Advertisement
ಚಿತ್ತಾಪುರ ತಾಲೂಕಿನ ನಾಲವಾರ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಅಡಿಗಲ್ಲು ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಠಿ ಮಾಡುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಗೆ ಭರವಸೆ ನೀಡಿದ್ದರು. ಆದರೆ ಆ ಭರವಸೆ ಈಗ ಸಂಪೂರ್ಣ ಮಣ್ಣಾಗಿದೆ.
Related Articles
Advertisement
ಚುನಾವಣೆಯಲ್ಲಿ ನನಗೆ ಒಂದೋ ಎರಡೋ ಮತಗಳನ್ನು ಕೊಟ್ಟ ಪ್ರತಿ ತಾಂಡಾಗಳಿಗೂ ಅನುದಾನ ಹಂಚಿಕೆ ಮಾಡಿ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಸಂಸದ ಡಾ.ಉಮೇಶ ಜಾಧವ ಅವರು ಬಂಜಾರಾರರ ಧರ್ಮ ಗುರು ರಾಮರಾವ ಮಹಾರಾಜರ ನಕಲಿ ಸಹಿ ಮಾಡಿಸಿ ಬಂಜಾರ ಸಮುದಾಯವನ್ನು ಎಸ್‌ಟಿಗೆ ಸೇರಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಕೊಟ್ಟು ಇಡೀ ಜನಾಂಗಕ್ಕೆ ಮೋಸ ಮಾಡಿದ್ದಾರೆ. ಆದರೂ ಯಾರೂ ಪ್ರಶ್ನಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಪ್ರಿಯಾಂಕ್, ಚಿತ್ತಾಪುರದಲ್ಲಿ ಅಭಿವೃದ್ಧಿ ವಿಷಯ ಕುರಿತು ಚರ್ಚೆಗೆ ಬರದೆ ಬಿಜೆಪಿಗರು ಹಿಂದುತ್ವದ ಹೆಸರಿನಲ್ಲಿ ಕೋಮು ಸಂಘರ್ಷ ಸೃಷ್ಠಿಸಲು ತಂತ್ರ ಹೆಣೆಯುತ್ತಿದ್ದಾರೆ. ಕೋಮು ಸೌರ್ಹಾಧತೆಯ ನಾಗಾವಿ ನಾಡಿನಲ್ಲಿ ಹುಳಿ ಹಿಂಡುವ ಹೇಡಿಗಳು ಕಾಲಿಟ್ಟಿದ್ದಾರೆ ಎಂದರು.
ಗ್ರಾಪಂ ಅಧ್ಯಕ್ಷೆ ಮಲ್ಲಮ್ಮ ಜಾಲಗಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಮಹೆಮೂದ್ ಸಾಹೇಬ, ಕಾಂಗ್ರೆಸ್ ಮುಖಂಡರಾದ ವೀರಣ್ಣಗೌಡ ಪರಸರೆಡ್ಡಿ, ಶಿವಾನಂದ ಪಾಟೀಲ ಮರತೂರ, ಭೀಮಣ್ಣ ಸಾಲಿ, ಟೋಪಣ್ಣ ಕೋಮಟೆ, ರಮೇಶ ಮರಗೋಳ, ಶಿವುರೆಡ್ಡಿಗೌಡ ಇರೆಡ್ಡಿ, ಶ್ರೀನಿವಾಸ ಸಗರ, ಅಬ್ದುಲ್ ಅಜೀಜ್‌ಸೇಠ, ಶಂಕ್ರಯ್ಯಸ್ವಾಮಿ ಮದರಿ, ಸುಭಾಷ ಯಾಮೇರ, ಶಿವುರುದ್ರ ಭೀಣಿ, ಮಲ್ಲಣ್ಣಗೌಡ ಪೊಲೀಸ್ ಪಾಟೀಲ, ಮಲ್ಲಿನಾಥಗೌಡ ಸನ್ನತಿ, ಶರಣಗೌಡ ಮಾಲಿಪಾಟೀಲ, ಜಗದೀಶ ಸಿಂಧೆ, ಸಾಯಬಣ್ಣ ಹೊಸಮನಿ, ಜುಮ್ಮಣ್ಣ ಪೂಜಾರಿ, ತಿಪ್ಪಣ್ಣ ವಗ್ಗರ ಸೇರಿದಂತೆ ಸಾವಿರಾರು ಜನ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು. ಯುವ ಕಾಂಗ್ರೆಸ್ ಅಧ್ಯಕ್ಷ ಶರಣು ವಾರದ್ ನಿರೂಪಿಸಿ, ವಂದಿಸಿದರು.