Advertisement
ಶಿಕ್ಷಣ ಇಲಾಖೆ 2020-21ನೇ ಸಾಲಿಗೆ ಪ್ರವೇಶ ಪಡೆಯುವ ಪ್ರಕ್ರಿಯೆಯನ್ನು ಸದ್ಯದ ಮಟ್ಟಿಗೆ ಮುಂದೂಡಿದ್ದರೂ ಕೆಲವು ಪ್ರತಿಷ್ಠಿತ ಶಾಲೆಗಳು ಆನ್‌ಲೈನ್ ತರಗತಿ ನಡೆಸುವ ನೆವದಲ್ಲಿ ಪಾಲಕರಿಂದ ಶುಲ್ಕ ವಸೂಲಿಗೆ ಮುಂದಾಗಿವೆ.
Related Articles
ಲಾಕ್‌ಡೌನ್ ಚಾಲ್ತಿಯಲ್ಲಿರುವುದರಿಂದ ಶಿಕ್ಷಣ ಇಲಾಖೆ ಸೂಚನೆ ವರೆಗೆ 2020-21 ನೇ ಶೈಕ್ಷಣಿಕ ವರ್ಷ ಆರಂಭಿಸುವಂತಿಲ್ಲ. ಪಾಲಕರಿಂದ ಶುಲ್ಕ ಪಡೆದಿದ್ದರೆ ಹಿಂತಿರುಗಿಸಬೇಕು. ಇಲ್ಲವಾದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಹೇಳಲಾಗಿತ್ತು. ಆದರೂ ಶಾಲೆಗಳು ಇದನ್ನು ಮೀರಿ ನಡೆಯುತ್ತಿವೆ ಎನ್ನಲಾಗಿತ್ತು.
Advertisement
ಇಲಾಖೆಯಿಂದ ನಿಗಾಮುಂದಿನ ಶೈಕ್ಷಣಿಕ ವರ್ಷದಲ್ಲಿ ಹೆಚ್ಚುವರಿ ಶುಲ್ಕ ಅಥವಾ ಹೆತ್ತವರಿಂದ ದುಬಾರಿ ಶುಲ್ಕ ಪಡೆಯುವ ಶಾಲಾಡಳಿತ ಮಂಡಳಿಗಳ ಮೇಲೆ ನಿಗಾ ಇಡಲು ಸಾರ್ವಜನಿಕ ಶಿಕ್ಷಣ ಇಲಾಖೆ ಎಲ್ಲ ರೀತಿಯ ಸಿದ್ಧತೆ ಮಾಡುತ್ತಿದೆ. ಜಿಲ್ಲಾ ಹಂತದ ಸಮಿತಿಗಳ ಮೂಲಕ ಹೆಚ್ಚುವರಿ ಶುಲ್ಕಕ್ಕೆ ಕಡಿವಾಣ ಹಾಕಲಿದೆ. ಅಲ್ಲದೇ, ಈ ಸಂಬಂಧ ಮಕ್ಕಳ ಪಾಲಕ, ಪೋಷಕರು ದೂರು ನೀಡಿದ ತತ್‌ಕ್ಷಣವೇ ಪರಿಶೀಲಿಸಿ, ಮುಂದಿನ ಕ್ರಮ ತಗೆದುಕೊಳ್ಳಲಿದ್ದೇವೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಮುಂದಿನ ವರ್ಷ ಶುಲ್ಕ ಹೆಚ್ಚಳಕ್ಕೆ ಅವಕಾಶ ನೀಡುವುದಿಲ್ಲ. ಪ್ರವೇಶ ಪ್ರಕ್ರಿಯೆ ಮತ್ತು ಶುಲ್ಕ ಸ್ವೀಕಾರಕ್ಕೆ ಸಂಬಂಧಿಸಿದಂತೆ ಸರಕಾರದಿಂದ ಅಧಿಕೃತ ಸೂಚನೆ ನೀಡಲಾಗುತ್ತದೆ. ಹೆಚ್ಚುವರಿ ಶುಲ್ಕ ವಸೂಲಿ ಮತ್ತು ಡೊನೇಷನ್ ಮೇಲೂ ನಿಗಾ ಇಡಲಿದ್ದೇವೆ.
-ಉಮಾಶಂಕರ್,
ಪ್ರ. ಕಾರ್ಯದರ್ಶಿ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ