Advertisement
ಡಿ. 11ರಂದು ಅಳಿಯೂರು ಹೇಮಾ ಸಭಾಭವನದಲ್ಲಿ ಭಂಡಾರಿ ಸಮಾಜ ಸೇವಾ ಸಂಘದ ಸದಸ್ಯೆ ವೀಣಾ ಭಂಡಾರಿ ಅವರ ಪುತ್ರಿ ಪ್ರಿಯಾಂಕಾ ಅವರ ಮದುವೆಗೆ ಏರ್ಪಾಡಾಗಿತ್ತು. ಆದರೆ ವಧು ನಾಪತ್ತೆಯಾಗಿರುವ ವಿಚಾರ ಶನಿವಾರ ಗೊತ್ತಾಗಿದ್ದು ಈ ಬಗ್ಗೆ ವೀಣಾ ಅವರು ಸಂಘಕ್ಕೆ ಮತ್ತು ಮೂಡಬಿದಿರೆ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ವಿಚಾರಿಸಲಾಗಿ, ಫರಂಗಿಪೇಟೆಯ ಹೈದರ್ ಎಂಬ ವ್ಯಕ್ತಿ ವಧುವನ್ನು ಅಪಹರಿಸಿರುವ ಬಗ್ಗೆ ಮಾಹಿತಿ ಲಭಿಸಿದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ಹಿಂದೂ ಹುಡುಗಿಯರನ್ನು ಅನ್ಯ ಧರ್ಮೀಯರು “ಲವ್ ಜೆಹಾದ್’ ಹೆಸರಿನಲ್ಲಿ ಪ್ರೀತಿಸಿ ಮತಾಂತ ರಿಸುವ ಕಾರ್ಯ ವ್ಯಾಪಕ ವಾಗಿ ನಡೆಯುತ್ತಿರುವುದನ್ನು ಉಲ್ಲೇಖೀಸಿ ರುವ ಅಧ್ಯಕ್ಷರು ಈ ಪ್ರಕರಣದಲ್ಲೂ ಪ್ರಿಯಾಂಕಾಳನ್ನು ಲವ್ ಜೆಹಾದ್ ಹೆಸರಿನಲ್ಲಿ ಫರಂಗಿಪೇಟೆಯ ಹೈದರ್ ವಂಚಿಸಿರುವುದಾಗಿ ಆರೋಪಿಸಿದ್ದಾರೆ ಹಾಗೂ ಕೃತ್ಯವೆಸಗಿದವರು ಹಾಗೂ ಸಹಕರಿಸಿದವರ ಮೇಲೆ ಕಾನೂನು ಕ್ರಮ ಜರಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಭಂಡಾರಿ ಸಮಾಜದ ನಿಯೋಗದಲ್ಲಿ ಸ್ಥಾಪಕಾಧ್ಯಕ್ಷ ಎಂ. ಆರ್. ಭಂಡಾರಿ, ಹಾಲಿ ಉಪಾಧ್ಯಕ್ಷರಾದ ಪ್ರಕಾಶ್ ಭಂಡಾರಿ, ನೀಲಯ್ಯ ಭಂಡಾರಿ, ಸಂಧ್ಯಾ ಭಂಡಾರಿ, ಪ್ರ. ಕಾರ್ಯದರ್ಶಿ ಗುರುಪ್ರಸಾದ್ ಭಂಡಾರಿ, ನಿಕಟಪೂರ್ವ ಅಧ್ಯಕ್ಷ ಮಾಧವ ಭಂಡಾರಿ, ಮಾಜಿ ಅಧ್ಯಕ್ಷ ಸತೀಶ್ ಭಂಡಾರಿ, ಕೋಶಾಧಿಕಾರಿ ಯೋಗೇಶ್ ಭಂಡಾರಿ, ಮಾಜಿ ಅಧ್ಯಕ್ಷರಾದ ಸತೀಶ್ ಭಂಡಾರಿ, ರಮೇಶ್ ಭಂಡಾರಿ, ಸಂಘಟನಾ ಕಾರ್ಯದರ್ಶಿಗಳಾದ ಉಷಾ ಭಂಡಾರಿ, ಕೃಷ್ಣಾನಂದ ಭಂಡಾರಿ, ಸಂಘಟನಾ ಕಾರ್ಯದರ್ಶಿ ಕೃಷ್ಣಾನಂದ ಭಂಡಾರಿ, ಜತೆ ಕಾರ್ಯದರ್ಶಿ ಅಶೋಕ್ ಭಂಡಾರಿ, ಮಾನವ ಹಕ್ಕುಗಳ ಮಹಿಳಾ ವಿಭಾಗದ ರಾಜ್ಯ ಕಾರ್ಯದರ್ಶಿ ಉಷಾ ಭಂಡಾರಿ, ನವೀನ್ ಭಂಡಾರಿ, ಸುರೇಶ್ ಭಂಡಾರಿ ಮೊದಲಾದವರಿದ್ದರು.