Advertisement

ಮಹಿಳೆಯರಿಗೆ ಇತಿಹಾಸ-ಭವಿಷ್ಯ ಸೃಷ್ಟಿಸುವ ಸಾಮರ್ಥ್ಯವಿದೆ : ರಾಹುಲ್ ಗಾಂಧಿ

01:51 PM Mar 08, 2021 | Team Udayavani |

ನವದೆಹಲಿ : ಮಹಿಳೆಯರು ತಮ್ಮ ಶಕ್ತಿ ಮತ್ತು  ಸಾಮರ್ಥ್ಯದಿಂದ ಇತಿಹಾಸ ಮತ್ತು ಭವಿಷ್ಯವನ್ನು ಸೃಷ್ಟಿಸುವ ಶಕ್ತಿಯನ್ನು ಹೊಂದಿದ್ದಾರೆ, ನಿಮ್ಮನ್ನು ತಡೆಯಲು ಯಾರಿಗೂ ಬಿಡಬೇಡಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಹಿಳಾ ದಿನಕ್ಕೆ ಶುಭ ಕೋರಿದ್ದಾರೆ.

Advertisement

ಮಹಿಳಾ ದಿನಕ್ಕೆ ವಿಶ್ ಮಾಡಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಮಹಿಳೆಯರಿಗೆ ಧ್ವನಿ ಎತ್ತಲು ಅವಕಾಶ ಕಲ್ಪಿಸುವುದೇ ನಿಜವಾದ ಮಹಿಳಾ ಸಬಲೀಕರಣ. ಮಹಿಳೆಯರು ಇಂದು ಜನಪ್ರತಿನಿಧಿಗಳಾಗಿ, ವಕೀಲೆಯರಾಗಿ, ಪೈಲಟ್‌ಗಳು, ಉದ್ಯಮಿಗಳು, ವೈದ್ಯರು, ಪತ್ರಕರ್ತೆಯರು, ಕ್ರೀಡಾಪಟುಗಳು ಮತ್ತು ಕಲಾವಿದರಾಗಿ ಹೆಚ್ಚುತ್ತಿದ್ದಂತೆ ಜಗತ್ತು ಸುಂದರ ಹಾಗೂ ಮತ್ತು ಶಕ್ತಿಯುತವಾಗಿ ಕಾಣುತ್ತದೆ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಟ್ವೀಟ್ ಮಾಡಿದ್ದಾರೆ.

ಮಹಿಳೆಯೊಬ್ಬಳು ದೇಶದ ಪ್ರಧಾನಿಯಾಗಿ, ಮುಖ್ಯಮಂತ್ರಿಯಾಗಿ ದೇಶವನ್ನು ಹೇಗೆ ಮುನ್ನೆಡೆಸಬೇಕು ಎಂಬುದನ್ನು ಮಹಿಳೆ ತೋರಿಸಿಕೊಟ್ಟಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ಮಹಿಳಾ ದಿನದಂದು ಇಂದಿರಾ ಗಾಂಧಿಯನ್ನು ನೆನೆದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next