Advertisement
ಮಂಗಳೂರು, ಹುಬ್ಬಳ್ಳಿ ಧಾರವಾಡ, ಬೆಳಗಾವಿ, ದಾವಣಗೆರೆ, ಬಳ್ಳಾರಿ, ಶಿವಮೊಗ್ಗ, ಶಿರಸಿ, ಚಿಕ್ಕಮಗಳೂರು, ಉಡುಪಿ, ಕಾರವಾರ, ವಿಜಾಪುರ ಸೇರಿದಂತೆ ಹಲವು ಕಡೆಗಳಿಗೆ ಹಬ್ಬಕ್ಕೆಂದು ತೆರಳಬೇಕಾದವರು ಹೆಚ್ಚಿನ ದರ ನೀಡಿ ಬಸ್ ಹತ್ತುವ ಪರಿಸ್ಥಿತಿ ಉಂಟಾಗಿತ್ತು. ಕಳೆದ ಮೂರ್ನಾಲ್ಕು ದಿನಗಳಿಂದ ಖಾಸಗಿ ಬಸ್ ಟಿಕೆಟ್ ದರವು ಏರಿಕೆಯಾಗುತ್ತಿದ್ದು, ಪ್ರಯಾಣಿಕರು ಹಿಡಿ ಶಾಪಹಾಕುತ್ತಾ ಬಸ್ ಏರಿದ ಸನ್ನಿವೇಶ ಕೂಡ ಕಂಡುಬಂತು.
Related Articles
Advertisement
ಕೆಎಸ್‌ಆರ್‌ಟಿಸಿಯಲ್ಲಿ ಬಸ್‌ಗಳ ಕೊರತೆ ಹಿನ್ನಲೆಯಲ್ಲಿ ಹೊರ ಜಿಲ್ಲೆಯಲ್ಲೂ ಬಿಎಂಟಿಸಿ ಬಸ್‌ಗಳು ಕಾರ್ಯಾಚರಣೆ ನಡೆಸಿದವು. ಹಬ್ಬದ ಹಿನ್ನೆಲೆಯಲ್ಲಿ ಹೆಚ್ಚುವರಿ 200 ಬಿಎಂಟಿಸಿ ಬಸ್‌ಗಳನ್ನ ಕೆಎಸ್‌ಆರ್‌ಟಿಸಿ ಬಳಸಿಕೊಂಡಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಬಿಎಂಟಿಸಿ ಬಸ್‌ಗಳು ಶಿವಮೊಗ್ಗ, ಧಾರವಾಡ, ತುಮಕೂರು, ಕೋಲಾರ, ಮೈಸೂರಿ ಭಾಗದಲ್ಲಿ ಕಾರ್ಯಾಚರಣೆ ನಡೆಸಿದವು. ಹಬ್ಬಕ್ಕೆ 1500 ಹೆಚ್ಚುವರಿ ಕೆಎಸ್‌ಆರ್‌ಟಿಸಿ ಬಸ್‌ಗಳು ಕಾರ್ಯಚರಣೆ ಮಾಡುತ್ತಿದ್ದರೂ ಹೆಚ್ಚುವರಿ ಬಸ್‌ಗಳ ಅವಶ್ಯಕತೆಯಿದೆ. ಇನ್ನು ಬೇಡಿಕೆ ಬಂದರೆ ಮತ್ತಷ್ಟು ಬಸ್‌ಗಳನ್ನ ನೀಡುವುದಾಗಿ ಬಿಎಂಟಿಸಿ ಸಂಚಾರಿ ವಿಭಾಗದ ಮುಖ್ಯಸ್ಥ ಪ್ರಭಾಕರ ರೆಡ್ಡಿ ಮಾಹಿತಿ ನೀಡಿದ್ದಾರೆ.
ಖಾಸಗಿ ಬಸ್‌ನಲ್ಲಿಎಲ್ಲಿ ಗೆ ಎಷ್ಟು ದರ?
ಬೆಂಗಳೂರು-ಉಡುಪಿ 1500 ರೂ.-1700 ರೂ.
ಬೆಂಗಳೂರು -ಬಳ್ಳಾರಿ 1100 ರೂ.-1200 ರೂ.
ಬೆಂಗಳೂರು ಬಿಜಾಪುರ 1100 ರೂ.-1900 ರೂ.
ಬೆಂಗಳೂರು ಶಿರಸಿ 1600 ರೂ.-1700ರೂ.
ಬೆಂಗಳೂರು ಹುಬ್ಬಳ್ಳಿ 1600 ರೂ.-1900 ರೂ.
ಬೆಂಗಳೂರು ಮಂಗಳೂರು 1500 ರೂ .-1700 ರೂ.
ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಪ್ರಯಾಣಿಕರ ಸಂಖ್ಯೆ ತುಸು ಕಡಿಮೆಯೇ. ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಸಾಲು ಸಾಲು ರಜೆ ಬಂದದ್ದು,ಇದಕ್ಕೆ ಕಾರಣವಿರಬಹುದು.-ವಿಕ್ರಮ್, ಸರಿತಾ ಟ್ರಾವೆಲ್ಸ್