Advertisement

ಪ್ರಿಯಾಂಕ್‌ ಜನ್ಮದಿನ: ಪ್ರವಾಹ ಸಂತ್ರಸ್ತರಿಗೆ ಕಿಟ್‌

05:11 PM Nov 22, 2020 | Suhan S |

ವಾಡಿ: ಸಮೀಪದ ಕಡಬೂರ ಗ್ರಾಮದ ಭೀಮಾ ಪ್ರವಾಹ ಸಂತ್ರಸ್ತ ಕುಟುಂಬಗಳ ಮಧ್ಯೆ ಚಿತ್ತಾಪುರ ಶಾಸಕ, ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ ಅವರ 42ನೇ ಜನ್ಮದಿನ ಆಚರಿಸುವ ಮೂಲಕ ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರು ಸರಳತೆ ಮರೆದರು.

Advertisement

ಅದ್ಧೂರಿ ಸಮಾರಂಭ ಕೈಬಿಟ್ಟು, ಶಾಸಕ ಪ್ರಿಯಾಂಕ್‌ ಹೆಸರಿನಲ್ಲಿ ಕೇಕ್‌ ಕತ್ತರಿಸಿ ಪ್ರವಾಹ ಸಂತ್ರಸ್ತ ಮಕ್ಕಳಿಗೆ ಸಿಹಿ ತಿನಿಸುವ ಜತೆಗೆ ಎಣ್ಣೆ, ಸಾಬೂನು, ಟೂತ್‌ಬ್ರೆಶ್‌, ಟೂತ್‌ಪೇಸ್ಟ್‌, ಮಾಸ್ಕ್ ಸೇರಿದಂತೆ ಇನ್ನಿತರ ದಿನಬಳಕೆ ವಸ್ತುಗಳ ಕಿಟ್‌ ವಿತರಿಸಿದರು.

ಸಮಾರಂಭ ಉದ್ದೇಶಿಸಿ ಮಾತನಾಡಿದ ಚಿತ್ತಾಪುರ ತಾಲೂಕಿನ ಹಿರಿಯ ಕಾಂಗ್ರೆಸ್‌ ಮುಖಂಡ ವೀರಣ್ಣಗೌಡ ಪರಸರೆಡ್ಡಿ,ಸರಕಾರದಿಂದ ಸಾವಿರಾರು ಕೋಟಿ ರೂ.ಅನುದಾನ ತರುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಮುನ್ನುಡಿ ಬರೆದು ಜಾತ್ಯತೀತನಾಯಕನಾಗಿ ಜನಪರ ಯೋಜನೆಗಳನ್ನುಜಾರಿಗೆ ತಂದ ಪ್ರಿಯಾಂಕ್‌ ಖರ್ಗೆ ಕಲ್ಯಾಣ ನಾಡಿನ ಪ್ರಬುದ್ಧ ಯುವ ರಾಜಕಾರಣಿಯಾಗಿದ್ದಾರೆ ಎಂದರು.ಭ್ರಷ್ಟಾಚಾರ ಹಾಗೂ ಜಾತಿ ರಾಜಕಾರಣದಿಂದ ದೂರವಿದ್ದು ಎಲ್ಲರೂ ನನ್ನವರು ಎನ್ನುತ್ತ ಬುದ್ಧ, ಬಸವ, ಅಂಬೇಡ್ಕರ್‌ ತತ್ವದ ತಳಹದಿ ಮೇಲೆಹೆಜ್ಜೆಯಿಡುತ್ತಿರುವ ನಾಯಕನಾಗಿ ಪ್ರಿಯಾಂಕ್‌ ಹೊರಹೊಮ್ಮಿದ್ದಾರೆ. ಆಳುವ ಪಕ್ಷಗಳ ಎಡಬಿಡಂಗಿ ನೀತಿಗಳ ವಿರುದ್ಧ ಸಿಡಿಯುವ ಮೂಲಕ ಪ್ರಜಾತಂತ್ರ ಉಳಿಸಿದ್ದಾರೆ ಎಂದು ಹೇಳಿದರು.

ಭೀಕರ ಪ್ರವಾಹದಿಂದ ತತ್ತರಿಸಿದ ಭೀಮಾನದಿ ದಂಡೆಯ ಗ್ರಾಮಸ್ಥರ ನೆರವಿಗೆ ಬರಬೇಕಾದ ರಾಜ್ಯ ಬಿಜೆಪಿ ಸರಕಾರ, ಪ್ರವಾಹ ಪೀಡಿತರ ಮುಂದೆ ಮೊಸಳೆ ಕಣ್ಣೀರು ಸುರಿಸಿ, ಕೇವಲ ಹುಸಿ ಭರವಸೆ ಕೊಟ್ಟಿದೆ. ಜನರು ಬದುಕು ಕಟ್ಟಿಕೊಳ್ಳಲು ತಕ್ಷಣಕ್ಕೆ ಪರಿಹಾರ ಒದಗಿಸದೆ ವಿಳಂಬ ನೀತಿ ಅನುಸರಿಸುತ್ತಿದೆ. ಯಾವುದೇ ಕಾರಣಕ್ಕೂ ಪ್ರವಾಹ ಸಂತ್ರಸ್ತರ ಪರಿಹಾರ ವಿತರಣೆಯಲ್ಲಿ ತಡವಾಗಬಾರದು.

ಬೆಳೆ ಪರಿಹಾರವನ್ನು ಶೀಘ್ರವೇ ಪಾವತಿಸಬೇಕು ಎಂದು ಸರಕಾರವನ್ನು ಆಗ್ರಹಿಸಿದರು. ಕಡಬೂರ ಗ್ರಾಮ ಸ್ಥಳಾಂತರಿಸಲು ಶಾಸಕ ಪ್ರಿಯಾಂಕ್‌ ಖರ್ಗೆ ಒಪ್ಪಿದ್ದು, ಗ್ರಾಮಸ್ಥರು ತಮ್ಮನಿಲುವು ಪ್ರಕಟಿಸಬೇಕು ಎಂದು ಸಲಹೆ ನೀಡಿದರು.

Advertisement

ಯುವ ಕಾಂಗ್ರೆಸ್‌ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣು ವಾರದ್‌ ಮಾತನಾಡಿದರು. ಕಾಂಗ್ರೆಸ್‌ ಮುಖಂಡರಾದ ಶಿವರಾಜ ಪಾಟೀಲ ತುನ್ನೂರ, ರುದ್ರುಮುನಿ ಮಠಪತಿ ಕೊಂಚೂರ, ಸಿದ್ದರಾಜ ಮದ್ರಿಕಿ, ಚಂದ್ರು ಲೇವಡಿ, ಸಂಜೀವಕುಮಾರ ಕುಲಕರ್ಣಿ, ಶರಣು ಕೆಂಚಗುಂಡಿ, ಸಂಗಣ್ಣಗೌಡ ಅಣಬಿ, ಭಾಷಾ ಪಟೇಲ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next