Advertisement
ಸಮೀಪದ ಸರಕಾರ್ ಗುಟ್ಟಹಳ್ಳಿಯ ಜ್ಯೋತಿ ವಿದ್ಯಾಸಂಸ್ಥೆಯ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡಲ್ಲಿ ಮಾತ್ರ ಶಿಕ್ಷಣ ಸಾರ್ಥಕ ಗೊಳ್ಳಲಿದ್ದು ಆರ್ಥಿಕ, ಸಾಮಾಜಿಕ ಬೆಳವಣಿಗೆಗೆ ಪೂರಕವಾದ ಸೌಲಭ್ಯ ಕಲ್ಪಿಸಬೇಕು. ಶೈಕ್ಷಣಿಕ ಪ್ರಗತಿ ಸಾಧಿಸಿ ಪೋಷಕರ, ಶಿಕ್ಷಕರ ಆಶೋತ್ತರಗಳನ್ನು ಈಡೇ ರಿಸಲು ವಿದ್ಯಾರ್ಥಿಗಳು ಶ್ರಮಿಸಬೇಕು ಎಂದರು.
Related Articles
Advertisement
ಕಳೆದ 15 ವರ್ಷಗಳಿಂದ ಆಡಳಿತ ಮಂಡಳಿಯ ಸೇವಾ ಮನೋಭಾವದ ಪರಿಣಾಮವಾಗಿ ಶಾಲೆಯು ಸುಸಜ್ಜಿತವಾದ ಸೌಲಭ್ಯಗಳೊಂದಿಗೆ ಸುಲಭವಾಗಿ ವಿಷಯವನ್ನು ಗ್ರಹಿಸಲು ಆಧುನಿಕ ತಂತ್ರಜ್ಞಾನ ಒಳಗೊಂಡ ಶಿಕ್ಷಣ ಪದ್ಧತಿ ಅಳವಡಿಸಿಕೊಳ್ಳಲಾಗಿದೆ ಎಂದರು.
ಸೇವಾ ಮನೋಭಾವ ಬೆಳೆಸಿಕೊಳ್ಳಿ: ವಿದ್ಯಾರ್ಥಿ ಗಳು ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ರಾಜ್ಯ ಮಟ್ಟದಲ್ಲಿ ಭಾಗವಹಿಸಿದ್ದು ಪ್ರತಿಭೆಗಳಿಗೆ ಅಗತ್ಯ ಪ್ರೋತ್ಸಾಹ ನೀಡಲಾಗುತ್ತಿದೆ. ಮಕ್ಕಳನ್ನು ಟೀವಿ, ಮೊಬೈಲ್ ಹಾವಳಿಯಿಂದ ಮುಕ್ತರನ್ನಾಗಿಸಿ ಶಿಕ್ಷಣಕ್ಕೆ ಪೂರಕವಾದ ವಾತಾವರಣವನ್ನು ಸೃಷ್ಟಿಸಬೇಕಾದ್ದು ಪೋಷಕರ ಆದ್ಯ ಕರ್ತವ್ಯವಾಗಿದೆ.
ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಶಿಕ್ಷರಷ್ಟೇ ಜವಾ ಬ್ದಾರಿಯನ್ನು ಪೋಷಕರು ಸಹ ನಿರ್ವಹಿಸ ಬೇಕಾ ದ್ದು ಅತ್ಯವಶ್ಯವಾಗಿದೆ. ಶಿಕ್ಷಣಕ್ಕೆ ನೀಡುವಷ್ಟೇ ಪ್ರಾ ಮುಖ್ಯತೆ ಧರ್ಮಪಾಲನೆ, ಸೇವಾ ಮನೋ ಭಾವ ಬೆಳೆಸಿಕೊಳ್ಳಲು ನೀಡಬೇಕು ಎಂದು ತಿಳಿಸಿದರು. ಉದ್ಯಮಿ ಎಸ್.ಷಡಕ್ಷರಿ, ಕಿರುತೆರೆ ನಟಿ ನಂದಿನಿ, ಸರ್ವಮಂಗಳ, ಅಧ್ಯಕ್ಷ ಬಸವರಾಜ್ ಇದ್ದರು.