Advertisement

ಖಾಸಗಿ ಆಸತ್ರೆಗಳು ಶೇ.50 ಹಾಸಿಗೆ ಕಾಯಿರಿಸುವುದು ಅವಶ್ಯ

12:20 PM Apr 25, 2021 | Team Udayavani |

ಹುಬ್ಬಳ್ಳಿ: ಕೋವಿಡ್ ಸೋಂಕಿತರಿಗೆ ಚಿಕಿತ್ಸೆನೀಡುವ ನಿಟ್ಟಿನಲ್ಲಿ ಖಾಸಗಿಆಸ್ಪತ್ರೆಗಳಲ್ಲಿ ಶೇ. 50 ಹಾಸಿಗೆಗಳನ್ನುನೀಡಬೇಕಾಗಿದ್ದು, ಈ ನಿಟ್ಟಿನಲ್ಲಿಕೇಂದ್ರ ಸಚಿವರ ಪ್ರಹ್ಲಾದಜೋಶಿ ಅವರೊಂದಿಗೆ ವಿವಿಧಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಿಪರಿಶೀಲಿಸುವುದಾಗಿ ಜಿಲ್ಲಾ ಉಸ್ತುವಾರಿಸಚಿವ ಜಗದೀಶ ಶೆಟ್ಟರ ತಿಳಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದಅವರು, ಜಿಲ್ಲಾಡಳಿತ ಸೂಚಿಸುವಖಾಸಗಿ ಆಸ್ಪತ್ರೆಗಳು ಶೇ.50 ಹಾಸಿಗೆ ಕಾಯ್ದಿರಿಸಬೇಕಾಗಿದೆ. ಈ ನಿಟ್ಟಿನಲ್ಲಿಆಸ್ಪತ್ರೆಗಳವರೊಂದಿಗೆ ಚರ್ಚಿಸಲಾಗುವುದು.ಸದ್ಯದ ಸ್ಥಿತಿಯಲ್ಲಿ ಖಾಸಗಿಆಸ್ಪತ್ರೆಗಳು ಕೊರೊನಾಸೋಂಕಿತರಿಗೆ ಹಿಂಜರಿಕೆ ಇಲ್ಲದೆಚಿಕಿತ್ಸೆ ನೀಡುತ್ತಿದ್ದಾರೆ ಎಂದರು.10 ವಿಶೇಷ ಆಂಬ್ಯುಲೆನ್‌Õಗಳಲ್ಲಿ 7 ಹುಬ್ಬಳ್ಳಿಯಲ್ಲಿ ಮತ್ತು 3ಧಾರವಾಡದಲ್ಲಿ ಕಾರ್ಯನಿರ್ವಹಿಸಲಿವೆ.

ಜಿಲ್ಲೆಯಲ್ಲಿ ಆಕ್ಸಿಜನ್‌ಗೆ ಯಾವುದೇ ಕೊರತೆಇಲ್ಲ. ಕಿಮ್ಸ್‌ನಲ್ಲಿ ಸಮರ್ಪಕ ಪ್ರಮಾಣದಆಕ್ಸಿಜನ್‌ ಸಂಗ್ರಹವಿದೆ. ಜಿಂದಾಲ್‌ಕಂಪೆನಿಯಿಂದ ಆಕ್ಸಿಜನ್‌ ನಿಯಮಿತವಾಗಿಪೂರೈಕೆ ಆಗುತ್ತಿದೆ. ಪ್ರಸ್ತುತ ಸುಮಾರು 636ಜನ ಕೊರೊನಾ ರೋಗಿಗಳು ವೆಂಟಿಲೇಟರ್‌ಚಿಕಿತ್ಸೆ ಪಡೆಯುತ್ತಿದ್ದಾರೆ. ಕಿಮ್ಸ್‌ನಲ್ಲಿಯೂ ಹಾಸಿಗೆ ಕೊರತೆ ಇಲ್ಲ.

ಒಟ್ಟಾರೆಯಾಗಿಜಿಲ್ಲೆಯಲ್ಲಿ 2,000 ಹಾಸಿಗೆ ಸಿದ್ಧತೆಗೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.ಕೋವಿಡ್‌-19 ಎರಡನೇ ಅಲೆತುಂಡರಿಸುವ ನಿಟ್ಟಿನಲ್ಲಿ ಕೇವಲ ಸರಕಾರಕ್ರಮದಿಂದ ಸಾಧ್ಯವಿಲ್ಲ. ಜನರ ಸಹಕಾರವೂಅಗತ್ಯ. ಜನರು ಜಾಗೃತರಾಗಬೇಕುಎಂದರು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ,ಶಾಸಕ ಶಂಕರ ಪಾಟೀಲ ಮುನೇನಕೊಪ್ಪ,ಜಿಲ್ಲಾ ಧಿಕಾರಿ ನಿತೇಶ ಪಾಟೀಲ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next