Advertisement
ಜನರ ಬಳಿಗೆ ಒಯ್ಯುವ ವಿಷಯಗಳೇನು?ರಾಜ್ಯ ಕಾಂಗ್ರೆಸ್ ಸರ್ಕಾರದ ಸ್ಥಿರ ಆಡಳಿತ, ಅಭಿವೃದ್ಧಿ ಕಾರ್ಯ, ಅಭ್ಯರ್ಥಿಗಳ ಧನಾತ್ಮಕ ಅಂಶ ಕೇಂದ್ರವಾಗಿಟ್ಟುಕೊಂಡು ಪ್ರಚಾರ ನಡೆಸಲಾಗುವುದು. ಭ್ರಷ್ಟಾಚಾರರಹಿತ ಆಡಳಿತ ನೀಡಿ ಬಿಜೆಪಿಗಿಂತ ಭಿನ್ನ ಎಂಬುದನ್ನು ಸಾಧಿಸಿ ತೋರಿಸಿದೆ. ಹತಾಶ ಬಿಜೆಪಿ ತನ್ನ ಹಳೆಯ ಸಿದ್ಧಾಂತ ಕೋಮು ಭಾವನೆ ಪ್ರಚೋದಿಸುವ ಕೆಲಸ ಮಾಡುತ್ತಿದೆ.
ಯಡಿಯೂರಪ್ಪ- ಜನಾರ್ದನ ರೆಡ್ಡಿ ಜೋಡಿಯ ಭ್ರಷ್ಟಾಚಾರವನ್ನು ಮರೆ ಮಾಚಲು ಚುನಾವಣಾ ಪ್ರಚಾರ ಕಾರ್ಯದ ಹೊಣೆ ಯನ್ನು ಕೇಂದ್ರ ಸಚಿವರ ನಾಯಕತ್ವಕ್ಕೆ ಹೊರ ಗುತ್ತಿಗೆ ನೀಡಿದಂತಿದೆ. ಜನಾರ್ದನರೆಡ್ಡಿ ಅವರ ಪಾಸ್‌ಪೋರ್ಟ್ ಜಫ್ತಿಯಾಗಿದ್ದು, ಬಳ್ಳಾರಿ ಪ್ರವೇಶಕ್ಕೆ ನಿರ್ಬಂಧವಿದೆ. ಅವರಿನ್ನೂ ದೋಷಮುಕ್ತರಾಗಿಲ್ಲ. ಈ ಹೊತ್ತಿನಲ್ಲಿ ಅವರು ಬಿಜೆಪಿ ಪರ ಪ್ರಚಾರ ನಡೆಸುತ್ತಿದ್ದು, ಬಿಜೆಪಿಯ ನಿಲುವು ಏನು ಎಂಬುದು ಗೊತ್ತಾಗಿದೆ. ಬಿಎಸ್‌ವೈ ಮತ್ತು ರೆಡ್ಡಿ ಸಖ್ಯ ಭ್ರಷ್ಟಾಚಾರಕ್ಕೆ ದೃಢೀಕರಣ ಮುದ್ರೆ ಒತ್ತಿದೆ. ಬಿಜೆಪಿ ಕೇಂದ್ರ ಸಚಿವರ ತಂಡವೇ ಪ್ರಚಾರದ ನೇತೃತ್ವ ವಹಿಸಿದೆ, ನಿಮ್ಮ ಪ್ರತಿತಂತ್ರ ಏನು?
ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರು ಸಹ ರಾಜ್ಯದೆಲ್ಲೆಡೆ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ. ಒಂದೆರಡು ದಿನದಲ್ಲೇ ರಾಷ್ಟ್ರೀಯ ನಾಯಕರು ಜಿಲ್ಲೆ, ತಾಲ್ಲೂಕು, ಪಟ್ಟಣ ಪ್ರದೇಶಗಳಲ್ಲಿ ಸರಣಿ ಪತ್ರಿಕಾಗೋಷ್ಠಿ, ಬಹಿರಂಗ ಸಭೆ ನಡೆಸ ಲಿ ದ್ದಾರೆ. ಕರ್ನಾಟಕದ ಅಭಿವೃದ್ಧಿ ಹಾಗೂ ಬಿಜೆಪಿ ಆಡಳಿತವಿರುವ ರಾಜ್ಯಗಳ ಅಭಿವೃದ್ಧಿಗೆ ಹೋಲಿಸುವ ಮೂಲಕ ತಿರುಗೇಟು ನೀಡಲಿ ದ್ದಾರೆ. ಮೂಲಸೌಕರ್ಯ, ಕಲ್ಯಾಣ, ಅಭಿವೃದ್ಧಿ ಚಿತ್ರಣ ನೀಡಲಿದ್ದಾರೆ. ರಾಜ್ಯದ ಸಂಸದರು ಸಕ್ರಿಯರಾಗಿ ಪ್ರಚಾರ ನಡೆಸಲಿದ್ದಾರೆ.
Related Articles
360 ಡಿಗ್ರಿ ಕೋನದಲ್ಲೂ ಸಂವಹನ, ಪ್ರಚಾರ ತಂತ್ರ ರೂಪಿಸಲಾಗಿದೆ. ಕೇಂದ್ರದ ವೈಫಲ್ಯ, ರಾಜ್ಯ ಸರ್ಕಾರದ ಕೊಡುಗೆಗಳ ಬಗ್ಗೆ ತಿಳಿಸಲು ಜಾಲತಾಣ ಮತ್ತು ಇತರ ಮಾಧ್ಯಮಗಳನ್ನು ಬಳಸಲಾಗು ವುದು. ಸಿಬಿಎಸ್‌ಇ, ಐಸಿಎಸ್‌ಸಿ ಪ್ರಶ್ನೆ ಪತ್ರಿಕೆ ಸೋರಿಕೆ, ನಿರುದ್ಯೋಗ ಸಮಸ್ಯೆ ಬಗ್ಗೆ ಯುವಜನತೆಗೆ ಎಸ್‌ಎಂಎಸ್ ಮಾಹಿತಿ ನೀಡಲಾಗುವುದು. ಗುಜರಾತ್ ಪ್ರಯೋಗ ದಂತೆ ಮಹಿಳಾ ಸಂಘಟನೆಗಳು, ಗುಂಪು ಗಳೊಂದಿಗೆ ಸಂವಾದ ನಡೆಸಲಾಗುವುದು.
Advertisement
ಅಭ್ಯರ್ಥಿ ಆಯ್ಕೆ ಸಮರ್ಪಕವಾಗಿದೆಯೇ?ಸಾಕಷ್ಟು ಚರ್ಚೆ ನಡೆಸಿ ಏಕಕಾಲಕ್ಕೆ 218 ಸೂಕ್ತ ಅಭ್ಯರ್ಥಿಗಳ ಹೆಸರನ್ನು ಪಕ್ಷ ಪ್ರಕಟಿಸಿದೆ. ಆದರೆ ಬಿಜೆಪಿಯಲ್ಲಿ ಕಳಂಕಿತರಿಗೆ ಟಿಕೆಟ್ ನೀಡಲಾ ಗಿದೆ. ಮಹಿಳೆ, ಅಲ್ಪಸಂಖ್ಯಾತರನ್ನು ಕಡೆಗಣಿಸಲಾಗಿದೆ. – ಎಂ.ಕೀರ್ತಿಪ್ರಸಾದ್