Advertisement

ಜೈಲಿನಲ್ಲಿ ಕೈದಿಗಳ ಹೊಡೆದಾಟ: ಓರ್ವನಿಗೆ ಗಾಯ

11:47 AM May 09, 2017 | Team Udayavani |

ಮಂಗಳೂರು: ಜಿಲ್ಲಾ ಕಾರಾಗೃಹದ ಸಂದರ್ಶಕರ ಗ್ಯಾಲರಿ ಬಳಿ ಸೋಮವಾರ ಸಂಜೆ ವಿಚಾರಣಾಧೀನ ಕೈದಿಗಳು ಹೊಡೆದಾಡಿಕೊಂಡಿದ್ದು, ಈ ಘಟನೆಯಲ್ಲಿ ವಿಚಾರಣಾಧೀನ ಕೈದಿ ಪುತ್ತೂರಿನ ಪ್ರತಾಪ್‌ ರೈಗೆ ಗಾಯವಾಗಿದೆ.
ಗಾಯಾಳು ಮೂಡಬಿದಿರೆಯ ಪ್ರಕರಣವೊಂದಕ್ಕೆ ಸಂಬಂಧಿಸಿದ ಆರೋಪಿಯಾಗಿದ್ದು, ಕೋರ್ಟ್‌ ವಾರಂಟ್‌ನಲ್ಲಿ ಇತ್ತೀಚೆಗೆ ಆತನನ್ನು ಬಂಧಿಸಲಾಗಿತ್ತು. ಈತನ ಮೇಲೆ ಆರೋಪಿಗಳಾದ ಮಹಮ್ಮದ್‌ ನಾಸೀರ್‌ ಅಲಿಯಾಸ್‌ ನಂಗ್‌ ನಾಸಿರ್‌, ಅಲ್ತಾಫ್‌, ಬಾಂಬೆ ಫೈಜಲ್‌ ಹಲ್ಲೆ ನಡೆಸಿದ್ದರು. 

Advertisement

ಜಿಲ್ಲಾ ಕಾರಗೃಹದಲ್ಲಿ ಸೋಮವಾರ ಸಂಜೆ ವೇಳೆಗೆ ಎ ಮತ್ತು ಬಿ ವಿಭಾಗದ ಕೈದಿಗಳನ್ನು ಏಕಕಾಲಕ್ಕೆ ಸಾರ್ವಜನಿಕರ ಭೇಟಿಗೆ ಬಿಡಲಾಗಿದ್ದು, ಎರಡು ವಿಭಾಗದ ಕೈದಿಗಳು ವಿಸಿಟರ್‌ ರೂಮ್‌ ಬಳಿ ಪರಸ್ಪರ ಎದುರಾಗಿದ್ದರು. ಈ ವೇಳೆ ಕೈದಿಗಳು ಮಧ್ಯೆ ಪರಸ್ಪರ ಗುರಾಯಿಸಿಕೊಂಡಿದ್ದು, ಬಳಿಕ ಮಾತಿಗೆ ಮಾತು ಬೆಳೆದು ಅವಾಚ್ಯ ಶಬ್ದಗಳಿಂದ ಬೈದುಕೊಂಡು ಗಲಾಟೆ ನಡೆಸಿದ್ದಾರೆ.ಸಂದರ್ಭದಲ್ಲಿ ಏಕಾಏಕಿ 3 ಮಂದಿ ಕೈದಿಗಳು ಪುತ್ತೂರಿನ ಪ್ರತಾಪ್‌ ರೈ ಮೇಲೆ ಇಂಟರಾಲಾಕ್‌ ಮತ್ತು ಕಲ್ಲುಗಳಿಂದ ಹಲ್ಲೆ ನಡೆಸಿದ್ದು, ಇದರಿಂದ ಪ್ರತಾಪ್‌ ತಲೆಗೆ ಗಾಯವಾಗಿದೆ. ಕೂಡಲೇ ಆತನನ್ನು ವೆನಾÉಕ್‌ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದ್ದು, ಬಳಿಕ ಜೈಲಿಗೆ ಕರೆದುಕೊಂಡು ಬರಲಾಗಿದೆ. ಘಟನೆ ಜೈಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಳೆದ ಹಲವು ದಿನಗಳಿಂದ ಜೈಲಿನ “ಎ’ ವಿಭಾಗದಲ್ಲಿ ಪರಸ್ಪರ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. 

ಸ್ಥಳಾಂತರಗೊಂಡಿಲ್ಲ ಆರೋಪಿ: ಕೈದಿ ಬಾಂಬೆ ಫೈಝಲ್‌ನನ್ನು ಬೆಂಗಳೂರಿನ ಜೈಲಿಗೆ ಸ್ಥಳಾಂತರಿಸಲು ಆದೇಶ ಬಂದು ತಿಂಗಳು ಒಂದು ಕಳೆದಿದ್ದರೂ, ಈವರೆಗೂ ಆತನ ವರ್ಗಾವಣೆ ಮಾತ್ರ ನಡೆದಿಲ್ಲ. ಸೋಮವಾರ ನಡೆದ ಮಾರಾಮಾರಿ ಪ್ರಕರಣದಲ್ಲಿ ಈತನೂ ಬಾಗಿಯಾಗಿದ್ದ. ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next