Advertisement

ಕೆರಳಿದ ಕೈದಿಗಳು: ಅನಿತಾಗೆ ಧಿಕ್ಕಾರದ ಸ್ವಾಗತ; ರೂಪಾ ಅವರೇ ಬೇಕು

09:20 AM Jul 18, 2017 | Team Udayavani |

ಬೆಂಗಳೂರು: ಡಿಐಜಿ ಆಗಿದ್ದ ರೂಪಾ ಡಿ. ಮೌದ್ಗಿಲ್‌ ಅವರ ವರ್ಗಾವಣೆಯನ್ನು ಸರ್ಕಾರ ಹಿಂಪಡೆದುಕೊಳ್ಳಬೇಕೆಂದು ಪರಪ್ಪನ ಅಗ್ರಹಾರ ಜೈಲಿನಲ್ಲಿ 200 ಕ್ಕೂ ಹೆಚ್ಚು ಕೈದಿಗಳು ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಬಗ್ಗೆ ವರದಿಯಾಗಿದೆ. 

Advertisement

ರೂಪಾ ಅವರ ಪರವಾಗಿದ್ದ 200 ಕ್ಕೂ ಹೆಚ್ಚು ಕೈದಿಗಳು ಮಂಗಳವಾರ ಬೆಳಗ್ಗಿನ ಉಪಹಾರ ಸ್ವೀಕರಸಿದೆ ಪ್ರತಿಭಟಿಸುತ್ತಿರುವ ಕುರಿತು ಮೂಲಗಳು ವರದಿ ಮಾಡಿದ್ದು,ಜೈಲಿನ ಅಧಿಕ್ಷಕಿ ಅನಿತಾ ಆರ್‌ ಅವರನ್ನು ಹುದ್ದೆಯಲ್ಲಿ ಮುಂದುವರಿಸಬಾರದು, ಅವರು ಶಶಿಕಲಾಗೆ ನೆರವು ನೀಡುತ್ತಿದ್ದರು ಎಂದು ಆರೋಪಿಸಿರುವುದಾಗಿ ವರದಿಯಾಗಿದೆ. 

ಅನಿತಾ ಅವರು ಜೈಲಿಗೆ ಬರುತ್ತಿದ್ದಂತೆ ಕೈದಿಗಳು ಧಿಕ್ಕಾರ ಕೂಗಿದ್ದಾರೆ ಎಂದು ವರದಿಯಾಗಿದೆ. 

ಸರ್ಕಾರ ರೂಪಾ ಮತ್ತು ಸತ್ಯನಾರಾಯಣ ರಾವ್‌ ಅವರನ್ನು ಬಂದೀಖಾನೆ ಇಲಾಖೆಯ ಜವಾಬ್ದಾರಿಯಿಂದ ವಿಮುಕ್ತಿಗೊಳಿಸಿದೆ. ಕಾರಾಗೃಹದಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಮುಖ್ಯ ಅಧೀಕ್ಷಕ ಕೃಷ್ಣ ಕುಮಾರ್‌ ಅವರನ್ನು ಸಹ ಎತ್ತಂಗಡಿ ಮಾಡಲಾಗಿದ್ದು, ಯಾವುದೇ ಹುದ್ದೆ ಸೂಚಿಸಲಾಗಿಲ್ಲ. 

ಸತ್ಯನಾರಾಯಣ ಅವರನ್ನು ಎತ್ತಂಗಡಿ ಮಾಡಿದ್ದ ಸರಕಾರ ಬಂದೀಖಾನೆ ಇಲಾಖೆಯ ಎಡಿಜಿಪಿ ಯನ್ನಾಗಿ ಭ್ರಷ್ಟಾಚಾರ ನಿಗ್ರಹ ದಳದ ಎನ್‌.ಎಸ್‌. ಮೇಘರಿಕ್‌ ಅವರನ್ನು ನಿಯುಕ್ತಿಗೊಳಿಸಿದೆ. 

Advertisement

ರೂಪಾ ಅವರ ಸ್ಥಾನಕ್ಕೆ ಇನ್ನೂ ಯಾರನ್ನೂ ನಿಯೋಜಿಸಿಲ್ಲ. ಜೈಲಿನ ಮುಖ್ಯ ಅಧೀಕ್ಷಕ ಕೃಷ್ಣಕುಮಾರ್‌ ಅವರಿಂದ ತೆರವಾದ ಸ್ಥಾನಕ್ಕೆ ಜೈಲಿನ ಅಧೀಕ್ಷಕಿ ಅನಿತಾ ಆರ್‌. ಅವರಿಗೆ ಪ್ರಭಾರ ಹೊಣೆ ನೀಡಲಾಗಿದೆ. ಇನ್ನೊಂದೆಡೆ, ನಿವೃತ್ತ ಅಧಿಕಾರಿ ವಿನಯಕುಮಾರ್‌ ಅವರು ಸೋಮವಾರದಿಂದಲೇ ತನಿಖೆ ಆರಂಭಿಸಿದ್ದಾರೆ. ವಾರದೊಳಗೆ ಪ್ರಾಥಮಿಕ ವರದಿ ನೀಡುವಂತೆ ಸರಕಾರ ಅವರಿಗೆ ಸೂಚಿಸಿದ್ದು, ತಿಂಗಳೊಳಗೆ ಪೂರ್ಣ ವರದಿ ನೀಡುವಂತೆ ನಿರ್ದೇಶಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next