Advertisement

ವಿದ್ಯಾರ್ಥಿಗಳ ಸಾಧನೆಗೆ ಆದ್ಯತೆ: ಡಾ|ಸುರೇಶ್‌

11:04 AM Apr 16, 2018 | |

ಇನೋಳಿ: ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಸಾಧನೆಗಳ ಬದಲಾಗಿ ಮಾನ್ಯತೆಯನ್ನು ತುಲನೆ ಮಾಡಲಾಗುತ್ತಿದೆ. ವಾಸ್ತವವಾಗಿ ವಿದ್ಯಾರ್ಥಿಗಳ ಬುದ್ಧಿವಂತಿಕೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದರೆ ಅವರ ಭವಿಷ್ಯದ ಜತೆಗೆ ಶಿಕ್ಷಣ ಸಂಸ್ಥೆಯ ಹೆಸರು ಖ್ಯಾತಿ ಪಡೆಯುತ್ತದೆ ಎಂದು ಐಐಟಿ ಮುಂಬೈ ನಿರ್ದೇಶಕ ಡಾ| ಎ.ಕೆ. ಸುರೇಶ್‌ ಅಭಿಪ್ರಾಯಪಟ್ಟರು.

Advertisement

ಇನೋಳಿಯ ಬೇರೀಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಮತ್ತು ಬೇರಿಸ್‌ ಎನ್ವಿರೋ ಆರ್ಕಿಟೆಕ್ಚರ್‌ ಡಿಸೈನ್‌ ಸ್ಕೂಲ್‌ ‘ಬಿಐಟಿ ಆ್ಯಂಡ್‌ ಬೀಡ್ಸ್‌ ಉತ್ಸವ- 2018’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಆವಿಷ್ಕಾರಗಳತ್ತ ಮುಖ ಮಾಡಿ
ಎಂಜಿನಿಯರಿಂಗ್‌ ವಿಭಾಗ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಐತಿಹಾಸಿಕ ವಿಚಾರಗಳನ್ನು ಒಳಗೊಂಡ ಸಮಗ್ರ ವಿಷಯವಾಗಿದೆ. ತಾಂತ್ರಿಕ ಕೌಶಲಗಳ ಉಪಯೋಗದ ಜತೆಗೆ ಆವಿಷ್ಕಾರಗಳು ಎಂಜಿನಿಯರಿಂಗ್‌ ಪದವೀಧರರನ್ನು ಯಶಸ್ಸಿನ ಹಾದಿಯಲ್ಲಿ ನಡೆಸುತ್ತವೆ. ಈ ನಿಟ್ಟಿನಲ್ಲಿ ಬಿಐಟಿ ಶಿಕ್ಷಣ ಸಂಸ್ಥೆಯ ವಾತಾವರಣ ಪ್ರಕೃತಿ ಮಡಿಲಿನ ಜತೆಗಿನ ಒಡನಾಟ ಇರುವುದರಿಂದ ಶಿಕ್ಷಣಕ್ಕೆ ಪೂರಕವಾಗಿದ್ದು ವಿದ್ಯಾರ್ಥಿಗಳು ಹೊಸ ಆವಿಷ್ಕಾರಗಳತ್ತ ಮುಖ ಮಾಡಬೇಕಾಗಿದೆ ಎಂದರು. ಬೇರೀಸ್‌ ಅಕಾಡೆಮಿ ಆಫ್‌ ಲರ್ನಿಂಗ್‌ನ ಅಧ್ಯಕ್ಷ ಸೈಯದ್‌ ಮಹಮದ್‌ ಬ್ಯಾರಿ ಅಧ್ಯಕ್ಷತೆ ವಹಿಸಿದ್ದರು.

ಬೆಂಗಳೂರು ಇನ್ಪ್ಸಿರೇಜ್  ಸಾಫ್ಟ್‌ ವೇರ್‌ ಕನ್ಸಲ್ಟಿಂಗ್‌ ಪ್ರೈ.ಲಿ.ನ ನಿರ್ದೇಶಕಿ ಅನ್ನಪೂರ್ಣಾ, ಮಂಗಳೂರು ನವ
ಬಂದರು ಟ್ರಸ್ಟಿನ ಮೆಕ್ಯಾನಿಕಲ್‌ ಎಂಜಿನಿಯರ್‌ ಸತೀಶ್‌ ಹೊನ್ನಕಟ್ಟೆ ಮುಖ್ಯ ಅತಿಥಿಗಳಾಗಿದ್ದರು.

ಬೇರೀಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಪ್ರಾಂಶುಪಾಲ ಡಾ| ಆ್ಯಂಟನಿ ಎ.ಜೆ., ಬೇರಿಸ್‌ ಎನ್ವಿರೋ ಆರ್ಕಿಟೆಕ್ಚರ್‌ ಡಿಸೈನ್‌ ಸ್ಕೂಲ್‌ನ ಪ್ರಾಂಶುಪಾಲ ಅಶೋಕ್‌ ಮೆಂಡೋನ್ಸ ವಾರ್ಷಿಕ ವರದಿ ಮಂಡಿಸಿದರು. ಬಿಐಟಿ ಸಿಎಸ್‌ಇ ವಿಭಾಗ ಮುಖ್ಯಸ್ಥ ಪ್ರೊ| ಮುಸ್ತಾಫ ಬಸ್ತಿಕೋಡಿ ಸ್ವಾಗತಿಸಿದರು. ಉರೂಸಾ ಖಾನ್‌ ನಿರೂಪಿಸಿದರು. ಅಬೂಬಕರ್‌ ಶಮೀಝ್ ವಂದಿಸಿದರು.

Advertisement

ಬಹುಮಾನ ವಿತರಣೆ
ಈ ಸಂದರ್ಭ ರ‍್ಯಾಂಕ್, ಉನ್ನತ ದರ್ಜೆಯಲ್ಲಿ ತೇರ್ಗಡೆ ಹೊಂದಿದ ಕ್ರೀಡಾ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತ
ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next