Advertisement

Private scene: ಇನ್‌ಸ್ಪೆಕ್ಟರ್‌ನಿಂದ ಪತ್ನಿಯ ಖಾಸಗಿ ದೃಶ್ಯ ಅಪ್‌ಲೋಡ್‌

11:22 AM Oct 28, 2023 | Team Udayavani |

ಬೆಂಗಳೂರು: ವಿಚ್ಛೇದನಕ್ಕೆ ಒತ್ತಾಯಿಸಿ ದೆಹಲಿ ಇಂಟಲಿಜೆನ್ಸ್‌ ಬ್ಯೂರೊದ ಇನ್‌ಸ್ಪೆಕ್ಟರ್‌ವೊಬ್ಬರು ಪತ್ನಿಯ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಂ ಖಾತೆ ತೆರೆದು ಆಕೆಯ ಖಾಸಗಿ ಫೋಟೋ ಅಪ್‌ಲೋಡ್‌ ಮಾಡಿರುವ ಆರೋಪ ಕೇಳಿ ಬಂದಿದ್ದು, ನ್ಯಾಯಕ್ಕಾಗಿ ಸಂತ್ರಸ್ತೆ ಠಾಣೆ ಮೆಟ್ಟಿಲೇರಿದ್ದಾಳೆ.

Advertisement

ಗರೀಮಾ ಕುಮಾರಿ ನೀಡಿರುವ ದೂರಿನನ್ವಯ ಇನ್‌ಸ್ಪೆಕ್ಟರ್‌ ಶ್ರವಣ್‌ ಕುಮಾರ್‌ ವಿರುದ್ಧ ಯಲಹಂಕ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿದೆ. ಶ್ರವಣ್‌ ಕುಮಾರ್‌ ಹಾಗೂ ಗರೀಮಾ ಕುಮಾರಿ 2006ರಲ್ಲಿ ಮದುವೆಯಾಗಿದ್ದು, 13 ವರ್ಷದ ಮಗಳಿದ್ದಾಳೆ. ವಿಚ್ಛೇದನ ಕೋರಿ ಶ್ರವಣ್‌ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಪತ್ನಿಯ ಮೇಲೆ ಒತ್ತಡ ಹಾಕುತ್ತಿದ್ದರು ಎನ್ನಲಾಗಿದೆ.

ಈ ನಡುವೆ ಪತ್ನಿಯ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಂ ಖಾತೆ ತೆರೆದು ಖಾಸಗಿ ಫೋಟೋ, ವೀಡಿಯೋ ಅಪ್‌ಲೋಡ್‌ ಮಾಡಿದ್ದಾರೆ. ಪಾನೀಯದಲ್ಲಿ ಪತಿ ಮದ್ಯಪಾನ ಬೆರೆಸಿಕೊಟ್ಟು, ಕುಡಿಯುವಾಗ ತಮಗೆ ಗೊತ್ತಿಲ್ಲದಂತೆ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಬಳಿಕ ನಕಲಿ ಇನ್‌ಸ್ಟಾಗ್ರಾಂನಲ್ಲಿ ಇದನ್ನು ಅಪ್‌ಲೋಡ್‌ ಮಾಡಿದ್ದಾರೆ.

ವಿಚ್ಛೇದನ ನೀಡದಿದ್ದರೆ ಪತ್ನಿ ಮತ್ತು ಮಗಳನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಗರೀಮಾ ಕುಮಾರಿ ದೂರಿನಲ್ಲಿ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next