Advertisement

ಸಮಗ್ರ ಕೃಷಿಯಲ್ಲೂ ಖಾಸಗಿ ಸಹಭಾಗಿತ್ವ

09:36 AM Nov 29, 2017 | |

ಬೆಂಗಳೂರು: ತೋಟಗಾರಿಕೆ ಮಾದರಿಯಲ್ಲೇ ಸಮಗ್ರ ಕೃಷಿಯಲ್ಲೂ ರೈತರ ಗುಂಪುಗಳನ್ನು ರಚಿಸಿ, ಸಾರ್ವಜನಿಕ, ಖಾಸಗಿ ಸಹಭಾಗಿತ್ವದೊಂದಿಗೆ ನೇರ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಕಾರ್ಯ ಕ್ರಮಕ್ಕೆ ಮಂಗಳವಾರ ಚಾಲನೆ ದೊರೆಯಿತು. ಈ
ಮೂಲಕ ರೈತರ ಉತ್ಪನ್ನಗಳು ನೇರವಾಗಿ ಗ್ರಾಹಕರ ಕೈಗೆಟುಕಲಿವೆ.

Advertisement

ಉತ್ಪಾದನಾ ಪ್ರಮಾಣ ಹೆಚ್ಚಳ ಹಾಗೂ ಮಾರುಕಟ್ಟೆಯಲ್ಲಾಗುವ ಏರಿಳಿತಗಳನ್ನು ತಗ್ಗಿಸಿ, ರೈತರಿಗೆ ಹೆಚ್ಚು ಆದಾಯ ತಂದುಕೊಡುವ ನಿಟ್ಟಿನಲ್ಲಿ ಸಮಗ್ರ ಕೃಷಿಯಲ್ಲಿ ರೈತರ ಗುಂಪುಗಳನ್ನು ರಚಿಸಲು ಕೃಷಿ ಇಲಾಖೆ ಉದ್ದೇಶಿಸಿದೆ. ಈ ವರ್ಷ ಸುಮಾರು 50 ರೈತರ ಗುಂಪುಗಳನ್ನು ರಚಿಸುವ ಗುರಿಯಿದೆ. ಅವುಗಳನ್ನು ಕಂಪೆನಿಗಳೊಂದಿಗೆ ಲಿಂಕ್‌ ಮಾಡಲಾಗುವುದು.

ನಗರದ ಕ್ಯಾಪಿಟಲ್‌ ಹೋಟೆಲ್‌ನಲ್ಲಿ ಮಂಗಳವಾರ ಕೃಷಿ ಇಲಾಖೆ ಮತ್ತು ಜಲಾನಯನ ಅಭಿವೃದ್ಧಿ ಇಲಾಖೆ ಸಂಯುಕ್ತವಾಗಿ ಹಮ್ಮಿಕೊಂಡಿದ್ದ “ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಸಮಗ್ರ ಕೃಷಿ ಅಭಿವೃದ್ಧಿ ಕಾರ್ಯಕ್ರಮ ಅನುಷ್ಠಾನ’ ಕುರಿತ
ಕಾರ್ಯಾಗಾರದಲ್ಲಿ ಕೃಷಿ ಸಚಿವ ಕೃಷ್ಣ ಬೈರೇಗೌಡ ಈ ಯೋಜನೆಗೆ ಚಾಲನೆ ನೀಡಿದರು. 

ನಂತರ ಮಾತನಾಡಿದ ಅವರು, “ರಾಜ್ಯದಲ್ಲಿರುವ ಸಣ್ಣ ಹಿಡುವಳಿದಾರರು ಕೃಷಿಯಲ್ಲಿ ಸುಧಾರಿತ ಕ್ರಮ ಅನುಸರಿಸಲು ಸಾಧ್ಯವಾಗು
ತ್ತಿಲ್ಲ. ಬೆಳೆ ಕೈಗೆ ಬಂದಾಗ ಮಾರುಕಟ್ಟೆಯಲ್ಲಿ ಅದಕ್ಕೆ ಬೆಲೆ ಇರು ವುದಿಲ್ಲ. ಒಂದೆರಡು ತಿಂಗಳು ದಾಸ್ತಾನು ಮಾಡಿ ಕೊಳ್ಳಲು ಗೋದಾಮು ವ್ಯವಸ್ಥೆ ಇರುವುದಿಲ್ಲ. ಇಂತಹ ಹಲವು ಸಮಸ್ಯೆಗಳಿಂದ ರೈತರಿಗೆ ಲಾಭಾಂಶ ಸಿಗುತ್ತಿಲ್ಲ. ಈ ಎಲ್ಲ ಸಮಸ್ಯೆಗಳಿಗೆ ರೈತರ ಸಂಘಟನೆ ಮೂಲಕ ಪರಿಹಾರ ದೊರೆಯಲಿದೆ. ಈ ವರ್ಷ ಇಂತಹ ಸುಮಾರು 50 ರೈತರ ಸಂಘಟನೆ ಅಥವಾ ಗುಂಪುಗಳನ್ನು ರಚಿಸುವ ಗುರಿ ಇದೆ’ ಎಂದು ಹೇಳಿದರು.

ಹೀಗೆ ರಚಿಸಲಾದ ರೈತರ ಗುಂಪುಗಳನ್ನು ಕಂಪೆನಿಗಳು ದತ್ತು ಪಡೆಯುತ್ತವೆ. ಆ ಕಂಪೆನಿಗಳು ಬಿತ್ತನೆಯಿಂದ ಇಳುವರಿ ಹಂತದವರೆಗೂ ಕೃಷಿ ತಜ್ಞರಿಂದ ಸಲಹೆ ನೀಡುತ್ತಾರೆ. ನಂತರ ನೇರ ಮಾರುಕಟ್ಟೆ ವ್ಯವಸ್ಥೆ ಕೂಡ ಇರಲಿದೆ. ಇದರಿಂದ ಉತ್ಪಾದನೆ ಹೆಚ್ಚುವುದರ ಜತೆಗೆ ಬೆಳೆಗೆ ಹೆಚ್ಚು ಬೆಲೆ ಸಿಗಲಿದೆ. ಮಧ್ಯವರ್ತಿಗಳ ಹಾವಳಿ ಕೂಡ ತಪ್ಪಲಿದೆ ಎಂದು ತಿಳಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next