Advertisement

ಎ. 16ರಿಂದ ಖಾಸಗಿ ಬಸ್‌ ಯಾನ ದರ ಹೆಚ್ಚಳ

09:10 AM Apr 14, 2018 | Karthik A |

ಉಡುಪಿ: ಉಡುಪಿ ಮತ್ತು ದ.ಕ ಜಿಲ್ಲೆಗಳಲ್ಲಿ ಖಾಸಗಿ ಬಸ್‌ ಪ್ರಯಾಣ ದರವನ್ನು 1ರಿಂದ 2 ರೂ.ಗಳಷ್ಟು ಮಾತ್ರ ಹೆಚ್ಚಿಸಲಾಗಿದೆ. ಈ ದರ ಸರಕಾರದ ನೋಟಿಫಿಕೇಶನ್‌ನಲ್ಲಿ ತಿಳಿಸಲಾಗಿರುವ ಮಿತಿಯೊಳಗೆ ಇದೆ. ಹಾಗಾಗಿ ರಸ್ತೆ ಸಾರಿಗೆ ಪ್ರಾಧಿಕಾರದ ಅನುಮತಿಯ ಆವಶ್ಯಕತೆ ಇಲ್ಲ ಎಂದು ಬಸ್‌ ಮಾಲಕರ ಸಂಘ ತಿಳಿಸಿದೆ.

Advertisement

ಎಕ್ಸ್‌ಪ್ರೆಸ್‌ ಬಸ್‌ ದರವನ್ನು ಕುಂದಾಪುರ- ಉಡುಪಿ: 2 ರೂ., ಉಡುಪಿ – ಮಂಗಳೂರು: 3 ರೂ. ಹೆಚ್ಚಿಸಲಾಗಿದೆ. ಉಳಿದ ಎಲ್ಲ ಸ್ಟೇಜ್‌ಗಳಿಗೆ 1 ಅಥವಾ 2 ರೂ. ಮಾತ್ರ ಹೆಚ್ಚಾಗಿದೆ. ಡೀಸೆಲ್‌ ಬೆಲೆ ಹೆಚ್ಚಾದಾಗ ಪ್ರತಿ ಕಿ.ಮೀ.ಗೆ 4 ಪೈಸೆಯಷ್ಟು ಸರ್ಚಾರ್ಜ್‌ ಹೆಚ್ಚಿಸಲು ಸರಕಾರದ ನೋಟಿಫಿಕೇಷನ್‌ನಲ್ಲಿ ಅವಕಾಶವಿದೆ. ಅದರಂತೆ ಏರಿಕೆ ಮಾಡಲಾಗಿದೆ. ಸರ್ವೀಸ್‌ ಬಸ್‌ಗಳಲ್ಲಿಯೂ 20 ರೂ.ಗಳವರೆಗೆ ಸರ್ಚಾರ್ಜ್‌ 1 ರೂ., 20 ರೂ.ಗಳಿಗಿಂತ ಹೆಚ್ಚು ಇದ್ದರೆ 2 ರೂ. ಹೆಚ್ಚಾಗಿದೆ. ಕೆಲವು ರೂಟ್‌ಗಳಲ್ಲಿ ಹೆಚ್ಚು ಮಾಡಿಲ್ಲ ಎಂದು ಕೆನರಾ ಬಸ್‌ ಮಾಲಕರ ಸಂಘದ ವಕ್ತಾರ ಸದಾನಂದ ಚಾತ್ರ ತಿಳಿಸಿದ್ದಾರೆ. 

ಕಳೆದ ಬಾರಿ ದರ ಏರಿಕೆ ಮಾಡುವಾಗ ಡೀಸೆಲ್‌ ಬೆಲೆ  ಲೀ.ಗೆ 55 ರೂ. ಇತ್ತು, ಈಗ 66 ರೂ. ಆಗಿದೆ. ನೋಟಿಫಿಕೇಷನ್‌ ಮಾಡುವಾಗ ಈ ರೀತಿಯಾಗಿ ಪ್ರತಿದಿನ ಡೀಸೆಲ್‌ ದರ ಏರಿಕೆಯಾಗುತ್ತಿರಲಿಲ್ಲ. ಕಳೆದ ಒಂದು ವಾರದಲ್ಲಿ ಹಲವು ಬಾರಿ ಏರಿಕೆಯಾಗಿದೆ. ಸುರತ್ಕಲ್‌ ಟೋಲ್‌ ದರವನ್ನು ಕೂಡ ನಾವು ಪ್ರತ್ಯೇಕವಾಗಿ ಗಣನೆಗೆ ತೆಗೆದುಕೊಂಡಿಲ್ಲ. ದರ ಏರಿಕೆ ಎ. 16ರಿಂದ ಜಾರಿಗೆ ಬರಲಿದೆ ಎಂದವರು ತಿಳಿಸಿದ್ದಾರೆ.

ಅನುಮತಿ ಬೇಕಾಗಿಲ್ಲ : ದರ ಏರಿಕೆ ನಿರ್ಧಾರ ಕುರಿತು RTO ಜತೆ ಮಾಹಿತಿ ಪಡೆದಿದ್ದೇನೆ. ಈಗ ಏರಿಕೆ ಮಾಡಿರುವ ದರ ಸರಕಾರದ ನೋಟಿಫಿಕೇಷನ್‌ನಲ್ಲಿ ತಿಳಿಸಲಾಗಿರುವ ಪ್ರಮಾಣಕ್ಕಿಂತ ಹೆಚ್ಚಾಗಿಲ್ಲ. ಹಾಗಾಗಿ RTO ಅನುಮತಿ ಬೇಕಿಲ್ಲ ಎಂಬುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಪ್ರಾಧಿಕಾರ ಅಧ್ಯಕ್ಷೆ, ಡಿ.ಸಿ. ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಪ್ರತಿಕ್ರಿಯೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next