Advertisement
ಕೇರಳದ ಕಾಸರಗೋಡಿನ ಮೋಹಮ್ಮದ್ ಮುಸ್ತಾಕ್(31) ಮತ್ತು ಮೊಹಮ್ಮದ್ ಆಶೀಕ್(19) ಮತ್ತು ದಕ್ಷಿಣ ಕನ್ನಡ ಜಿಲ್ಲೆ ಬಂಟವಾಳ ತಾಲೂಕಿನ ಪಿ. ಸಮೀರ ಹಾಗೂ ಮೊಹಮ್ಮದ್ ಅಫ್ರೀದ್ (23) ಬಂಧಿತರು. ಅವರಿಂದ 15 ಲಕ್ಷ ರೂ. ಮೌಲ್ಯದ 48 ಕೆ.ಜಿ. 180 ಗ್ರಾಂ ತೂಕದ ಗಾಂಜಾ, 45 ಲಕ್ಷ ರೂ. ಮೌಲ್ಯದ 1 ಕೆ.ಜಿ. 134 ಗ್ರಾಂ ಹ್ಯಾಷ್ ಆಯಿಲ್, ಕೃತ್ಯಕ್ಕೆ ಬಳಸಿದ್ದ ಒಂದು ತೂಕದ ಯಂತ್ರ, ಖಾಸಗಿ ಬಸ್, ಒಂದು ಕಾರು, 4.700 ರೂ. ನಗದು ವಶಕ್ಕೆ ಪಡೆಯಲಾಗಿದೆ. ಆರೋಪಿಗಳ ವಿಚಾರಣೆಯಲ್ಲಿ ನಗರದ ಪ್ರತಿಷ್ಟಿತ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದರು.
ಆರೋಪಿಗಳ ಪೈಕಿ ಮೊಹಮ್ಮದ್ ಮುಸ್ತಾಕ್ ಸ್ಲೀಪರ್ ಖಾಸಗಿ ಬಸ್ ಮಾಲೀಕನಾಗಿದ್ದು, ಲಾಕ್‌ಡೌನ್ ಸಂದರ್ಭದಲ್ಲಿ ಸ್ಥಳೀಯ ಗಾಂಜಾ ಮಾರಾಟಗಾರರ ಸಂಪರ್ಕ ಪಡೆದು ಅಕ್ರಮ ದಂಧೆಯಲ್ಲಿ ತೊಡಗಿದ್ದಾನೆ. ನೂರಾರು ಕೆ.ಜಿ.ಗಾಂಜಾ ಬೇಯಿಸಿ ಹ್ಯಾಷ್ ಆಯಿಲ್ ತಯಾರಿಸಿ ಅವುಗಳನ್ನು ಬಾಟಲಿಗಳಲ್ಲಿ ತುಂಬಲಾಗಿತ್ತು. ಅನಂತರ ಕೇರಳದ ಕಾಸರಗೋಡಿನಿಂದ ನಿತ್ಯ ಬೆಂಗಳೂರಿಗೆ ಬರುವ ಬಸ್ ನ ಲಗೇಜ್ ಬಾಕ್ಸ್ ಮತ್ತು ಟೂಲ್ ಬಾಕ್ಸ್‌ಗಳಲ್ಲಿ ಇಟ್ಟು ಹ್ಯಾಷ್ ಆಯಿಲ್ ಮತ್ತು ಗಾಂಜಾವನ್ನು ಬೆಂಗಳೂರಿಗೆ ಸಾಗಾಟ ಮಾಡುತ್ತಿದ್ದರು. ಅನಂತರ ಇಲ್ಲಿನ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು.
Related Articles
Advertisement