Advertisement
ಅಲ್ಲದೇ, ಬೆಟ್ಟಕ್ಕೆ ಖಾಸಗಿ ವಾಹನ ನಿಷೇಧದ ಬಗ್ಗೆ ಕೆಲವು ಪ್ರವಾಸಿಗರಿಗೆ ಮಾಹಿತಿ ಕೊರತೆ ಇರುವ ಕಾರಣ ಅರಣ್ಯ ಇಲಾಖೆಯಿಂದ ಅರಿವು ಮೂಡಿಸಬೇಕಿದೆ.
Related Articles
Advertisement
ವರ್ಷದ 360 ದಿನವೂ ಗೋಪಾಲಸ್ವಾಮಿ ಬೆಟ್ಟದ ಮೇಲೆ ಹಿಮದ ರಾಶಿ ಹೊದ್ದು ಮಲಗಿರುವ ಕಾರಣ ಪ್ರವಾಸಿಗರ ಸಂಖ್ಯೆ ದಿನ ಕಳೆಯುತ್ತಿದ್ದಂತೆ ಅಧಿಕವಾಗಿದೆ. ಹಿಮದ ರಾಶಿ ದೇವಸ್ಥಾನ ಸುತ್ತಮುತ್ತ ಹಾದು ಹೋಗುವುದು ಮುದ ನೀಡುತ್ತದೆ. ಎಂಥದೇ ಬೇಸಿಗೆ ಇದ್ದರೂ ಬೆಟ್ಟದ ಮೇಲೆ ತಣ್ಣನೆ ವಾತಾವರಣ ಇರುತ್ತದೆ. ಅರಣ್ಯ ಇಲಾಖೆ ವತಿಯಿಂದ ಬೆಟ್ಟಕ್ಕೆ ತೆರಳುವ ಭಕ್ತರು ಹಾಗೂ ಪ್ರವಾಸಿಗರ ಬ್ಯಾಗುಗಳನ್ನು ಪರಿಶೀಲನೆ ಮಾಡಲಾಗುತ್ತದೆ. ಈ ವೇಳೆ ಪ್ಲಾಸ್ಟಿಕ್ ಕಂಡು ಬಂದರೆ ವಶಕ್ಕೆ ಪಡೆದುಕೊಳ್ಳಲಾಗುತ್ತದೆ. ಈ ಮಧ್ಯೆ ಹೂವು, ಹಣ್ಣು, ಕಾಯಿ ಮತ್ತು ಊದುಕಡ್ಡಿ ಯಂತಹ ದೇವರ ಪೂಜೆಗೆ ಬಳಸುವ ಸಾಮಗ್ರಿ ಮಾತ್ರ ತೆಗೆದುಕೊಂಡು ಹೋಗಬಹುದಾಗಿದೆ. ಅಲ್ಲದೇ ಬೆಟ್ಟದಲ್ಲಿ ಪ್ರವಾಸಿಗರು ಒಂದು ಗಂಟೆ ಕಾಲ ಮಾತ್ರ ಇರಲು ಅವಕಾಶ ನೀಡಲಾಗಿದೆ.
ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರತಿನಿತ್ಯ ನೂರಾರು ವಾಹನಗಳಲ್ಲಿ ಸಾವಿರಾರು ಮಂದಿ ಸಂಚಾರ ಮಾಡುತ್ತಿದ್ದು, ತಪ್ಪಲಿನಲ್ಲಿ ಪಾರ್ಕಿಂಗ್‌ಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ಬೆಟ್ಟಕ್ಕೆ ಖಾಸಗಿ ವಾಹನ ನಿರ್ಬಂಧ ಕುರಿತು ಸಾರ್ವಜನಿಕರಿಗೆ ಅರಿವಿಲ್ಲ. ಈ ಬಗ್ಗೆ ಅರಣ್ಯ ಇಲಾಖೆ ನಾಮಫಲಕ ಅಳವಡಿಸಿ ಅರಿವು ಮೂಡಿಸಬೇಕಿದೆ. -ಸಿ.ಮಂಜುನಾಯಕ್, ಪರಿಸರವಾದಿ
ಗೋಪಾಲಸ್ವಾಮಿ ಬೆಟ್ಟಕ್ಕೆ ಖಾಸಗಿ ವಾಹನ ನಿಷೇಧ ಕುರಿತು ನಾಮಫಲಕ ಹಾಕಲು ಕ್ರಮ ವಹಿಸಲಾಗುವುದು. ಜತೆಗೆ ಪ್ಲಾಸ್ಟಿಕ್ ನಿಷೇಧ ಸೇರಿ ಪರಿಸರದ ಕುರಿತು ಪ್ರವಾಸಿಗರಿಗೆ ಅರಿವು ಮೂಡಿಸಲಾಗುವುದು.-ಡಾ.ಪಿ.ರಮೇಶ್ ಕುಮಾರ್, ಅರಣ್ಯ ಸಂರಕ್ಷಣಾಧಿಕಾರಿ, ಬಂಡೀಪುರ ಹುಲಿ ರಕ್ಷಿತ ಪ್ರದೇಶ.
ಬೆಟ್ಟಕ್ಕೆ ಖಾಸಗಿ ವಾಹನ ನಿಷೇಧದಿಂದ ಕೆಎಸ್‌ಆರ್‌ಟಿಸಿ ಬಸ್ ಗಳಲ್ಲಿ ಸುಗಮವಾಗಿ ಸಂಚಾರ ಮಾಡಬಹುದಾಗಿದೆ. ವರ್ಷದಲ್ಲಿ 5-6 ಬಾರಿ ಭೇಟಿ ನೀಡಿ ದೇವರಿಗೆ ಪೂಜೆ ಸಲ್ಲಿಸುವ ಜತೆಗೆ ಹಿಮದ ರಾಶಿಯನ್ನು ಕಣ್ತುಂಬಿಕೊಳ್ಳುತ್ತೇವೆ.-ಮುತ್ತುರಾಜು, ಪ್ರವಾಸಿಗ
– ಬಸವರಾಜು ಎಸ್.ಹಂಗಳ