Advertisement

ಪೃಥಿ ಶಾ ಮತ್ತೆ ಫಿಟ್: ಕಿವೀಸ್‌ ಪ್ರವಾಸಕ್ಕೆ ಸಿದ್ದ

03:29 PM Jan 16, 2020 | Team Udayavani |

ಮುಂಬೈ: ರಣಜಿ ವೇಳೆ ವಿಪರೀತ ಭುಜ ನೋವಿಗೆ ತುತ್ತಾಗಿದ್ದ ಪೃಥ್ವಿ ಶಾ ದೈಹಿಕ ಕ್ಷಮತೆ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಆದ್ದರಿಂದ ಅವರು ಮತ್ತೆ ಭಾರತ ತಂಡದಲ್ಲಿ ಆಡುವ ಕನಸಿಗೆ ಹತ್ತಿರವಾಗಿದ್ದಾರೆ.

Advertisement

ಅವರು ಶೀಘ್ರವೇ ನ್ಯೂಜಿಲೆಂಡಿಗೆ ತೆರಳಿ ಭಾರತ “ಎ’ ತಂಡವನ್ನು ಕೂಡಿ ಕೊಳ್ಳಲಿದ್ದಾರೆ. ಕರ್ನಾಟಕ ವಿರುದ್ಧದ ರಣಜಿ ಪಂದ್ಯದ ವೇಳೆ ಓವರ್‌ ಥ್ರೋ ಒಂದನ್ನು ತಡೆಯಲು ಡೈವ್‌ ಹೊಡೆದ ವೇಳೆ ಪೃಥ್ವಿ ಶಾ ಭುಜದ ನೋವಿಗೆ ಒಳಗಾಗಿದ್ದರು.

“ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯಲ್ಲಿ ನಡೆದ ಯೋ-ಯೋ ಟೆಸ್ಟ್‌ನಲ್ಲಿ ಪೃಥ್ವಿ ಶಾ ಉತ್ತೀರ್ಣರಾಗಿದ್ದಾರೆ. ಗುರುವಾರ ಅಥವಾ ಶುಕ್ರವಾರ ಅವರು ನ್ಯೂಜಿಲೆಂಡಿಗೆ ಪ್ರಯಾಣಿಸಲಿದ್ದಾರೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಪೃಥ್ವಿ ಶಾ 2 ಅಭ್ಯಾಸ ಪಂದ್ಯಗಳನ್ನು ತಪ್ಪಿಸಿಕೊಂಡರೂ ಜ. 22ರಂದು ನಡೆಯಲಿರುವ ಭಾರತ ನ್ಯೂಜಿಲೆಂಡ್‌ “ಎ’ ತಂಡಗಳ ನಡುವಿನ ಮೊದಲ ಏಕದಿನ ಪಂದ್ಯಕ್ಕೆ ಲಭ್ಯರಿರುತ್ತಾರೆ. ಇದರಿಂದ ಅವರು ನ್ಯೂಜಿಲೆಂಡ್‌ ಪ್ರವಾಸ ಕೈಗೊಳ್ಳಲಿರುವ ಭಾರತ ಟೆಸ್ಟ್‌ ತಂಡದ 3ನೇ ಆರಂಭಿಕನಾಗಿಯೂ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ.

Advertisement

Udayavani is now on Telegram. Click here to join our channel and stay updated with the latest news.

Next