಮತ್ತು ಅವರ ಸಹೋದರರ ಕಾಲೆಳೆದಿದ್ದಾರೆ. ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next