Advertisement

ಸುಪ್ರೀಂ ಮೆಟ್ಟಿಲೇರಿದ ಕಣ್‌ಸನ್ನೆಯ ಚೆಲುವೆ

12:00 PM Feb 20, 2018 | Team Udayavani |

ನವದೆಹಲಿ/ಹೈದರಾಬಾದ್‌: ಇಡೀ ವಿಶ್ವದ ಗಮನ ಸೆಳೆದ ಕಣ್‌ಸನ್ನೆಯ ಚೆಲುವೆ, ನಟಿ ಪ್ರಿಯಾ ಪ್ರಕಾಶ್‌ ವಾರಿಯರ್‌ ಮತ್ತೆ ಸುದ್ದಿಯಲ್ಲಿದ್ದಾರೆ. ತಾವು ನಟಿಸಿರುವ “ಒರು ಅಡಾರ್‌ ಲವ್‌’ ಮಲಯಾಳಂ ಚಿತ್ರ ತಂಡ ಹಾಗೂ ತಮ್ಮ ವಿರುದ್ಧದ ಕ್ರಿಮಿನಲ್‌ ವಿಚಾರಣೆಯನ್ನು ಕೈಬಿಡುವಂತೆ ಕೋರಿ ಅವರು ಇದೀಗ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.

Advertisement

ಸೋಮವಾರ ಸಲ್ಲಿಸಲಾಗಿರುವ ಅರ್ಜಿಯಲ್ಲಿ, ತಮ್ಮ ವಿರುದ್ಧದ ಕ್ರಿಮಿನಲ್‌ ವಿಚಾರಣೆಗೆ ತಡೆಯಾಜ್ಞೆಗೆ ಹಾಗೂ ಅರ್ಜಿಯ ತುರ್ತು ವಿಚಾರಣೆಗೆ
ಕೋರಲಾಗಿದೆ. ಅದರಂತೆ, ಮಂಗಳವಾರ ಸಿಜೆಐ ದೀಪಕ್‌ ಮಿಶ್ರಾ ನೇತೃತ್ವದ ಪೀಠ ಅರ್ಜಿಯ ವಿಚಾರಣೆ ನಡೆಸುವ ಸಾಧ್ಯತೆಯಿದೆ.

ಇತ್ತೀಚೆಗೆ ಸಿನಿಮಾದ ಹಾಡಿನಲ್ಲಿ ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ ತೆಲಂ ಗಾಣ ಹಾಗೂ ಮಹಾರಾಷ್ಟ್ರಗಳಲ್ಲಿ ದೂರು ದಾಖಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next