Advertisement

ಜನರ ಮನೆ ಬಾಗಿಲಿಗೆ ಸವಲತ್ತು: ಸಚಿವ ಅಶೋಕ

12:50 PM May 28, 2022 | Team Udayavani |

ಬೀದರ: ಜನರ ಮನೆ ಬಾಗಿಲಿಗೆ ವಿವಿಧ ಯೋಜನೆಗಳ ಸೌಲಭ್ಯಗಳನ್ನು ತಲುಪಿಸುವ ಕೆಲಸವನ್ನು ರಾಜ್ಯ ಬಿಜೆಪಿ ಸರ್ಕಾರ ಕಾಳಜಿಯಿಂದ ಮಾಡುತ್ತಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ ಹೇಳಿದರು.

Advertisement

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಂದಾಯ ಇಲಾಖೆಗೆ ಸಂಬಂಧಿ ಸಿದ ಕೆಲಸ ಕಾರ್ಯಗಳನ್ನು ಸರಳಗೊಳಿಸಲಾಗಿದೆ. ಮಾಸಾಶನ, ವೃದ್ಧಾಪ್ಯ ವೇತನಕ್ಕಾಗಿ ಕಚೇರಿ ಸುತ್ತುವ ಕಷ್ಟ ತಪ್ಪಿಸಲಾಗಿದೆ. ಕಂದಾಯ ದಾಖಲೆಗಳಿಗಾಗಿ ರೈತರು ತಿಂಗಳುಗಟ್ಟಲೇ ಓಡಾಡಬೇಕಾಗಿತ್ತು. ಅದನ್ನೂ ಸರಳಗೊಳಿಸಲಾಗಿದೆ ಎಂದರು.

ಸಾಮಾಜಿಕ ಭದ್ರತಾ ಯೋಜನೆಗಳಡಿ ವಿವಿಧ ಸೌಲಭ್ಯಗಳನ್ನು ಪಡೆಯಲು ಜನ ಕಷ್ಟಪಡುತ್ತಿದ್ದರು. ಕಚೇರಿ ಸುತ್ತ ಓಡಾಡಬೇಕಾದ ಕಷ್ಟ ಇತ್ತು. ಅದನ್ನು ಕೊನೆಗೊಳಿಸಲಾಗಿದೆ. 72 ಗಂಟೆಯಲ್ಲಿ ಮಂಜೂರಾತಿ ಪ್ರಮಾಣಪತ್ರ ಸಿಗುವಂತೆ ಮಾಡುವ ಮೂಲಕ ಬಿಜೆಪಿ ಸರ್ಕಾರ ಜನರ ಸಮಸ್ಯೆಗೆ ಸ್ಪಂದಿಸಿದೆ ಎಂದರು.

ಸರ್ಕಾರದ ಜನಪರ, ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಮುಖಂಡರು, ಕಾರ್ಯಕರ್ತರು ಮಾಡಬೇಕು ಎಂದು ಸಚಿವರು ಸಲಹೆ ನೀಡಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವಾನಂದ ಮಂಠಾಳಕರ್‌, ಬುಡಾ ಅಧ್ಯಕ್ಷ ಬಾಬು ವಾಲಿ, ಕೆಎಸ್‌ಐಐಡಿಸಿ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ, ಎನ್‌ಎಸ್‌ಎಸ್‌ಕೆ ಅಧ್ಯಕ್ಷ ಸಿದ್ರಾಮ ಡಿಕೆ, ಮುಖಂಡರಾದ ಜಯಕುಮಾರ ಕಾಂಗೆ, ಗುರುನಾಥ ಜ್ಯಾಂತಿಕರ್‌, ವಿಜಯಕುಮಾರ ಪಾಟೀಲ ಗಾದಗಿ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next