Advertisement

ಮೂಲಭೂತ ಹಕ್ಕಿನಲ್ಲಿ ಖಾಸಗಿ ಹಕ್ಕು:ಕರ್ನಾಟಕ

06:30 AM Jul 27, 2017 | Harsha Rao |

ಹೊಸದಿಲ್ಲಿ: ಖಾಸಗಿ ಹಕ್ಕನ್ನೂ ಮೂಲಭೂತ ಹಕ್ಕಿನೊಳಗೆ ಸೇರಿಸಬೇಕು ಎಂಬ ವಾದಕ್ಕೆ ಈಗ ಕರ್ನಾಟಕ ಸಹಿತ ನಾಲ್ಕು ಬಿಜೆಪಿಯೇತರ ರಾಜ್ಯಗಳು ಕೈಜೋಡಿಸಿವೆ.

Advertisement

ಸಂವಿಧಾನದ ಪರಿಚ್ಛೇದ 21ರಲ್ಲಿ ಖಾಸಗಿ ಹಕ್ಕನ್ನೂ ಸೇರಿಸಬೇಕು. ಈ ಮೂಲಕ ಜನರ ಖಾಸಗಿತನಕ್ಕೆ ಧಕ್ಕೆಯಾಗುವುದನ್ನು ತಪ್ಪಿಸಬೇಕು ಎಂದು ಕೆಲವು ಎನ್‌ಜಿಒಗಳು ಅರ್ಜಿ ಸಲ್ಲಿ ಸಿದ್ದು, ಇದು ಸುಪ್ರೀಂಕೋರ್ಟ್‌ನ ಒಂಬತ್ತು ನ್ಯಾಯಮೂರ್ತಿಗಳ ಸಂವಿಧಾನ ಪೀಠದಲ್ಲಿ ವಿಚಾರಣೆ ನಡೆಯು ತ್ತಿದೆ. ಈಗ ಕರ್ನಾಟಕ, ಪಶ್ಚಿಮ ಬಂಗಾಲ, ಪಂಜಾಬ್‌ ಮತ್ತು ಪುದು ಚೇರಿ ರಾಜ್ಯಗಳೂ ಖಾಸಗಿ ಹಕ್ಕಿಗೆ ಸಹಮತ ವ್ಯಕ್ತಪಡಿಸಿ ಪೂರಕ ಅರ್ಜಿ ಸಲ್ಲಿಸಿವೆ. ಈ ಬಗ್ಗೆ ಹಿರಿಯ ವಕೀಲ ಕಪಿಲ್‌ ಸಿಬಲ್‌ ಮೂಲಕ ಸುಪ್ರೀಂಗೆ ಅರ್ಜಿ ಸಲ್ಲಿಸಿವೆ. ಇದರ ನಡುವೆಯೇ, ಜನರಿಗೆ ಖಾಸಗಿ ಹಕ್ಕನ್ನು ಮೂಲಭೂತ ಹಕ್ಕಿನಲ್ಲಿ ಒಂದಾದ ಸ್ವಾತಂತ್ರ್ಯ ಹಕ್ಕಿನಲ್ಲಿ ಸೇರಿಸಿ ಕೊಡಬಹುದು. ಆದರೆ ಸಂಪೂರ್ಣವಾಗಿಯೂ ಅಲ್ಲ ಎಂದು ಕೇಂದ್ರ ಸರಕಾರ ಹೇಳಿತು.

ಮುಖ್ಯ ನ್ಯಾಯಮೂರ್ತಿ ಜೆ.ಎಸ್‌.ಖೇಹರ್‌ ನೇತೃತ್ವದ ಸಂವಿಧಾನ ಪೀಠದ ಮುಂದೆ ವಾದ ಮಂಡಿಸಿದ ಕಪಿಲ್‌ ಸಿಬಲ್‌, ಈಗಿನ ತಂತ್ರಜ್ಞಾನದ ಆಧುನಿಕತೆಯ ಕಾಲದಲ್ಲಿ ಖಾಸಗಿ ಹಕ್ಕಿನ ಕುರಿತು ಪರಾಮರ್ಶೆ ನಡೆಸುವ ಅಗತ್ಯವಿದೆ. ಅಲ್ಲದೆ ಖಾಸಗಿತನವನ್ನು ರಕ್ಷಿಸುವ ಸಲುವಾಗಿ ಮೂಲಭೂತ ಹಕ್ಕಿನಲ್ಲಿ ಸೇರಿಸಬೇಕು ಎಂದು ವಾದ ಮಂಡಿಸಿದರು.

ಸಂವಿಧಾನದಲ್ಲಿ ಬೇಕಿಲ್ಲ: ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ವಾದ ಮಂಡಿಸಿ,  ಖಾಸಗಿ ಹಕ್ಕು ಒಂದು ಸಂಪೂರ್ಣ ಹಕ್ಕಲ್ಲ. ಇದು “ಹಕ್ಕು’ ಎಂದು ಪರಿಗಣನೆಗೆ ಸಾಧ್ಯವಿದ್ದರೂ ಬದುಕುವ ಹಕ್ಕಿಗಿಂತ ಎರಡನೆಯದ್ದಾಗಿದೆ. ಆದ್ದರಿಂದ ಈ ಬಗ್ಗೆ ಗೊಂದಲಗಳು ಸಲ್ಲ. ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ಸರಕಾರ  ಈ ವಿಚಾರದಲ್ಲಿ ಮಧ್ಯ ಪ್ರವೇಶಿಸ ಬೇಕಾಗುತ್ತದೆ ಎಂದರು.

ಆದರೆ ಪರಿಪೂರ್ಣ ಹಕ್ಕುಗಳ ವಿಚಾರದಲ್ಲಿ ಮಧ್ಯಪ್ರವೇಶಿಸಿದಾಗ ಪ್ರಜಾಪ್ರಭುತ್ವ ಸಮಾಜವೊಂದು ಅದನ್ನು ವಿರೋಧಿಸಬಹುದು ಮತ್ತು ಪರಿಪೂರ್ಣ ಹಕ್ಕನ್ನು ಎಂದಿಗೂ ತಿದ್ದಲು, ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಅಲ್ಲದೆ ಖಾಸಗಿ ಹಕ್ಕಿನ ಮೇಲಿನ ಅತಿಕ್ರಮಣವನ್ನು ನಾವು ಮೂಲಭೂತ ಹಕ್ಕಿಗೆ ಹೋಲಿಸಲು ಸಾಧ್ಯವಿಲ್ಲ. ಜೀವಿಸುವ ಮತ್ತು ಸ್ವತಂತ್ರವಾಗಿ ಜೀವಿಸುವ ಹಕ್ಕು ಇದರಿಂದ ಭಿನ್ನವಾಗಿದೆ’ ಎಂದು ಅವರು ಹೇಳಿದ್ದಾರೆ. ಅಲ್ಲದೆ, ಖಾಸಗಿತನ ವಿಚಾರ ದಲ್ಲಿ ಅಮೆರಿಕದ ಕೋರ್ಟ್‌ ತೀರ್ಪನ್ನು ಇಲ್ಲಿಗೆ ಅನ್ವಯಿಸುವಂತಿಲ್ಲ. ಭಾರತದಲ್ಲಿ ಬಡತನದ ರೇಖೆಗಿಂತ ಕೆಳಗಿನವರು ಮತ್ತು ಮಧ್ಯಮ ವರ್ಗದವರು ಹೆಚ್ಚಿದ್ದಾರೆ. ಅವರ ಬೇಡಿಕೆಗಳನ್ನು ಪರಿಗಣಿಸಬೇಕಿದೆ’ ಎಂದು ಅವರು ತಿಳಿಸಿದ್ದಾರೆ.

Advertisement

ಸೋಮವಾರದ ವಿಚಾರಣೆ ವೇಳೆ ವಾದ ನಡೆಸಿದ್ದ ವೇಣುಗೋಪಾಲ್‌ ಅವರು, “ಒಂದು ವೇಳೆ ಖಾಸಗಿತನ ಎನ್ನುವುದು ಮೂಲಭೂತ ಹಕ್ಕೇ ಎಂದಿದ್ದಲ್ಲಿ ಅದನ್ನು ಸಂವಿಧಾನದ 21ನೇ ಪರಿಚ್ಛೇದದಲ್ಲಿ ಸೇರ್ಪಡೆಗೊಳಿಸಬೇಕಿತ್ತು. ಆದರೆ ಅದನ್ನು ಉದ್ದೇಶಪೂರ್ವಕವಾಗಿ ಸೇರಿಸಲಾಗಿಲ್ಲ’ ಎಂದು ವಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next