Advertisement

‘ಕ್ಷೇತ್ರದ ಸಾಮರಸ್ಯಕ್ಕೆ ಆದ್ಯತೆ’

10:30 AM May 17, 2018 | Team Udayavani |

ಸೋಲಿಗೆ ಕಾರಣವಾದ ಐದು ಅಂಶಗಳು?
ಜನತಾದಳ ಮತ್ತು ಸಿಪಿಐಎಂ ನಿರೀಕ್ಷಿತ ಪ್ರಮಾಣ ಮತಗಳಿಕೆಯಲ್ಲಿ ವಿಫಲವಾದದ್ದು, 11 ವರ್ಷ ಆಡಳಿತ ಮಾಡಿದ ಸ್ಥಳೀಯ ಶಾಸಕರ ಧನ ಬಲದ ಪ್ರಭಾವ, ಕ್ಷೇತ್ರದಲ್ಲಿ ಅಲ್ಪಸಂಖ್ಯಾಕ ಮತ ಹೆಚ್ಚು, ಅಲ್ಪಸಂಖ್ಯಾಕ ಮತಗಳು ನಿರೀಕ್ಷೆಗೂ ಮೀರಿ ಮತದಾನ ನಡೆದು ಧ್ರುವೀಕರಣವಾದ್ದರಿಂದ, ಮತದಾರರು ಈಬಾರಿ ಬದಲಾವಣೆ ಮಾಡುತ್ತಾರೆ ಎನ್ನುವ ಅತೀ ವಿಶ್ವಾಸ, ಆಡಳಿತ ಪಕ್ಷವಾದ್ದರಿಂದ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಿಡಿತದಿಂದ ನಿರೀಕ್ಷೆಗೆ ಮುಟ್ಟಲು ಸಾಧ್ಯವಾಗಿಲ್ಲ.

Advertisement

ಮುಂದಿನ ರಾಜಕೀಯ ಭವಿಷ್ಯವೇನು ?
ಕ್ಷೇತ್ರದಲ್ಲಿ ಪಕ್ಷವನ್ನು ಇನ್ನಷ್ಟು ಸಂಘಟಿಸುವ ನಿಟ್ಟಿನಲ್ಲಿ ಕಾರ್ಯ ಯೋಜನೆ, ಮುಂದಿನ ಉಳ್ಳಾಲ ನಗರಸಭೆ ಮತ್ತು ಲೋಕಸಭಾ ಚುನಾವಣೆಗೆ ಈಗಿನಿಂದಲೇ ತಯಾರಿ ಪಕ್ಷದ ಕಾರ್ಯಕರ್ತರನ್ನು ಇನ್ನಷ್ಟು ಸಂಘಟಿಸಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸುವುದು.

ಗೆದ್ದವರು ಕ್ಷೇತ್ರದ ಯಾವ ಸಮಸ್ಯೆ ಮೊದಲು ಬಗೆಹರಿಸಬೇಕೆಂದು ನಿರೀಕ್ಷಿಸುವಿರಿ?
ಈಗಿನ ಶಾಸಕರು 11 ವರ್ಷಗಳಿಂದ ಶಾಸಕರಾಗಿದ್ದು, ಯಾವುದೇ ನಿರೀಕ್ಷೆಗಳಿಲ್ಲ. ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ ಒತ್ತಡ ಹಾಕಿ ಕ್ಷೇತ್ರಕ್ಕೆ ಬಹುಗ್ರಾಮ, ಕುಡಿಯುವ ನೀರು, ಕಡಲ್ಕೊರೆತ ಸೇರಿದಂತೆ ಕ್ಷೇತ್ರದಲ್ಲಿ ಸಾಮರಸ್ಯಕ್ಕೆ ಆದ್ಯತೆ ನೀಡುತ್ತೇನೆ.

Advertisement

Udayavani is now on Telegram. Click here to join our channel and stay updated with the latest news.

Next