ಇಂದಿನ ದಿನಗಳಲ್ಲಿ ಚಿತ್ರರಂಗದ ಬಹುತೇಕ ಸ್ಟಾರ್, ನಟ-ನಟಿಯರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮದೇ ಖಾತೆಯನ್ನು ಮಾಡಿಕೊಂಡು, ತಮ್ಮ ಹೊಸ ಹೊಸ ವಿಷಯಗಳನ್ನು ಅಭಿಮಾನಿಗಳ ಜೊತೆ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಅನೇಕ ಸ್ಟಾರ್ ತಮ್ಮ ಸಿನಿಮಾ, ಅಭಿರುಚಿ ಎಲ್ಲದರ ಬಗ್ಗೆ ಆಗಾಗ್ಗೆ ಮಾಹಿತಿ ನೀಡುತ್ತ ಆ್ಯಕ್ಟೀವ್ ಆಗಿರುತ್ತಾರೆ.
ಇನ್ನೂ ಕೆಲವರೂ ಒಂದು ಹೆಜ್ಜೆ ಮುಂದೆ ಹೋಗಿ ಯು-ಟ್ಯೂಬ್ನಲ್ಲಿ ತಮ್ಮದೇ ಆದ ಚಾನೆಲ್ ಕೂಡ ಶುರುಮಾಡಿ, ಹೊಸ ಹೊಸ ವಿಡಿಯೋಗಳ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ಈಗ ಆ ಸಾಲಿಗೆ ಸೇರುತ್ತಿರುವ ಮತ್ತೂಂದು ಹೊಸ ಹೆಸರು ಪ್ರಿಯಾಮಣಿ ಅವರದ್ದು.
ಇದನ್ನೂ ಓದಿ:ಕಾಲಿವುಡ್ ನತ್ತ ಹೊರಟ ರಾಗಿಣಿ
ಹೌದು, ಪ್ರಿಯಾಮಣಿ ಯು-ಟ್ಯೂಬ್ನಲ್ಲಿ ತನ್ನದೇ ಆದ ಒಂದು ಚಾನೆಲ್ ಶುರು ಮಾಡಿದ್ದಾರೆ. ಈಗಾಗಲೇ ಫೇಸ್ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್ನಲ್ಲೂ ಆ್ಯಕ್ಟೀವ್ ಆಗಿರುವ ಪ್ರಿಯಾಮಣಿಗೆ ದೊಡ್ಡ ಸಂಖ್ಯೆಯಲ್ಲಿ ಫಾಲೋವರ್ ಇದ್ದಾರೆ. ಕೆಲ ಸಮಯದ ಹಿಂದೆ ಪ್ರಿಯಾಮಣಿ ತಮ್ಮದೇ ಆದ ಯು-ಟ್ಯೂಬ್ ಚಾನೆಲ್ ಶುರು ಮಾಡಿದ್ದರೂ, ಅದರಲ್ಲಿ ಸಕ್ರಿಯವಾಗಿರಲಿಲ್ಲ.
ಈಗ ಪ್ರಿಯಾಮಣಿ ಯು-ಟ್ಯೂಬ್ ಚಾನೆಲ್ನ ಚಂದಾದಾರರ ಸಂಖ್ಯೆ 1 ಲಕ್ಷಕ್ಕೆ ಏರಿಕೆಯಾಗಿದ್ದು, ಇದೇ ಖುಷಿಯಲ್ಲಿರುವ ಪ್ರಿಯಾಮಣಿ ಸಿನಿಮಾದ ಜೊತೆಗೆ ಅಡುಗೆ ಮತ್ತಿತರ ವಿಷಯಗಳ ವಿಡಿಯೋಗಳನ್ನು ಹಂಚಿಕೊಳ್ಳುವ ಯೋಚನೆಯಲ್ಲಿದ್ದಾರಂತೆ.