Advertisement
ಸರಕಾರದ ಆದೇಶದಂತೆ ಉತ್ಸವದ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ರದ್ದುಗೊಂಡಿತ್ತು. ಭಕ್ತರ ಮೇಲೆ ನಿರ್ಬಂಧ ಹೇರಲಾಗಿದ್ದರಿಂದ ಅನೇಕ ಭಕ್ತರು ಕೊಲ್ಲೂರು ಕ್ಷೇತ್ರ ದರ್ಶನ ಮೊಟಕುಗೊಳಿಸಿದ್ದರು.
ಯಾತ್ರಾರ್ಥಿಗಳ ಸಂಖ್ಯೆ ಕಡಿಮೆ ಯಾಗಿರುವುದರಿಂದ ಅನೇಕ ಖಾಸಗಿ ವಸತಿ ಗೃಹಗಳ ಮಾಲಕರು ತಾತ್ಕಾಲಿಕ ನೆಲೆಯಲ್ಲಿ ಕೊರೊನಾ ವೈರಸ್ ಭೀತಿ ಕಡಿಮೆಯಾಗುವ ತನಕ ಮುಚ್ಚಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿದೆ. ಮಾರಣಕಟ್ಟೆ: ವಿಶೇಷ ಪೂಜೆಗಳು ತಾತ್ಕಾಲಿಕ ರದ್ದು
ಮಾರಣಕಟ್ಟೆ : ಸರಕಾರದ ನಿರ್ದೇಶನದಂತೆ ಮಾ. 19ರಿಂದ ಮುಂದಿನ ನಿರ್ದೇಶನದ ತನಕ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಯಾವುದೇ ಸೇವಾ ರೂಪದ ಪೂಜೆ ನಡೆಯುವುದಿಲ್ಲ ಹಾಗೂ ಪ್ರತಿದಿನ ನಡೆಯುವ ಅನ್ನ ಸಂತರ್ಪಣೆ ಸೇವೆಯನ್ನು ಕೂಡ ರದ್ದು ಮಾಡಲಾಗಿದೆ. ದೇವರ ಪ್ರಸಾದ ತೀರ್ಥ ವಿತರಣೆ ಮತ್ತು ಹಣ್ಣು ಕಾಯಿ ಸೇವೆಯನ್ನು ಮುಂದಿನ ಆದೇಶ ದವರೆಗೆ ನಿಲ್ಲಿಸ ಲಾಗಿದೆ ಎಂದು ಪ್ರಕಟನೆ ತಿಳಿಸಿದೆ.