Advertisement

ವಾರ್ಡ್‌ಗಳ ಮೂಲ ಸೌಕರ್ಯಕ್ಕೆ ಪ್ರಥಮ ಆದ್ಯತೆ: ವೀಣಾ ಭಾಸ್ಕರ್‌

11:33 PM Mar 08, 2021 | Team Udayavani |

ಕುಂದಾಪುರ: ಇಲ್ಲಿನ ಪುರಸಭೆಯ 2021-22ನೇ ಸಾಲಿನ 52.65 ಲಕ್ಷ ರೂ. ಉಳಿತಾಯ ಬಜೆಟನ್ನು ಕುಂದಾಪುರ ಪುರಸಭಾಧ್ಯಕ್ಷೆ ವೀಣಾ ಭಾಸ್ಕರ್‌ ಮೆಂಡನ್‌ ಮಂಡಿಸಿದರು.

Advertisement

ಬಜೆಟ್‌ನಲ್ಲಿ ಮುಖ್ಯವಾಗಿ ಮೂಲಭೂತ ಸೌಕರ್ಯಗಳಿಗೆ ಪ್ರಥಮ ಆದ್ಯತೆ ನೀಡಲಾಗಿದ್ದು, ಉಳಿದಂತೆ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ ಕೈಗೊಳ್ಳ ಬೇಕಾದ ಪ್ರಸ್ತಾವನೆಗಳ ಕುರಿತಂತೆ ಬಜೆಟ್‌ನಲ್ಲಿ ಅನು ದಾನ ವಿನಿಯೋಗಿಸಲಾಗಿದೆ ಎಂದು ಪುರ ಸಭಾಧ್ಯಕ್ಷರು ಮಾಹಿತಿ ನೀಡಿದರು.

15ನೇ ಹಣಕಾಸು: 1.68 ಕೋ.ರೂ.
ಪ್ರಸಕ್ತ ವರ್ಷದಲ್ಲಿ ಎಸ್‌ಎಫ್‌ಸಿ ಯೋಜನೆಯಡಿ 37.37 ಲಕ್ಷ ರೂ. ಬರಲಿದ್ದು, 15ನೇ ಹಣಕಾಸು ಯೋಜನೆಯಡಿ 1.68 ಕೋ.ರೂ. ಬರಲಿದೆ. ಇದರಲ್ಲಿ ಬೀದಿ ದೀಪ, ರಸ್ತೆ ಅಭಿವೃದ್ಧಿ, ರಸ್ತೆಯ ಚರಂಡಿಗಳ ನಿರ್ಮಾಣ, ಕುಡಿಯುವ ನೀರು ಸರಬರಾಜು, ತ್ಯಾಜ್ಯ ವಿಲೇವಾರಿ, ಉದ್ಯಾನವನ ಅಭಿವೃದ್ಧಿ, ಶ‌¾ಶಾನ ಅಭಿವೃದ್ಧಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಮೀಸಲಿರಿಸಲಾಗಿದೆ.
ಪುರಸಭೆ ಎಸ್‌ಎಫ್‌ಸಿ ಯೋಜನೆ ಹಾಗೂ ಪುರಸಭಾ ನಿಧಿಯಡಿ 12.32 ಲಕ್ಷ ರೂ. ಅನ್ನು ಎಸ್‌ಸಿ, ಎಸ್‌ಟಿ ಅಭಿವೃದ್ಧಿಗೆ, 3.70 ಲಕ್ಷ ರೂ. ಅನ್ನು ಇತರ ಬಡ ಜನರ ಅಭಿವೃದ್ಧಿಗೆ ಹಾಗೂ 2.56 ಲಕ್ಷ ರೂ. ಅಂಗವಿಕಲರ ಅಭಿವೃದ್ಧಿಗಾಗಿ ಮೀಸಲಿರಿಸಲಾಗಿದೆ. ಈ ಯೋಜನೆಯಡಿ ಮಂಜೂರಾಗುವ ಅನುದಾನದಲ್ಲಿ ಶೇ. 60ರಷ್ಟು ವಿವಿಧ ಕಾಮಗಾರಿಗಳಿಗೆ ಹಾಗೂ ಶೇ.40 ರಷ್ಟು ವಿವಿಧ ಯೋಜನೆಯಡಿ ಫಲಾನುಭವಿಗಳ ಅಭಿವೃದ್ಧಿಗೆ ಬಿಡುಗಡೆ ಮಾಡಲಾಗುವುದು ಎಂದು ಪುರಸಭಾಧ್ಯಕ್ಷರು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಕೆ. ಗೋಪಾಲಕೃಷ್ಣ ಶೆಟ್ಟಿ, ಉಪಾಧ್ಯಕ್ಷ ಸಂದೀಪ್‌ ಖಾರ್ವಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಸ್ವತ್ಛ ಭಾರತ: 10 ಲಕ್ಷ ರೂ.
ಪುರಸಭೆ ಸ್ವತ್ಛ ಭಾರತ ಮಿಷನ್‌ (ಎಸ್‌ಬಿಎಂ) ಯೋಜನೆಯಡಿ 10 ಲಕ್ಷ ರೂ. ಅನುದಾನ ಬರಲಿದ್ದು, ಇದನ್ನು ವಿವಿಧ ಕಾಮಗಾರಿ ಗಳಿಗೆ ವಿನಿ ಯೋಗಿಸ ಲಾಗುವುದು. ಇದಲ್ಲದೆ ಸಾರ್ವಜನಿಕರಿಂದ ವಿವಿಧ ತೆರಿಗೆ ಹಣ ಸಂಗ್ರಹ ಮಾಡಿ, ಇನ್ನಷ್ಟು ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಲಾಗುವುದು.
– ವೀಣಾ ಭಾಸ್ಕರ್‌ ಮೆಂಡನ್‌ ಕುಂದಾಪುರ ಪುರಸಭಾಧ್ಯಕ್ಷೆ

1.68 ಕೋ.ರೂ.
ಬೀದಿದೀಪ, ರಸ್ತೆ ಅಭಿವೃದ್ಧಿ, ರಸ್ತೆಯ ಚರಂಡಿಗಳ ನಿರ್ಮಾಣ, ಕುಡಿಯುವ ನೀರು ಸರಬರಾಜು, ತ್ಯಾಜ್ಯ ವಿಲೇವಾರಿ, ಉದ್ಯಾನವನ ಅಭಿವೃದ್ಧಿ, ಶ್ಮಶಾನ ಅಭಿವೃದ್ಧಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಅನುದಾನ ಮೀಸಲು

Advertisement
Advertisement

Udayavani is now on Telegram. Click here to join our channel and stay updated with the latest news.

Next