Advertisement
ದೊಡ್ಡ ಕಂಪೆನಿಗಳಲ್ಲಿ ಮತ್ತು ವಸತಿ ಕಟ್ಟಡಗಳಲ್ಲಿ ಲಸಿಕ ಅಭಿಯಾನ ನಡೆಸುವ ಖಾಸಗಿ ಆಸ್ಪತ್ರೆಗಳು ನೇರವಾಗಿ ಕಂಪೆನಿಗಳಿಂದ ಲಸಿಕೆ ಪಡೆಯಬೇಕಾಗುತ್ತದೆ. ನಿಗಮಗಳು ಈ ಯೋಜನೆಗಳಿಗೆ ಲಸಿಕೆ ಪೂರೈಸುವುದಿಲ್ಲ. ಇದರ ಪರಿಣಾಮವಾಗಿ ಲಸಿಕೆಗಳ ಕೊರತೆಯಿರುವ ಸಮಯದಲ್ಲಿ ಲಸಿಕೆಗಳು ನೇರವಾಗಿ ಕಂಪೆನಿಗಳಿಂದ ಹೇಗೆ ಲಭ್ಯವಾಗುತ್ತವೆ ಎಂಬ ಪ್ರಶ್ನೆ ಎಂದ್ದಿದೆ.
Related Articles
Advertisement
ಪುರಸಭೆ ಯೋಜನೆ ಮತ್ತು ನಿಬಂಧನೆಗಳನ್ನು ಘೋಷಿಸಿದ ಬಳಿಕ ಹಲವಾರು ವಸತಿ ಕಟ್ಟಡಗಳ ನಿವಾಸಿಗಳು ನಿರಾಳವಾಗಿದ್ದರು. ಆಸ್ಪತ್ರೆಗಳು ಅಥವಾ ವಾರ್ಡ್‌ಗಳಲ್ಲಿನ ಲಸಿಕೆ ಕೇಂದ್ರಗಳು ಪ್ರಸ್ತುತ ಕಿಕ್ಕಿರಿದು ತುಂಬಿವೆ. ವಸತಿ ಕಟ್ಟಡಗಳ ಆವರಣದಲ್ಲಿ ಲಸಿಕೆ ಅಭಿಯಾನವನ್ನು ನಡೆಸಿದರೆ, ಕೇಂದ್ರಗಳಿಗೆ ಹೋಗುವ ಅಗತ್ಯವಿಲ್ಲ ಎಂದು ನಿವಾಸಿಗಳು ಅಭಿಪ್ರಾಯಪಟ್ಟರು. ವ್ಯಾಕ್ಸಿನೇಷನ್ ಅಭಿಯಾನಕ್ಕಾಗಿ ಅನೇಕ ವಸತಿ ಕಟ್ಟಡಗಳ ಖಾಸಗಿ ಆಸ್ಪತ್ರೆಗಳಿಗೆ ಅರ್ಜಿ ಸಲ್ಲಿಸಲು ಪ್ರಾರಂಭಿಸಿವೆ. ಲಸಿಕೆಗಳ ಲಭ್ಯತೆಯ ಬಗ್ಗೆ ಸ್ಪಷ್ಟತೆಯ ಕೊರತೆಯಿಂದಾಗಿ, ಖಾಸಗಿ ಆಸ್ಪತ್ರೆಗಳು ವಸತಿ ಸಂಘಗಳಿಂದ ಅರ್ಜಿಗಳನ್ನು ಸ್ವೀಕರಿಸುವುದನ್ನು ಬಿಟ್ಟು ಬೇರೆ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ.
ಮುಚ್ಚಲ್ಪಟ್ಟ ಖಾಸಗಿ ಆಸ್ಪತ್ರೆಗಳ ವ್ಯಾಕ್ಸಿನೇಷನ್ ಸೆಂಟರ್
ಪ್ರಸ್ತುತ ಕೊರೊನಾ ಲಸಿಕೆಯ ಕೊರತೆಯಿದೆ. ಸರಕಾರಿ ಮತ್ತು ಪುರಸಭೆ ಕೇಂದ್ರಗಳಲ್ಲಿ ಲಸಿಕೆ ಹಾಕುವ ಅಭಿಯಾನ ನಡೆಯುತ್ತಿದೆ. ವ್ಯಾಕ್ಸಿನೇಷನ್ ಕೊರತೆಯಿಂದಾಗಿ ಹೆಚ್ಚಿನ ಖಾಸಗಿ ಆಸ್ಪತ್ರೆಗಳಲ್ಲಿ ವ್ಯಾಕ್ಸಿನೇಷನ್ ಸ್ಥಗಿತಗೊಳಿಸಲಾಗಿದೆ. ವಾರ್ಡ್ ಮಟ್ಟದಲ್ಲಿ ಲಸಿಕೆ ಕೇಂದ್ರಗಳನ್ನು ಪ್ರಾರಂಭಿಸಲು ಪುರಸಭೆ ಈಗ ಆದ್ಯತೆ ನೀಡಿದೆ. ಈ ಕೇಂದ್ರಗಳಿಗೆ ದಿನಕ್ಕೆ 100 ಡೋಸ್‌ಗಳನ್ನು ನೀಡಲಾಗುತ್ತಿದೆ. ಆದ್ದರಿಂದ ಈ ಕೇಂದ್ರಗಳಲ್ಲಿ ಪ್ರತಿದಿನ 100 ಜನರಿಗೆ ಮಾತ್ರ ಲಸಿಕೆ ನೀಡಲಾಗುತ್ತಿದೆ. ಸ್ಥಳೀಯರು ತಮ್ಮ ಮನೆಗಳ ಬಳಿ ಲಸಿಕೆ ಪಡೆಯಲು ಇಚ್ಚಿಸುತ್ತಿದ್ದು, ಆದರೆ ಲಸಿಕೆಗಳ ಕೊರತೆಯಿಂದ ಅವರು ನಿರಾಶೆಗೊಂಡಿದ್ದಾರೆ. ವಸತಿ ಕಟ್ಟಡಗಳ ಆವರಣದಲ್ಲಿ ಚುಚ್ಚುಮದ್ದಿಗೆ ಪುರಸಭೆ ಹಸಿರು ನಿಶಾನೆ ನೀಡಿತ್ತು. ಆದರೆ ಖಾಸಗಿ ಆಸ್ಪತ್ರೆಗಳು ಲಸಿಕೆ ಹಾಕಲು ಹಿಂಜರಿಯುತ್ತಿರುವುದರಿಂದ ಯೋಜನೆ ಕುಂಠಿತಗೊಳ್ಳುವ ಲಕ್ಷಣಗಳಿವೆ.