Advertisement

ಶಾಟ್‌ಗನ್‌ ವಿಶ್ವಕಪ್‌ ಗುರಿ ತಪ್ಪಿದ ಪೃಥ್ವಿರಾಜ್‌, ಖ್ಯಾನ್‌

12:30 AM Mar 21, 2019 | Team Udayavani |

ಅಕಾಪುಲ್ಕೊ (ಮೆಕ್ಸಿಕೊ): ಇಲ್ಲಿ ನಡೆಯುತ್ತಿರುವ “ಐಎಸ್‌ಎಸ್‌ಎಫ್ ಶಾಟ್‌ಗನ್‌ ವಿಶ್ವಕಪ್‌’ ಕೂಟದಲ್ಲಿ ಪೈನಲ್‌ ಪ್ರವೇಶಿಸುವ ನಿರೀಕ್ಷೆಯಲ್ಲಿದ್ದ ಭಾರತದ ಖ್ಯಾನ್‌ ಚೆನೈ ಮತ್ತು ಪೃಥ್ವಿರಾಜ್‌ ತೊಂಡೈಮನ್‌ ನಿರಾಸೆ ಮೂಡಿಸಿದ್ದಾರೆ. ಪುರುಷರ ಟ್ರ್ಯಾಪ್‌ ವಿಭಾಗದ ಅಂತಿಮ ಅರ್ಹತಾ ಸುತ್ತಿನಲ್ಲಿ ಸೋತು ಫೈನಲ್‌ ಪ್ರವೇಶಿಸುವಲ್ಲಿ ವಿಫ‌ಲರಾಗಿದ್ದಾರೆ.

Advertisement

ಈ ಸ್ಪರ್ಧೆಯಲ್ಲಿ ಆಸ್ಟ್ರೇಲಿಯದ ಜೇಮ್ಸ್‌ ವಿಲ್ಲೆಟ್‌ ಚಿನ್ನದ ಪದಕ ಗೆದ್ದರು. ಕೊನೆಯ ಅರ್ಹತಾ ಸುತ್ತಿನಲ್ಲಿ ಖ್ಯಾನ್‌ 24 ಅಂಕ ಗಳಿಸಿದ್ದರು. ಈ ಅಂಕ ಅವರನ್ನು 6ನೇ ಹಾಗೂ ಅಂತಿಮ ಅರ್ಹತಾ ಸ್ಥಾನಕ್ಕಾಗಿ ನಡೆದ ಸಿಕ್ಸ್‌ವೇ ಶೂಟ್‌ಆಫ್ಗೆ ಪ್ರವೇಶಿಸುವಂತೆ ಮಾಡಿತು. ಇದರಲ್ಲಿ ಖ್ಯಾನ್‌ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ಎಡವಿದರು. ಪೃಥ್ವಿರಾಜ್‌ ಪಫೆìಕ್ಟ್ 25ರ ಮೂರೂ ಸುತ್ತಿನಲ್ಲಿ ವಿಫ‌ಲಾಗಿ 35ನೇ ಸ್ಥಾನಿಯಾಗಿ ಸ್ಪರ್ಧೆ ಮುಗಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next