ಬೆಂಗಳೂರು: ‘ಮಾತು ಮನೆ ಕೆಡಿಸ್ತು, ತೂತು ಒಲೆ ಕೆಡಿಸ್ತು’ ಎಂಬ ಗಾದೆ ಮಾತಿನ ಮೂಲಕ ಪಕ್ಷದ ನಾಯಕರ ಹೇಳಿಕರ ಬಗ್ಗೆ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಸ್ವ ಪಕ್ಷದ ನಾಯಕರ ಸಿಎಂ ಗಾದಿ ಕಿತ್ತಾಟದ ಬಗ್ಗೆ ಅಸಮಾಧಾನ ಹೊರ ಹಾಕಿದರು.
ಪಕ್ಷವನ್ನ ಅಧಿಕಾರಕ್ಕೆ ತರಲು ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಬಹುಮತ ಬಂದಾಗ ಶಾಸಕರು ಅಭಿಪ್ರಾಯ ವ್ಯಕ್ತಪಡಿಸಬೇಕು. ಆ ಬಳಿಕ ಸಿಎಂ ಯಾರು ಎನ್ನುವುದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಸಿಎಲ್‌ಪಿ ಹಾಗೂ ಕೆಪಿಸಿಸಿ ಅಧ್ಯಕ್ಷರಿಗೆ ಪಕ್ಷದಲ್ಲಿ ಗೌರವ ಸ್ಥಾನ ಸಿಗಲಿದೆ. ಈಗಲೇ ಸಿಎಂ ವಿಚಾರವಾಗಿ ಮಾತನಾಡುವುದು ಸರಿಯಲ್ಲ ಎಂದರು.
ಇದನ್ನೂ ಓದಿ:ವಿದ್ಯಾರ್ಥಿನಿಗೆ ಬುದ್ದಿವಾದ ಹೇಳಿದ್ದಕ್ಕೆ ಶಿಕ್ಷಕಿಯನ್ನು ವಿವಸ್ತ್ರಗೊಳಿಸಿದ ಪೋಷಕರು
ತನ್ನ ಅಭಿಪ್ರಾಯದಿಂದ ಬೇರೆಯವರಿಗೆ ನೋವಾಗಬಾರದು ಎನ್ನುವುದನ್ನು ಅರಿತು ಕೊಳ್ಳಬೇಕು. ತಮ್ಮ ಅಭಿಪ್ರಾಯವನ್ನು ಎಲ್ಲಿ ವ್ಯಕ್ತಪಡಿಸಬೇಕೋ ಅಲ್ಲಿ ಹೇಳಬೇಕು. ಹೈಕಮಾಂಡ್, ಸಿಎಲ್‌ಪಿ ಸಭೆಯಲ್ಲಿ ವ್ಯಕ್ತಪಡಿಸಲಿ. ಅಭಿಪ್ರಾಯ ವ್ಯಕ್ತಪಡಿಸಲು ಎಲ್ಲರಿಗೂ ಸ್ವಾತಂತ್ರ್ಯವಿದೆ. ಆದರೆ ಸಾರ್ವಜನಿಕವಾಗಿ ಅಭಿಪ್ರಾಯ ಹೊರ ಹಾಕಬಾರದು ಎಂದರು.
ಕಾಂಗ್ರೆಸ್ ನಲ್ಲಿ ದಲಿತ ಸಿಎಂ ಅವಕಾಶವಿಲ್ಲ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಪ್ರಿಯಾಂಕ್, ಗೋವಿಂದ ಕಾರಜೋಳರನ್ನು ಡಿಸಿಎಂ ಸ್ಥಾನದಿಂದ ಇಳಿಸಿದರು. ಎಂಎಲ್ಸಿ ಕೈಯಲ್ಲಿ ಚಡ್ಡಿ ಹೊರಿಸಿದ್ದಾರೆ ಎಂದು ಆರೋಪಿಸಿದರು