Advertisement
ವಿಕಾಸಸೌಧದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೂಡಿಕೆದಾರರನ್ನು ರಾಜ್ಯಕ್ಕೆ ಕರೆತರುವವರು ನಾವು, ಹೂಡಿಕೆ ಮಾಡುವಂತೆ ಅವರ ಮನವೊಲಿಸುವವರು ನಾವು. ಅದಕ್ಕಾಗಿ ಕಷ್ಟಪಡುವವರು ನಾವು. ಅದರ ಫಲ ತೆಗೆದುಕೊಂಡು ಹೋಗುವವರು ಅವರು (ಪ್ರಧಾನಿಗೆ) ಎಂದರೆ ಹೇಗೆ? ಪ್ರಧಾನಿಯೇ ಫೋನ್ ಮಾಡಿ ಹೇಳಿದರೆ, ಉದ್ಯಮಿಗಳಾದರೂ ಏನು ಮಾಡುತ್ತಾರೆ. ನೀವೇ ಹೇಳಿ?’ ಎಂದು ಕೇಳಿದರು.
Related Articles
ಈ ಮಧ್ಯೆ ಬಂಡವಾಳ ಹೂಡಿಕೆ ಆಕರ್ಷಣೆ ವಿಚಾರದಲ್ಲಿ ಗುಜರಾತ್ ಮಾದರಿಯ ಸಬ್ಸಿಡಿ ಸೇರಿದಂತೆ ಮತ್ತಿತರ ಉತ್ತೇಜನಕರ ಸೌಲಭ್ಯಗಳನ್ನು ನೀಡಬೇಕು ಎಂಬ ಕೂಗು ದಿನದಿಂದ ದಿನಕ್ಕೆ ಪ್ರಬಲವಾಗುತ್ತಿದ್ದು, ಈ ಸಂಬಂಧ ಖುದ್ದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗುವುದಾಗಿ ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದರು.
Advertisement
ಗುಜರಾತ್ ಸಬ್ಸಿಡಿ ವಿಚಾರದಲ್ಲಿ ಮೊದಲಿಗೆ ಕುಮಾರಸ್ವಾಮಿ ಅಸಮಾಧಾನ ಹೊರಹಾಕಿದ್ದರು. ನಂತರ ತಮ್ಮ ಹೇಳಿಕೆ ತಿರುಚಲಾಗಿದೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಈಚೆಗೆ ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ಹೂಡಿಕೆದಾರರನ್ನು ಆಕರ್ಷಿಸಲು ಪ್ರಧಾನಿ ನರೇಂದ್ರ ಮೋದಿ ಅವರ ತವರು ಗುಜರಾತಿಗೆ ನೀಡುವ ಪ್ರೋತ್ಸಾಹಕ ಸೌಲಭ್ಯಗಳನ್ನು ಕೇಂದ್ರ ಸರ್ಕಾರ ಕರ್ನಾಟಕ್ಕೂ ನೀಡಬೇಕು ಎಂದು ಒತ್ತಾಯಿಸಿದ್ದರು. ಈಗ ಇದಕ್ಕೆ ಪ್ರಿಯಾಂಕ ಖರ್ಗೆ ಕೂಡ ದನಿಗೂಡಿಸಿದ್ದು, ಜೂನ್ 27ರಂದು ದೆಹಲಿಗೆ ಹೊರಟಿದ್ದೇನೆ. ಈ ವೇಳೆ ಹಣಕಾಸು ಸಚಿವರಿಗೆ ಈ ಸಂಬಂಧ ಒತ್ತಾಯಿಸಲಾಗುವುದು ಎಂದು ಹೇಳಿದರು.
ಗುಜರಾತಿಗೆ ನೀಡುವ ಸೌಲಭ್ಯಗಳನ್ನು ಇತರ ರಾಜ್ಯಗಳಿಗೂ ನೀಡಬೇಕು ಎಂಬ ಒತ್ತಾಯ ಬಹುತೇಕರದ್ದಾಗಿದೆ. ಈಚೆಗೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಕೂಡ ಈ ನಿಟ್ಟಿನಲ್ಲಿ ಪ್ರಸ್ತಾಪಿಸಿದ್ದನ್ನು ಸ್ಮರಿಸಬಹುದು ಎಂದೂ ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದರು.