Advertisement

ಪ್ರಾಣಿಗಳ ಹಿಂಸೆ ವಿರೋಧಿಸಿದ ಪ್ರಿಯಾ

01:12 AM Jun 08, 2019 | mahesh |

ವಾಷಿಂಗ್ಟನ್‌: ಭಾರತೀಯ ಮೂಲದ ಪ್ರಾಣಿ ಹಕ್ಕುಗಳ ಹೋರಾಟಗಾರ್ತಿ ಪ್ರಿಯಾ ಸಾವ್ನೆ ಕ್ಯಾಲಿಫೋರ್ನಿಯಾದ ಸಮಾರಂಭದಲ್ಲಿ ಅಮೆಜಾನ್‌ ಸಿಇಒ ಜೆಫ್ ಬೆಜೋಸ್‌ಗೆ ಮುಜುಗರ ಉಂಟು ಮಾಡಿದ್ದಾರೆ. ಬೆಜೋಸ್‌ ಮಾತನಾ ಡುತ್ತಿದ್ದಾಗ ಸ್ಟೇಜ್‌ ಏರಿ ಮಧ್ಯಪ್ರವೇಶಿಸಿದ ಪ್ರಿಯಾ, ನೀವು ವಿಶ್ವದ ಅತಿ ಶ್ರೀಮಂತ ವ್ಯಕ್ತಿ. ತಮ್ಮ ಜಾಲತಾಣದಲ್ಲಿ ಮಾಂಸ ಮಾರಾಟ ನಿಷೇಧಿಸುವ ಮೂಲಕ ನೀವು ಪ್ರಾಣಿಗಳಿಗೆ ಸಹಾಯ ಮಾಡಬಹುದು ಎಂದು ಕೂಗಾಡಿ ದ್ದಾಳೆ. ಈಕೆ ಪ್ರಾಣಿದಯಾ ಸಂಘಟನೆ ಡೈರೆಕ್ಟ್ ಆಕ್ಷನ್‌ ಎವೆರಿವೇರ್‌ ಸಂಸ್ಥೆಯ ಸದಸ್ಯೆಯಾಗಿದ್ದಾಳೆ. ಅಮೆರಿಕದಲ್ಲಿ ಕೋಳಿ ಫಾರಂ ನಿರ್ವಹಿ ಸುತ್ತಿರುವ ಕಂಪನಿಗಳ ವಿರುದ್ಧ ಡಿಎಕ್ಸ್‌ಇ ಹೋರಾಟ ನಡೆಸುತ್ತಿದ್ದು, ಅದೇ ಕಂಪನಿಗಳಿಂದ ಅಮೆಜಾನ್‌ ಕೋಳಿ ಮಾಂಸ ಖರೀದಿಸುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next