Advertisement
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರೀಕ್ಷೆಯಲ್ಲಿ ಅಕ್ರಮ ನಡೆಸಿದವರು ನೇರವಾಗಿ ಸರಕಾರಕ್ಕೆ ಚಾಲೆಂಜ್ ಮಾಡುತ್ತಿದ್ದರೂ, ಸರಕಾರ ಕೈಲಾದಂತೆ ಸುಮ್ಮನೆ ಕುಳಿತಿದೆ. ವಿಚಾರಣೆ ವೇಳೆ ಉನ್ನತ ಅಧಿಕಾರಿಗಳು, ಮಂತ್ರಿಗಳ ಹೆಸರು ಹೇಳುತ್ತೇನೆ. ಬಂಧಿಸುತ್ತೀರಾ? ಎಂದು ರುದ್ರಗೌಡ ಪ್ರಶ್ನಿಸಿದ್ದಾನೆಂದು ಗೊತ್ತಾಗಿದೆ. ಆದರೂ, ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಮತ್ತು ತಂಡವನ್ನು ಉಳಿಸುವ ನಿಟ್ಟಿನಲ್ಲಿ ಇಡೀ ಸರಕಾರ ಒಂದು ಅಕ್ರಮವನ್ನು ಸರಿಯಾಗಿ ತನಿಖೆ ಮಾಡದೆ ಮುಚ್ಚಿ ಹಾಕುವ ನಿಟ್ಟಿನಲ್ಲಿ ಬೇಕಾದ ತಯಾರಿ ಮಾಡಿಕೊಳ್ಳುತ್ತಿದೆ ಎಂದು ಆಪಾದನೆ ಮಾಡಿದರು.
Related Articles
Advertisement
ಡಿವೈಎಸ್ಪಿ ಶಾಂತಕುಮಾರ್ ಬಂಧನ ವಿಚಾರ ನನಗೆ ಗೊತ್ತಿಲ್ಲ. ಯಾವ ಕಾರಣಕ್ಕೆ ಶಾಂತಕುಮಾರ್ ರನ್ನು ಬಂಧಿಸಿದೆಂದು ಗೊತ್ತಿಲ್ಲ. ಪ್ರಕರಣದ ಸಂಬಂಧ ಸೂತ್ರಧಾರಿಗಳು, ಪಾತ್ರಧಾರಿಗಳು, ನಿರ್ಮಾಪಕರು, ನಿರ್ದೇಶಕರು ಸರ್ಕಾರದಲ್ಲೇ ಇದ್ದಾರೆ. ಅವರನ್ನೇ ಕೇಳಬೇಕು. ದಿವ್ಯಾ ಜೈಲಿಗೆ ಹೋಗಿದ್ದರೂ, ದಿಶಾ ಸಮಿತಿ, ಕೆಎನ್‌ಸಿ ಬೋರ್ಡ್ ಸದಸ್ಯೆಯಾಗಿರುವುದು ಸರಕಾರಕ್ಕೆ ನಾಚಿಕೆಗೇಡಲ್ಲವೇ ಎಂದು ಪ್ರಶ್ನಿಸಿದರು.
ಆಜಾನ್ ಕಿರಿಕಿರಿ ಯಾರು ಮಾಡಿದ್ದು?: ಆಜಾನ್ ಕುರಿತು ಸರಕಾರದ ನಡೆ ಆಕ್ಷೇಪಿಸಿದ ಪ್ರಿಯಾಂಕ್, ಮೊದಲು ಸುಖಾಸಮುಮ್ಮನೆ ಕಿರಿಕಿರಿ ಆರಂಭಿಸಿದ್ದುಯಾರು?. ಆಜಾನ್ ಬಗ್ಗೆ ಸುಪ್ರೀಂ ಕೋರ್ಟ್ ಗೈಡ್‌ಲೈನ್ ಇದೆ. ಸುಪ್ರೀಂ ಕೋರ್ಟ್ ಆದೇಶ ಇಂಪ್ಲಿಮೆಂಟ್ ಮಾಡಲು ಸರ್ಕಾರಕ್ಕೆ ಯಾಕೆ ಕಷ್ಟವಾಗ್ತಿದೆ. ಆಜಾನ್ ನೀಡಲು ಇಷ್ಟೇ ಡೆಸಿಬಲ್ ಶಬ್ದ ಬಳಸಬೇಕೆಂದು ರೂಲ್ ಮಸೀದಿ, ಮಂದಿರ, ಚರ್ಚ್ಗಳಿಗೂ ಅನ್ವಯಿಸುತ್ತದೆ. ಹೆಚ್ಚಿದ್ದರೆ, ಅನುಮತಿ ಪಡೆಯದಿದ್ದರೆ ನೋಟೀಸ್ ಕೊಡಿ. ಅದನ್ನು ಬಿಟ್ಟು ಇಷ್ಟು ದೊಡ್ಡ ಡ್ರಾಮಾ ಆಡುವ, ಆಡಿಸುವ ಅಗತ್ಯವಿರಲಿಲ್ಲ ಎಂದು ಚಾಟಿ ಬೀಸಿದರು.
ಆರ್‌ಎಸ್‌ಎಸ್ ಅಜಂಡಾ ಆಗಿರುವ ಮತಾಂತರ ಕಾಯಿದೆ ಜಾರಿಗೆ ತರಲು ತೋರುತ್ತಿರುವ ಉತ್ಸುಕತೆ, ಪಿಎಸ್‌ಐ ಅಕ್ರಮ ಬಯಲಿಗೆಳೆಯುವಲ್ಲಿ ಇಲ್ಲ ಎಂದ ಅವರು, ಅಶ್ವಥ್ ನಾರಾಯಣ ಅವರು ಎಂ.ಬಿ.ಪಾಟೀಲ ಅವರನ್ನು ಭೇಟಿ ಆಗಿರುವ ಕುರಿತು ನನಗೆ ಹೆಚ್ಚು ಗೊತ್ತಿಲ್ಲ. ಈ ಕುರಿತು ಡಿಕೆಶಿ ಅವರು ಆಗಲೇ ಹೇಳಿಕೆ ನೀಡಿದ್ದಾರಲ್ಲ ಎಂದರು.