Advertisement

ಅಯೋಧ್ಯೆ ಭೂಮಿ ವಾಪಸ್‌: ಮುತಾಲಿಕ್‌ ವಿಶ್ವಾಸ

12:12 AM Oct 07, 2019 | Team Udayavani |

ಉಡುಪಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತದೆ. ನ್ಯಾಯಾಲಯದ ತೀರ್ಪಿನ ಬಗ್ಗೆ ನೂರಕ್ಕೆ ನೂರು ವಿಶ್ವಾಸ ಇದೆ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್‌ ತಿಳಿಸಿದ್ದಾರೆ.

Advertisement

ಕಡಿಯಾಳಿ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ರವಿವಾರ ನಡೆದ ಚಂಡಿಕಾ ಹೋಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿ ದತ್ತಮಾಲಾ ಕಾರ್ಯಕ್ರಮದಲ್ಲಿ 5 ಸಾವಿರ ಮಾಲಾಧಾರಿಗಳು ಭಾಗವಹಿಸುವ ನಿರೀಕ್ಷೆಯಿದೆ. ಶೋಭಾಯಾತ್ರೆ, ಧರ್ಮಸಭೆ, ದತ್ತಹೋಮ, ಗಣಹೋಮ ನಡೆಯಲಿದೆ.

1990ರ ಗಲಭೆಯಲ್ಲಿ ಜಮ್ಮುಕಾಶ್ಮೀರದಿಂದ ಓಡಿ ಬಂದ ರಾಹುಲ್‌ ಕೌಲ್‌ ಭಾಗವಹಿಸಿ ರಾಜ್ಯದಲ್ಲಿ 370ನೇ ವಿಧಿ ರದ್ದು ಮಾಡಿರುವುದಕ್ಕೆ ಪ್ರಧಾನಿ ಮೋದಿ ಮತ್ತು ಕೇಂದ್ರಕ್ಕೆ ಅಭಿನಂದನೆ ಸಲ್ಲಿಸಲಿ¨ªಾರೆ ಎಂದರು.

ದಸರಾ ವೇದಿಕೆಯಲ್ಲಿ ಚಂದನ್‌ -ನಿವೇದಿತಾ ಪ್ರೇಮ ನಿವೇದನೆಯ ಕುರಿತು ಪ್ರತಿಕ್ರಿಯಿಸಿ, ಸರಕಾರಿ ವೇದಿಕೆಯಲ್ಲಿ ಪ್ರಸ್ತಾವ ಮಾಡಬಾರದೆಂಬ ನಿಯಮ ಎಲ್ಲಿದೆ ಎಂದು ಪ್ರಶ್ನಿಸಿದರು.

ಜನಪ್ರತಿನಿಧಿಗಳು ನೆರೆ ಪರಿಹಾರ ತರಿಸುವಲ್ಲಿ ಪೂರ್ಣ ಶ್ರಮಿಸಿ¨ªಾರೆ. ಕೇಂದ್ರ ಸರಕಾರ ಈಗ ನೀಡಿರುವ 1,200 ಕೋ.ರೂ. ಪರಿಹಾರ ಸಾಕಾಗದು. ಮುಂದೆ
ಒಳ್ಳೆದಾಗುತ್ತದೆ ಎಂಬ ವಿಶ್ವಾಸವಿದೆ ಎಂದರು.

Advertisement

ಸೂಲಿಬೆಲೆಗೆ ದೇಶದ್ರೋಹಿ ಪಟ್ಟ ತಪ್ಪು ಚಕ್ರವರ್ತಿ ಸೂಲಿಬೆಲೆಯನ್ನು ದೇಶದ್ರೋಹಿ ಅಂದದ್ದು ತಪ್ಪು. ಅವರಿಗೆ ನೆರೆ ಪರಿಹಾರ ವಿಚಾರದಲ್ಲಿ ನೋವಿದೆ. ಅವರನ್ನು ನಾನು ಬೆಂಬಲಿಸುತ್ತೇನೆ. ಸಂಘ ಪರಿವಾರ ಇದನ್ನೆಲ್ಲ ಗಂಭೀರವಾಗಿ ಪರಿಗಣಿಸಬೇಕುಎಂದು ಮುತಾಲಿಕ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next