Advertisement

ಖಾಸಗಿ ಆನೆಗಳನ್ನು ದತ್ತು ಪಡೆಯಬಹುದು: ಹೈಕೋರ್ಟ್‌

11:39 PM Jun 13, 2022 | Team Udayavani |

ಬೆಂಗಳೂರು: ಖಾಸಗಿ ಮಾಲಕತ್ವದಲ್ಲಿರುವ ಆನೆಗಳನ್ನು ವಾಣಿಜ್ಯ ಉದ್ದೇಶವಲ್ಲದ ಚಟುವಟಿಕೆಗಳಿಗೆ ಬಳಸಲು ದತ್ತು ಪಡೆಯಬಹುದು ಎಂದು ಹೈಕೋರ್ಟ್‌ ಹೇಳಿದೆ.

Advertisement

ಗುಜರಾತ್‌ ಮೂಲದ ರಾಧಾಕೃಷ್ಣ ದೇವಾಲಯ ಕಲ್ಯಾಣ ಟ್ರಸ್ಟ್‌ ಗೆ ಕರ್ನಾಟಕದಿಂದ ನಾಲ್ಕು ಆನೆಗಳನ್ನು ದತ್ತು ನೀಡಿ ರುವುದನ್ನು ಆಕ್ಷೇಪಿಸಿ ಎಂ.ಎಸ್‌. ಮುರಳಿ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ| ರಿತುರಾಜ್‌ ಅವಸ್ಥಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ರೀತಿ ಹೇಳಿದೆ.

ವನ್ಯಜೀವಿ ಸಂರಕ್ಷಣ ಕಾಯ್ದೆ- 1972 ಸೆಕ್ಷನ್‌ 40ರಡಿ ವಾಣಿಜ್ಯ ಉದ್ದೇಶಗಳನ್ನು ಹೊರತುಪಡಿಸಿ ಉಳಿದ ಸ್ವರೂಪದ ಚಟುವಟಕೆಗಳಿಗೆ ಜೀವಂತ ಆನೆಗಳನ್ನು ದತ್ತು ಪಡೆಯುವುದಕ್ಕೆ ಯಾವುದೇ ನಿರ್ಬಂಧ ಅಥವಾ ಅಡೆತಡೆ ಇಲ್ಲ ಎಂದು ನ್ಯಾಯಾಲಯ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next