Advertisement

ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ಆದ್ಯತೆ ಕೊಡುವೆ

08:16 PM Nov 15, 2020 | Suhan S |

ಶಿರಾ: ಆಗ್ನೇಯ ಪದವೀಧರರ ಕ್ಷೇತ್ರದ ಶಾಸಕರಾಗಿ ಆಯ್ಕೆ ಮಾಡುವಲ್ಲಿ ಸಹಕರಿಸಿದ ಐದು ಜಿಲ್ಲೆಗಳ ಸಾಮಾನ್ಯ ಕಾರ್ಯಕರ್ತರಿಂದ ಮೊದಲ್ಗೊಂಡು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ವೈ.ಎ.ನಾರಾಯಣಸ್ವಾಮಿ ಅವರಿಗೆ ಕೃತಜ್ಞತೆಗಳು ಎಂದು ನೂತನ ಎಂಎಲ್‌ಸಿ ಚಿದಾನಂದ ಎಂ.ಗೌಡ ತಿಳಿಸಿದರು.

Advertisement

ಇತ್ತೀಚೆಗೆ ಮುಕ್ತಾಯಗೊಂಡ ಚುನಾವಣೆಯಲ್ಲಿ ವಿಧಾನಪರಿಷತ್‌ ಸದಸ್ಯರಾಗಿ ಆಯ್ಕೆಗೊಂಡ ಚಿದಾನಂದ ಎಂ.ಗೌಡ, ಶನಿವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಬಿಜೆಪಿ ಪಕ್ಷವೊಂದು ಅವಿಭಕ್ತ ಕುಟುಂಬದಂತೆ ಸಂಘಟಿತರಾಗಿ,ತಾವೇ ಅಭ್ಯರ್ಥಿ ಎನ್ನುವಂತೆ ಪ್ರಚಾರದಲ್ಲಿ ತೊಡಗಿಸಿ ತಮ್ಮ ಗೆಲುವಿಗೆ ಶ್ರಮಿಸಿದಎಲ್ಲರಿಗೂದೀಪಾವಳಿಹಬ್ಬದ ಶುಭಾಶಯಗಳೊಂದಿಗೆಕೃತಜ್ಞತೆ ಅರ್ಪಿಸಿದರು. ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವೆ: ಶಿಕ್ಷಕರ, ಉಪನ್ಯಾಸಕರು ಮತ್ತಿತರೆ ಸರ್ಕಾರಿ ನೌಕರರು ಎದುರಿಸುತ್ತಿರುವ ಪದೋನ್ನತಿ, ವರ್ಗಾವಣೆ ಮೊದಲಾದ ಸಮಸ್ಯೆ, ಕೋವಿಡ್‌ ಕಾಲದಲ್ಲಿ ಅತಿಥಿ ಉಪನ್ಯಾಸಕರ ಗೌರವಧನ ಕೊಡಿಸುವ ಬಗ್ಗೆಯೂ ಗಮನ ಹರಿಸುವುದು ತಮ್ಮ ಆದ್ಯತೆ. ಅದರಂತೆ ವಕೀಲರು, ವೈದ್ಯರು, ಅಭಿಯಂತರರು, ನಿರುದ್ಯೋಗಿಪದವೀಧರರು ತಮಗೆ ಮತ ಚಲಾಯಿಸಿದ್ದು, ಎಲ್ಲರನಿರೀಕ್ಷೆಗೆ ತಕ್ಕಂತೆ ಕೆಲಸ ನಿರ್ವಹಿಸಿ, ಅವರ ಸಮಸ್ಯೆ ಬಗೆಹರಿಸಲಿದ್ದೇನೆಂದರು.

ಅಭಿವೃದ್ಧಿ ಚಿಂತನೆ: ಹೊಸ ಶಿಕ್ಷಣ ನೀತಿಯಡಿ, ಸರ್ಕಾರಿ ಶಾಲೆಗಳ ಸಬಲೀಕರಣದ ಬಗ್ಗೆ ಅತ್ಯಂತ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ. ತಮ್ಮ ಮುಂದಿನ 6 ವರ್ಷದ ಅವಧಿಯಲ್ಲಿ ಜಿಲ್ಲೆಯ ಎಲ್ಲಾತಾಲೂಕುಗಳಲ್ಲಿ ಪಕ್ಷದ ಬಲವರ್ಧನೆಗೆ ಚಿಂತನೆನಡೆಸಿ, ಸ್ಥಳಿಯ ಮುಖಂಡರೊಡಗೂಡಿ ಚರ್ಚಿಸಿ,ಮುಂದಿನ 50ವರ್ಷಗಳ ಅವಧಿಯಲ್ಲಿ ಪಕ್ಷದ ಅಭಿವೃದ್ಧಿ ಬಗ್ಗೆ ಕಾರ್ಯಯೋಜನೆ ರೂಪಿಸುವ ಕುರಿತು ಚಿಂತನೆ ನಡೆಸುವುದಾಗಿ ತಿಳಿಸಿದರು. ಶಿರಾ ತಾಲೂಕು ಎಂದಿಗೂ ಜಾತ್ಯತೀತವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಪ್ರತಿ ಪಕ್ಷದಲ್ಲೂ ಎಲ್ಲಾ ಜಾತಿಯ ನಾಯಕರು ಇದ್ದಾರೆ. ಇಲ್ಲಿ ಯಾರೋ ಹೊರಗಿನವರು ಬಂದು ಒಂದು ಜಾತಿಯನ್ನು ಓಲೈಸುವ ನಿಟ್ಟಿನಲ್ಲಿ ಮತ್ತೂಂದು ಜಾತಿಯವರನ್ನು ಎತ್ತಿಕಟ್ಟುವುದನ್ನು ವಿರೋಧಿಸುತ್ತೇನೆ ಎಂದು ಯಾರ ಹೆಸರನ್ನೂ ಉಲ್ಲೇಖೀಸದೆ ನುಡಿದರು.

ಟೋಪಿ ಹಾಕುವ ಕೆಲಸ ನಡೆದಿತ್ತು: ಪಕ್ಷದ ಜಿಲ್ಲಾ ಕಾರ್ಯದರ್ಶಿ‌ ,ಚುನಾವಣೆವೇಳೆಹೇಮಾವತಿ ನೀರ®ು° ‌ ಮದಲೂರು ಕೆರೆಗೆ ಹರಿಸುವ ವಿಚಾರ ಮುನ್ನೆಲೆಗೆ ಬಂದ ಹಿನ್ನೆಲೆಯಲ್ಲಿ ತಾವು ಅಧಿಕಾರಿಗಳು, ವಿವಿಧ ಮುಖಂಡರ ಜತೆ ಚರ್ಚೆ ನಡೆಸಿದಾಗ ಇದರ ಹಿಂದಿನ ಹುನ್ನಾರ ಅರ್ಥವಾಯಿತು. ಮದಲೂರು ಕೆರೆಗೆ ನೀರು ಹರಿಸುವುದು ಈ ಹಿಂದೆಯೂ ಸಾಧ್ಯವಿತ್ತು. ಆದರೆ, ಅದನ್ನು ಜೀವಂತವಾಗಿಟ್ಟು, ಚುನಾವಣೆ ವಸ್ತುವಾಗಿಸಿ,ಜನರಿಗೆ ಟೋಪಿ ಹಾಕುವಕೆಲಸ ಆಗುತ್ತಿತ್ತು. ಪೈಪ್‌ಲೈನ್‌ ಮೂಲಕ ನೀರು: ನೈಸರ್ಗಿಕ ಹಳ್ಳ ಹೊರತುಪಡಿಸಿ, ಬುದ್ಧಿವಂತಿಕೆಯಿಂದ, ವೈಜ್ಞಾನಿಕವಾಗಿ ಪೈಪ್‌ಲೈನ್‌ ಮೂಲಕ ನೀರು ಹರಿಸಿದರೆ ಕೆರೆಗಳು,ಪಿಕಪ್‌ಗ್ಳು ಎಲ್ಲವನ್ನೂ ತುಂಬಿಸಲು ಸಾಧ್ಯವಿದೆ. ಈಅಂಶ ನಮ್ಮ ಮುಖಂಡರಿಗೆ ಮನವರಿಕೆ ಆಗಿದೆ. ಅದರಂತೆ ಸರ್ಕಾರವೂ ನಮಗೆ ಬೆಂಬಲ ನೀಡಲಿದೆ.ಸದ್ಯದಲ್ಲೇ ಅದರಕಾರ್ಯಯೋಜನೆ ಸಾಧುವಾಗಲಿದೆ. ಈಗಿರುವಂತೆಯೇ ಪ್ರಸ್ತುತ ವರ್ಷ ಮದಲೂರು ಕೆರೆಗೆನೀರು ಹರಿಸಿ, ಮುಖ್ಯಮಂತ್ರಿಗಳೇ ಬಂದು ಪೂಜೆ ಸಲ್ಲಿಸಲಿದ್ದಾರೆ. ಮುಂದಿನ ವರ್ಷದ ಹೊತ್ತಿಗೆ, ಪೈಪ್‌ ಲೈನ್‌ ಮೂಲಕ ನೀರು ಹರಿಸುವ ಕ್ರಮ ಕೈಗೊಳ್ಳಲಾಗುವುದು. ಎರಡು ವರ್ಷಗಳಲ್ಲಿ ಭದ್ರಾ ನೀರೂ ಹರಿಯಲಿದೆ. ಅದಕ್ಕಾಗಿ ಮುಖ್ಯಮಂತ್ರಿಗಳು 900ಕೋಟಿ ಹಣ ಬಿಡುಗಡೆ ಮಾಡಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ನಗರ ಮಂಡಲ ಅಧ್ಯಕ್ಷ ವಿಜಯರಾಜ್‌, ಸ್ನೇಕ್‌ ನಂದೀಶ್‌, ಮಾಜಿ ಅಧ್ಯಕ್ಷ ಬಸವರಾಜು, ಹೊನ್ನ ಗೊಂಡನಹಳ್ಳಿ ಚಿಕ್ಕಣ್ಣ, ಸುಬ್ರಹ್ಮಣ್ಯ, ನರಸಿಂಹೇಗೌಡ, ಶ್ರೀಧರಮೂರ್ತಿ, ಉಮೇಶ್‌, ಗಿರಿಧರ್‌, ಲಕ್ಷ್ಮೀ ನಾರಾಯಣ, ರಘು.ಪಿ, ಕಾಡಿ ದೇವರಾಜು, ಸಿ. ಕರಿಯಣ್ಣ, ಕೋಟೆ ಬಾಬು, ಬಂಬು ನಾಗರಜ್‌,ಕೋಟೆ ರಘು, ಲಿಂಗರಾಜು ಮತ್ತಿತರರಿದ್ದರು.

ಐದು ಜಿಲ್ಲೆಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ :  ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳು ಸತತ ಬರಪೀಡಿತ ಪ್ರದೇಶಗಳಾಗಿದ್ದು, ಸ್ಥಳೀಯ ಪದವೀಧರರು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ, ಉದ್ಯೋಗ ಸಂಪಾದನೆ ಮಾಡಿಕೊಳ್ಳಲು ಸಹಾಯವಾಗುವಂತೆ ಸ್ಥಳೀಯ ಸಂಪನ್ಮೂಲಗಳನ್ನೇ ಬಳಸಿ ತರಬೇತಿ ಕೊಡುವ ಯೋಜನೆ ಜಾರಿಗೆ ತರಲಾಗುತ್ತದೆ. ಅಲ್ಲದೇ, ಪ್ರತಿ ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್‌ ಸ್ಥಾಪನೆಗೆಕ್ರಮಕೈಗೊಳ್ಳುವ ಯೋಜನೆ ಇದೆ ಎಂದು ನೂತನ ಎಂಎಲ್‌ಸಿ ಚಿದಾನಂದ ಎಂ.ಗೌಡ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next