Advertisement
ಖಾಸಗಿ ಆಸ್ಪತ್ರೆಗಳಲ್ಲಿ ಹೊರರೋಗಿಗಳ ವಿಭಾಗ ಸಂಪೂರ್ಣ ಬಂದ್ ಆಗಿತ್ತು. ರೋಗಿಗಳು ವೈದ್ಯರ ಸೇವೆ ಇಲ್ಲ ಎಂದು ತಿಳಿದು ಪರದಾಡುವಂತಾಗಿತ್ತು. ಆಸ್ಪತ್ರೆಗಳಲ್ಲಿ ಈ ಮೊದಲೆ ದಾಖಲಾದ ರೋಗಿಗಳು, ತುರ್ತು ಚಿಕಿತ್ಸಾ ಘಟಕಗಳು ಹಾಗೂ ಒಳರೋಗಿ ಚಿಕಿತ್ಸಾ ಘಟಕಗಳ ಸೇವೆ ಎಂದಿನಂತೆ ಇತ್ತು. ಖಾಸಗಿ ಆಸ್ಪತ್ರೆಗಳ ಬಾಗಿಲು ಮುಚ್ಚಿದ ಹಿನ್ನೆಲೆಯಲ್ಲಿ ರೋಗಿಗಳು ಸರ್ಕಾರಿ ಆಸ್ಪತ್ರೆಗಳ ಕಡೆ ಮುಖ ಮಾಡಿದರು.ಖಾಸಗಿ ಆಸ್ಪತ್ರೆಗಳೊಂದಿಗೆ ಔಷಧ ಅಂಗಡಿಗಳು ಕೂಡ ಬಂದ್ ಆಗಿರುವುದರಿಂದ ಜನರು ಸಮಸ್ಯೆ ಎದುರಿಸುವಂತಾಯಿತು. ಪ್ರತಿದಿನಕ್ಕಿಂತ ಶನಿವಾರ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚು ಕಂಡುಬಂದಿತು. ಸಣ್ಣಪುಟ್ಟ ಸಮಸ್ಯೆಗಳನ್ನು ಬಿಟ್ಟರೆ ರೋಗಿಗಳ ಚಿಕಿತ್ಸೆಯಲ್ಲಿ ಸಮಸ್ಯೆಗಳು ಕಂಡುಬಂದಿಲ್ಲ. ಸರದಿಯಲ್ಲಿ ನಿಂತು ರೋಗಿಗಳು ಚಿಕಿತ್ಸೆ ಪಡೆದರು.