Advertisement

ಸಂಸದ ಪ್ರತಾಪ್‌ ಸಿಂಹ, ಪ್ರಿಯಾಂಕ್‌ ಟ್ವೀಟ್‌ ವಾರ್‌

11:32 AM Apr 16, 2017 | |

ಬೆಂಗಳೂರು: ಪ್ರವಾಸೋದ್ಯಮ ಸಚಿವ ಪ್ರಿಯಾಂಕ್‌ ಖರ್ಗೆ ಹಾಗೂ ಮೈಸೂರು-ಕೊಡಗು ಸಂಸದ ಪ್ರತಾಪ್‌ ಸಿಂಹ ನಡುವೆ ಉಪ ಚುನಾವಣೆ ಫ‌ಲಿತಾಂಶದ ಮೇಲೆ ಟ್ವೀಟ್‌ ವಾರ್‌ ನಡೆದಿದೆ.

Advertisement

ಪ್ರಿಯಾಂಕ್‌ ಖರ್ಗೆ ರಾಜ್ಯದ ಅಭಿವೃದ್ಧಿ, ಕುಟುಂಬ ರಾಜಕಾರಣ, ಕಾಂಗ್ರೆಸ್‌ ಕೊಡುಗೆ ಬಗ್ಗೆ ಬಹಿರಂಗ ಚರ್ಚೆಗೆ ಬರುವಂತೆ ಪ್ರತಾಪ್‌ಸಿಂಹಗೆ ಸವಾಲು ಹಾಕಿದ್ದಾರೆ. ಇಬ್ಬರ ನಡುವೆ ನೇರಾನೇರ ವಾಗ್ಧಾಳಿ ನಡೆದಿದೆ. ನಂಜನಗೂಡು ಮತ್ತು ಗುಂಡ್ಲುಪೇಟೆ ಉಪ ಚುನಾವಣೆಯ ಫ‌ಲಿತಾಂಶ ನಿಜವಾದ ಕೆಲಸಕ್ಕಿಂತ ಮಾತೇ ಬಂಡವಾಳ ಮಾಡಿಕೊಂಡಿರುವ ಪೇಪರ್‌ ಸಿಂಹಗಳಿಗೆ ಈಗಲಾದರೂ ನಮ್ರತೆಯನ್ನು ಕಲಿಸುವುದನ್ನು ನಿರೀಕ್ಷಿಸಬಹುದೇ ? ಎಂದು ಪ್ರಿಯಾಂಕ್‌ ಖರ್ಗೆ ಮೊದಲು ಟ್ವೀಟ್‌ ಮಾಡಿದ್ದಾರೆ. ಅದಕ್ಕೆ ಉತ್ತರವಾಗಿ ಟ್ವೀಟ್‌ ಮಾಡಿರುವ ಸಂಸದ ಪ್ರತಾಪ್‌ ಸಿಂಹ, ನಾನು ನನ್ನ ಸ್ವಂತ ಶಕ್ತಿಯಿಂದ ಮೇಲೆ ಬಂದು ಚುನಾವಣೆಯಲ್ಲಿ ಜಯ ಗಳಿಸಿದ್ದೇನೆ. ಹಳೇ ಮೈಸೂರು ಭಾಗದಲ್ಲಿ ಅದೂ ನಿಮ್ಮ ಸಿಎಂ ತವರು ಜಿಲ್ಲೆಯಲ್ಲಿ ಜನರ ಆಶೀರ್ವಾದದಿಂದ ಬಿಜೆಪಿಯ ಏಕ ಮಾತ್ರ ಎಂಪಿಯಾಗಿ ಆಯ್ಕೆಯಾಗಿದ್ದೇನೆ. ನೀವು ಮತ್ತು ನಿಮ್ಮ ತಂದೆ ಪ್ರಧಾನಿ ಮೋದಿಯ ಹಾಗೆ ಸಾಮಾನ್ಯ ಕ್ಷೇತ್ರದಲ್ಲಿ ಚುನಾವಣೆ ನಿಂತು ಜಯಗಳಿಸಿ.

ನಿಮ್ಮ ತಂದೆ ನಿಮಗೆ ಮಂತ್ರಿ ಸ್ಥಾನ ಕೊಡಿಸಲು ತಮ್ಮ ಕನಸಿನ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟರು ಅಂತ ತಿರುಗೇಟು ನೀಡಿದ್ದಾರೆ. ಸಿಂಹ ಮಾತಿಗೆ ಮರು ಟ್ವೀಟ್‌ ಮಾಡಿರುವ ಪ್ರಿಯಾಂಕ್‌, ಮೈಸೂರು-ಕೊಡಗು ಕ್ಷೇತ್ರದ ಎಂಪಿ ಟಿಕೆಟ್‌ ಹೇಗೆ ಸಿಕ್ಕಿತೆಂದು ಜನರಿಗೆ ಹೇಳಿ ಬಿಡಿ, ಜನಾಭಿಪ್ರಾಯದ ಮೂಲಕ ಟಿಕೆಟ್‌ ಪಡೆದಿದ್ದೀರಾ ಅಥವಾ ಹೇಗೆ ಅಂತ ಜನರಿಗೆ ತಿಳಿಯಲಿ. ನಿಮ್ಮ ಬಗ್ಗೆ ನನಗೆ ಕನಿಕರ ಆಗುತ್ತದೆ. ಅಭಿವೃದ್ಧಿ ವಿಷಯದ ಮೇಲೆ ಚರ್ಚೆ ಮಾಡುವುದಾದರೆ, ನಾನು ಚರ್ಚೆಗೆ ಸಿದ್ಧ ಎಂದು ಸವಾಲು ಹಾಕಿದ್ದಾರೆ. ಅಂಬೇಡ್ಕರ್‌ ಜಯಂತಿ ದಿನ ಅಂಬೇಡ್ಕರ್‌ ಮತ್ತು ಸಂವಿಧಾನದ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಿ ಸಾಧ್ಯವಾದರೆ, ನೀವು ಸಂಸದರಿದ್ದೀರಿ, ಮೀಸಲು ವ್ಯವಸ್ಥೆಯನ್ನು ತೆಗೆದು ಹಾಕಲು ನಿಮ್ಮ ಪ್ರಧಾನಿಗೆ ಹೇಳಿ ಎಂದಿದ್ದಾರೆ. ಅದಕ್ಕೆ ಪ್ರತ್ಯುತ್ತರ ನೀಡಿರುವ ಪ್ರತಾಪ್‌ ಸಿಂಹ, ಅಂಬೇಡ್ಕರ್‌ ಅವರನ್ನು ಸೋಲಿಸಿದವರು ಕಾಂಗ್ರೆಸ್‌ನವರು ಎಂದು ಪ್ರತ್ಯುತ್ತರ ನೀಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next