Advertisement

ಪ್ರಿಯಾಂಕಾ ಆರೋಪಕ್ಕೆ ಪೊಲೀಸರ ತಿರುಗೇಟು

02:01 AM Jun 30, 2019 | Sriram |

ಲಕ್ನೋ:ಉತ್ತರ ಪ್ರದೇಶದಲ್ಲಿ ಅಪರಾಧಿಗಳು ಮುಕ್ತವಾಗಿ ಓಡಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ವಾದ್ರಾ ಬಿಜೆಪಿಯ ಯೋಗಿ ಆದಿತ್ಯನಾಥ ಸರಕಾರದ ವಿರುದ್ಧ ಟೀಕಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಉತ್ತರ ಪ್ರದೇಶದ ಪೊಲೀಸರು, ರಾಜ್ಯದಲ್ಲಿ ಅಪರಾಧ ಪ್ರಮಾಣ ಗಮನಾರ್ಹವಾಗಿ ಕಡಿಮೆಯಾಗಿದೆ ಎಂಬ ಅಂಕಿ ಅಂಶಗಳನ್ನು ನೀಡಿದ್ದಾರೆ. ರಾಜ್ಯದಲ್ಲಿ ಅಪರಾಧಿಗಳು ಮುಕ್ತವಾಗಿ ಓಡಾಡುತ್ತಿದ್ದಾರೆ. ತಮಗೆ ಮನಸು ಬಂದಿದ್ದನ್ನು ಮಾಡುತ್ತಿದ್ದಾರೆ. ಅಪರಾಧ ಚಟುವಟಿಕೆಗಳು ನಡೆಯುತ್ತಲೇ ಇದ್ದರೂ, ಬಿಜೆಪಿ ಸರಕಾರ ಕಿವುಡಾಗಿ ಕುಳಿತಿದೆ. ಉತ್ತರ ಪ್ರದೇಶ ಸರಕಾರವು ಅಪರಾಧಿಗಳಿಗೆ ಶರಣಾಗಿದೆಯೇ ಎಂದು ಪ್ರಿಯಾಂಕಾ ಟ್ವೀಟ್ ಮಾಡಿದ್ದರು.

Advertisement

ಇದಕ್ಕೆ ಅಂಕಿ-ಅಂಶಗಳ ಸಮೇತ ಪ್ರತಿಕ್ರಿಯಿಸದ ಉ.ಪ್ರ. ಪೊಲೀಸರು, ಕಳೆದ ಎರಡು ವರ್ಷಗಳಲ್ಲಿ 9925 ಅಪರಾಧಿಗಳನ್ನು ಬಂಧಿಸಲಾಗಿದೆ ಮತ್ತು 81 ಜನರನ್ನು ಹತ್ಯೆಗೈಯಲಾಗಿದೆ. ಭದ್ರತಾ ಕಾಯ್ದೆ ಅಡಿ 200 ಕೋಟಿ ರೂ.ಆಸ್ತಿ ಜಪ್ತಿ ಮಾಡಲಾಗಿದೆ. ಡಕಾಯಿತಿ, ಕೊಲೆ, ಲೂಟಿ ಮತ್ತು ಅಪಹರಣ ಪ್ರಕರಣಗಳಲ್ಲಿ ಗಮನಾರ್ಹ ಇಳಿಕೆಯಾಗಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next