Advertisement

ಕಾನೂನು ಸುವ್ಯವಸ್ಥೆಗೆ ಆದ್ಯತೆ: ಐಜಿಪಿ ನಿಂಬಾಳ್ಕರ್‌

07:10 AM Aug 17, 2017 | Harsha Rao |

ಮಂಗಳೂರು: ರಾಜ್ಯದಲ್ಲಿ ಖಡಕ್‌ ಪೊಲೀಸ್‌ ಅಧಿಕಾರಿ ಎಂದೇ ಹೆಸರು ಪಡೆದಿರುವ ಹೇಮಂತ್‌ ನಿಂಬಾಳ್ಕರ್‌ ಅವರು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ವ್ಯಾಪ್ತಿಯನ್ನೊಳಗೊಂಡ ಪಶ್ಚಿಮ ವಲಯದ ಐಜಿಪಿ ಆಗಿ ಬುಧವಾರ ಅಧಿಕಾರ ವಹಿಸಿಕೊಂಡಿದ್ದಾರೆ. 

Advertisement

ಬೆಂಗಳೂರಿನಲ್ಲಿ ಪೂರ್ವ ವಲಯದ ಅಡಿಶನಲ್‌ ಪೊಲೀಸ್‌ ಕಮಿಷನರ್‌ ಆಗಿದ್ದಾಗ ಕುಖ್ಯಾತ ರೌಡಿ ಬಾಂಬ್‌ ನಾಗನನ್ನು ಹೆಡೆಮುರಿ ಕಟ್ಟಿದ್ದ, ಪ್ರಕರಣವೊಂದರಲ್ಲಿ ಅಗ್ನಿ ಶ್ರೀಧರ್‌ ಅವರಿಗೆ ಕಪಾಳ ಮೋಕ್ಷ ಮಾಡಿ ಅವರನ್ನು ತಿದ್ದಲು ಪ್ರಯತ್ನಿಸಿದ ದಿಟ್ಟ ಅಧಿಕಾರಿ ಹೇಮಂತ್‌ ನಿಂಬಾಳ್ಕರ್‌ ಅವರಿಂದ ಕರಾವಳಿಯ ಜನರು ಬಹಳಷ್ಟು ನಿರೀಕ್ಷೆಗಳನ್ನು ಇರಿಸಿಕೊಂಡಿದ್ದಾರೆ. 1998ರ ಐಪಿಎಸ್‌ ಬ್ಯಾಚ್‌ನ ಅಧಿಕಾರಿ ಆಗಿರುವ ಅವರು ಪ್ರೊಬೇಶನರಿ ಎಸ್‌ಪಿ ಆಗಿದ್ದಾಗ 2000 ಇಸವಿ ಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಮತ್ತು ಮೂಡಬಿದಿರೆ ಪೊಲೀಸ್‌ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದರು. ಆ ಬಳಿಕ 2009ರಲ್ಲಿ ಪಶ್ಚಿಮ ವಲಯ ವ್ಯಾಪ್ತಿಯ ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಸ್‌ಪಿ ಆಗಿ ಕರ್ತವ್ಯ ನಿರ್ವಹಿಸಿದ ಅನುಭವವಿದೆ.

ಮೂರು ವರ್ಷಗಳ ಹಿಂದೆ ಉತ್ತರ ಭಾರತದ ಉತ್ತರಖಂಡ ದಲ್ಲಿ ಮೇಘ ಸ್ಫೋಟ ಸಂಭವಿಸಿ ಪ್ರವಾಹದಿಂದ ಅನೇಕ ಸಾವು ನೋವು ಸಂಭವಿಸಿದ ಸಂದರ್ಭದಲ್ಲಿ ಕರ್ನಾಟಕ ಸರಕಾರದ ವಿಶೇಷ ಅಧಿಕಾರಿಯಾಗಿ ಉತ್ತರಖಂಡಕ್ಕೆ ತೆರಳಿದ್ದ ಅವರು ರಾಜ್ಯದ 1,300 ಯಾತ್ರಾರ್ಥಿಗಳನ್ನು ರಕ್ಷಿಸಿ ಕರೆ ತಂದಿದ್ದರು. ಈ ರೀತಿ ತಮ್ಮ ಅಧಿಕಾರಾವಧಿಯಲ್ಲಿ ಎಲ್ಲೆಡೆ ಗಮನಸೆಳೆದಿರುವ ಹೇಮಂತ್‌ ನಿಂಬಾಳ್ಕರ್‌ ಅವರು ಪಶ್ಚಿಮ ವಲಯದ ಐಜಿಪಿಯಾಗಿ ಅಧಿ ಕಾರ ವಹಿಸಿಕೊಂಡ ಮೊದಲ ದಿನವೇ ಉದಯ ವಾಣಿ ಯೊಂದಿಗೆ ಮಾತನಾಡಿದ್ದಾರೆ. ಪತ್ರಿಕೆಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ. 

– ನಿಮ್ಮ ಮುಂದಿರುವ ಸವಾಲುಗಳೇನು?
ಒಂದು ಕಡೆ ಅಕ್ರಮ ಚಟುವಟಿಕೆಗಳ ನಿಯಂ ತ್ರಣ ಮತ್ತು ಸಮಾಜ ಘಾತಕ ಶಕ್ತಿಗಳನ್ನು ಮಟ್ಟ ಹಾಕಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವುದು ಹಾಗೂ ಇನ್ನೊಂದೆಡೆ ಕಾನೂನಿನ ಪರಿಪಾಲನೆ- ಇವೆರಡರ ಮಧ್ಯೆ ನಾವು ಕೆಲಸ ಮಾಡಬೇಕಾಗಿದೆ. ಇದೊಂದು ಸವಾಲು ಆಗಿದ್ದು, ಸಮರ್ಥವಾಗಿ ನಿಭಾಯಿಸಿಕೊಂಡು ಹೋಗಲು ಪ್ರಯತ್ನಿಸುತ್ತೇನೆ.

- ಜಿಲ್ಲೆಯಲ್ಲಿನ ಅಕ್ರಮ ಮತ್ತು ಸಮಾಜ ವಿರೋಧಿ ಚಟುವಟಿಕೆಗಳ ವಿರುದ್ಧ ಯಾವ ಕ್ರಮ ಕೈಕೊಳ್ಳುವಿರಿ ?
ಯಾವುದೇ ರೀತಿಯ ಸಮಾಜ ವಿರೋಧಿ ಕೃತ್ಯ, ಅಕ್ರಮ ಮತ್ತು ಅಪರಾಧ ಸಂಬಂಧಿತ ಚಟು ವಟಿಕೆಗಳಿಗೆ ಕಾನೂನು ಸಮ್ಮತವಾಗಿ ತಕ್ಕ ಉತ್ತರ ಕೊಡಲಾಗುವುದು. 

Advertisement

- ಶರತ್‌ ಮಡಿವಾಳ ಕೊಲೆ ಪ್ರಕರಣದ ಮುಂದಿನ ತನಿಖೆಯ ಬಗ್ಗೆ ಏನು ಹೇಳುವಿರಿ? 
ಶರತ್‌ ಕೊಲೆ ಪ್ರಕರಣದಲ್ಲಿ ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಎಲ್ಲ ಆರೋಪಿಗಳನ್ನು ಬಂಧಿಸಲಾಗುವುದು.

- ನೀವು ಪ್ರೊಬೇಶನರಿ ಎಸ್‌ಪಿ ಆಗಿದ್ದಾಗ ವಿಟ್ಲ ಮತ್ತು ಮೂಡಬಿದಿರೆ ಪೊಲೀಸ್‌ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದೀರಿ. ಸುಮಾರು 17 ವರ್ಷಗಳ ಬಳಿಕ ಮತ್ತೆ ದಕ್ಷಿಣ ಕನ್ನಡ ಜಿಲ್ಲೆಗೆ ಬಂದಿದ್ದೀರಿ?
ಕಳೆದ 17 ವರ್ಷಗಳಲ್ಲಿ ಅನೇಕ ಬದಲಾವಣೆ ಗಳಾಗಿದ್ದು, ಈ ಬಗ್ಗೆ ಇಲ್ಲಿನ ಪೊಲೀಸರ ಜತೆ ಚರ್ಚಿಸಿ ಅಧ್ಯಯನ ನಡೆಸಿ ಪರಿಸ್ಥಿತಿಯನ್ನು ಅರ್ಥೈಸಿ ಯಾವ ರೀತಿಯ ಸೇವೆ ಒದಗಿಸ ಬಹು ದೆಂದು ತೀರ್ಮಾನಿಸುತ್ತೇವೆ. 

- ಉತ್ತರಖಂಡದಲ್ಲಿ ಮೇಘಸ್ಫೋಟ ಸಂಭ ವಿಸಿದಾಗ ಅಲ್ಲಿಗೆ ತೆರಳಿ ರಾಜ್ಯದ ಜನರ ರಕ್ಷಣೆ ಮಾಡಿ ರುವ ವಿಶೇಷ ಅನುಭವದ ಬಗ್ಗೆ ಹೇಳುತ್ತೀರಾ? 
ಅಂದು ಉತ್ತರಖಂಡಕ್ಕೆ ರಾಜ್ಯ ಸರಕಾರ ನನ್ನನ್ನು ವಿಶೇಷ ಅಧಿಕಾರಿಯಾಗಿ ಕಳುಹಿಸಿತ್ತು. ಅಲ್ಲಿ ನಾವು ರಾಜ್ಯದ 1,300 ಜನರನ್ನು ರಕ್ಷಿ ಸಿದ್ದೆವು. ಜನರಿಗೆ ಎಲ್ಲ ರೀತಿಯ ರಕ್ಷಣೆ ಒದಗಿ ಸುವುದು ಪೊಲೀಸ್‌ ವ್ಯವಸ್ಥೆಯ ಒಂದು ಭಾಗ ವಾಗಿದೆ. ಉತ್ತರಖಂಡದಲ್ಲಿ ನಡೆಸಿದ ರಕ್ಷಣಾ ಕಾರ್ಯದ ಅನುಭವದಲ್ಲಿ ಹೇಳುವುದಾದರೆ “ಬೇಸಿಕ್‌ ಪೊಲೀಸಿಂಗ್‌’ನ್ನು ಇಲ್ಲಿಯೂ ಜಾರಿ ಗೊಳಿಸಲಾಗುವುದು.

- ಕರಾವಳಿ ಜನರು ನಿಮ್ಮಿಂದ ಯಾವ ರೀತಿಯ ಸೇವೆ ನಿರೀಕ್ಷಿಸಬಹುದು?
ಜನರ ಸಾಮಾನ್ಯ ಜನ ಜೀವನಕ್ಕೆ ತೊಂದರೆಯಾಗದಂತೆ ಉತ್ತಮ ಪೊಲೀಸ್‌ ಸೇವೆ ಒದಗಿಸುವುದು ನಮ್ಮ ಕರ್ತವ್ಯ. ಜನರ ಸುರಕ್ಷತೆಗೆ ಹಾಗೂ ಅವರು ಪೊಲೀಸ್‌ ವ್ಯವಸ್ಥೆಯ ಮೇಲೆ ಇರಿಸಿದ ವಿಶ್ವಾಸಕ್ಕೆ  ಧಕ್ಕೆಯಾಗದಂತೆ ಕಾರ್ಯ ನಿರ್ವ ಹಿಸು ತ್ತೇವೆ. ಸಮಾಜ ವಿರೋಧಿ ಶಕ್ತಿಗಳನ್ನು ಮಟ್ಟ ಹಾಕು ವುದರ ಜತೆಗೆ ಜನರಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಕೂಡ ಹಮ್ಮಿಕೊಳ್ಳುವ ಉದ್ದೇಶವಿದೆ. 

- ಪಶ್ಚಿಮ ವಲಯಕ್ಕೆ ನಾಲ್ಕು ಜಿಲ್ಲೆಗಳ ವಿಶಾಲ ವ್ಯಾಪ್ತಿ ಇರುವ ಜತೆಗೆ ಕರಾವಳಿಯ ಜಿಲ್ಲೆಗಳು ಕೋಮು ಸೂಕ್ಷ್ಮ ಪ್ರದೇಶ ಆಗಿರುವಾಗ ಇದನ್ನೆಲ್ಲ  ಹೇಗೆ ನಿಭಾಯಿಸುವಿರಿ ?
ಈ ವಲಯದ ವ್ಯಾಪ್ತಿಗೆ ಬರುವ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಪೊಲೀಸ್‌ ವರಿಷ್ಠಾಧಿಕಾರಿಗಳ ಜತೆ ಚರ್ಚಿಸಿ ಸಮಸ್ಯೆಗಳನ್ನು ಅರಿತುಕೊಂಡು ಅವುಗಳ ಪರಿಹಾರಕ್ಕೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು.

- ಹಿಲರಿ ಕ್ರಾಸ್ತಾ

Advertisement

Udayavani is now on Telegram. Click here to join our channel and stay updated with the latest news.

Next