Advertisement

ಖಾಸಗಿ ಶಾಲೆಗಳು ಪಬ್ಲಿಕ್‌ ಅಲ್ಲ!

01:04 AM Jun 07, 2019 | sudhir |

ನವದೆಹಲಿ: ಇಸ್ರೋ ಮಾಜಿ ಮುಖ್ಯಸ್ಥ ಕೆ.ಕಸ್ತೂರಿರಂಗನ್‌ ಸಮಿತಿಯು ಶಿಫಾರಸು ಮಾಡಿರುವ ಶಿಕ್ಷಣ ನೀತಿಯನ್ನು ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಿದರೆ ದೇಶಾದ್ಯಂತ ಬಹುತೇಕ ಶಿಕ್ಷಣ ಸಂಸ್ಥೆಗಳು ತಮ್ಮ ಹೆಸರುಗಳನ್ನು ಮುಂದಿನ ಮೂರು ವರ್ಷಗಳಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಸಮಿತಿಯ ವರದಿಯ ಪ್ರಕಾರ ಕೇವಲ ಸರ್ಕಾರಿ ಶಾಲೆಗಳು ಮಾತ್ರ ‘ಪಬ್ಲಿಕ್‌’ ಎಂಬ ಹೆಸರನ್ನು ಬಳಸಬೇಕು. ಖಾಸಗಿ ಶಾಲೆಗಳು ಪಬ್ಲಿಕ್‌ ಎಂಬುದನ್ನು ತಮ್ಮ ಹೆಸರಿನಲ್ಲಿ ಯಾವುದೇ ಕಾರಣಕ್ಕೂ ಸೇರಿಸುವಂತಿಲ್ಲ. ಪಬ್ಲಿಕ್‌ ಸ್ಕೂಲ್ ಎಂದರೆ ಸಾರ್ವಜನಿಕರ ಹಣದಿಂದ ನಡೆಯುವಂಥದ್ದು ಎಂದು ಅರ್ಥ ವಾಗುತ್ತದೆ. ಹೀಗಾಗಿ ಸರ್ಕಾರಿ ಶಾಲೆಗಳು ಮತ್ತು ಸರ್ಕಾರದಿಂದ ಅನುದಾನ ಪಡೆಯುವ ಶಾಲೆಗಳು ಮಾತ್ರ ಈ ಪಬ್ಲಿಕ್‌ ಎಂದು ಹೆಸರು ಇಟ್ಟುಕೊಳ್ಳಬಹುದು.

Advertisement

ದೇಶಾದ್ಯಂತ ಲಕ್ಷಾಂತರ ಸಂಸ್ಥೆಗಳು ಪಬ್ಲಿಕ್‌ ಎಂಬುದಾಗಿ ತಮ್ಮ ಹೆಸರಿನಲ್ಲಿ ಸೇರಿಸಿಕೊಂಡಿವೆ. ಸಮಿತಿಯ ನಿರ್ಧಾರದಿಂದ ಜನರಿಗೆ ಶಾಲೆಯ ರೀತಿಯ ಬಗ್ಗೆ ಸ್ಪಷ್ಟತೆ ನೀಡಲಿದೆ. ಯಾವುದು ಸರ್ಕಾರಿ, ಯಾವುದು ಅನುದಾನಿತ ಮತ್ತು ಯಾವುದು ಖಾಸಗಿ ಶಾಲೆ ಎಂಬುದನ್ನು ಜನರು ಗುರುತಿಸಲು ನೆರವಾಗಲಿದೆ. ಅಲ್ಲದೆ, ಶಾಲೆಗಳ ಕಾರ್ಯನಿರ್ವಹಣೆಯ ರೀತಿಯೂ ಜನಸಾಮಾನ್ಯರಿಗೆ ಸ್ಪಷ್ಟವಾಗಲಿದ್ದು, ಇದರಿಂದ ಖಾಸಗಿ ಮತ್ತು ಸರ್ಕಾರಿ ಶಾಲೆಗಳ ವ್ಯತ್ಯಾಸ ಸ್ಪಷ್ಟವಾಗಿ ಅರಿವಿಗೆ ಬರಲಿದೆ ಎಂದು ಸಮಿತಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next